ನಟಿ ಅಮೂಲ್ಯ ಮೊದಲ ರೀಲ್ಸ್ ನೋಡಿದ್ರ? ಗ್ಲಾಮರಸ್ ಲುಕ್‌ನಲ್ಲಿ ಡ್ಯಾನ್ಸ್!
ಸ್ಯಾಂಡಲ್ವುಡ್ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಸದ್ಯ ಕೌಟುಂಬಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ. ಮದುವೆ ಬಳಿಕ ಸಿನಿಮಾರಂಗದಿಂದ ಅಮೂಲ್ಯ ಅಂತರ ಕಾಯ್ದು ಕೊಂಡಿದ್ದಾರೆ. ಇನ್ನು ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಅಮೂಲ್ಯ ಸುದ್ದಿ ಆಗಿದ್ದರು.
ನಟಿ ಅಮೂಲ್ಯ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿ ಇರುತ್ತಾರೆ. ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹತ್ತಿರ ಆಗಿದ್ದಾರೆ. ಹಾಗಾಗಿ ತಮ್ಮ ಜೀವನದ ಹಲವು ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಮೂಲ್ಯ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.
ಇದೀಗ ನಟಿ ಅಮೂಲ್ಯ ತಮ್ಮ ಹೊಸ ಲುಕ್, ಜೊತೆಗೆ ಒಂದೆರಡು ಹೆಜ್ಜೆಯನ್ನೂ ಹಾಡಿದ್ದಾರೆ. ನಟಿ ಅಮೂಲ್ಯ ತಮ್ಮ ಮೊದಲ ರೀಲ್ಸ್ ಹಂಚಿಕೊಂಡಿದ್ದಾರೆ. ಇನ್ನು ಮತ್ತಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ಅಮೂಲ್ಯ ಮೊದಲ ರೀಲ್ಸ್!
ನಟಿ ಅಮೂಲ್ಯ ಮಕ್ಕಳಾದ ಬಳಿಕ ತಮ್ಮ ಇತ್ತೀಚೆಗಿನ ಫೋಟೋವನ್ನು ಹಂಚಿಕೊಂಡಿದ್ದರು. ಈಗ ವಿಡಿಯೋ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಮೂಲ್ಯ ತಮ್ಮ ಮೊದಲ ರೀಲ್ಸ್ ಹಂಚಿಕೊಂಡಿದ್ದಾರೆ. ಇನ್ನು ಅಮೂಲ್ಯ ಈ ವಿಡಿಯೋಗೆ ಭಾರಿ ಮೆಚ್ಚಿಗೆ ವ್ಯಕ್ತವಾಗಿದೆ. ಅಮೂಲ್ಯ ಗ್ಲಾಮರಸ್ ಲುಕ್ ನೋಡಿದ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಂಗ ದಾವಣಿ ತೊಟ್ಟು ಅಮೂಲ್ಯ ಹೆಜ್ಜೆ ಹಾಕಿದ್ದಾರೆ.
ಗುರು ಶಿಷ್ಯರು ಹಾಡಿಗೆ ರೀಲ್ಸ್!
ನಟಿ ಅಮೂಲ್ಯ ಶರಣ್ ಮತ್ತು ನಿಶ್ವಿಕ ನಾಯ್ಡು ಅಭಿನಯದ 'ಗುರು ಶಿಷ್ಯರು' ಚಿತ್ರದ ಹಾಡಿಗೆ ರೀಲ್ಸ್ ಮಾಡಿದ್ದಾರೆ. 'ಆಣೆ ಮಾಡಿ ಹೇಳುತೀನಿ' ಎನ್ನುವ ಹಾಡಿಗೆ ಮೊದಲ ಬಾರಿಗೆ ರೀಲ್ಸ್ ಮಾಡಿ ಹಂಚಿಕೊಂಡಿದ್ದಾರೆ. ನನ್ನ ಮೊದಲ ರೀಲ್ಸ್‌ಗೆ ನನಗೆ ತುಂಬಾ ಇಷ್ಟವಾದ ಹಾಡು. ನಿರ್ಮಾಪಕ ತರುಣ್ ಸುಧೀರ್ ಸೇರಿದಂತೆ, ಇಡೀ ಚಿತ್ರತಂಡಕ್ಕೆ ದೊಡ್ಡ ಯಶಸ್ಸು ಸಿಗಲಿ ಎಂದು ತಮ್ಮ ಪೋಸ್ಟ್‌ಗೆ ಬರೆದುಕೊಂಡಿದ್ದಾರೆ.

ಫೋಟೋ ಹಂಚಿಕೊಂಡಿದ್ದ ಅಮೂಲ್ಯ!
ಸಿನಿಮಾ ನಟಿಯರು ಮದುವೆ, ಮಕ್ಕಳ ಅಂತ ಬ್ಯುಸಿ ಆದ ಬಳಿಕ. ಎಷ್ಟೋ ವರ್ಷಗಳು ಕಾಣೆಯಾಗಿ ಬಿಡುತ್ತಾರೆ. ಮತ್ಯಾವಾಗೋ ಎಂಟ್ರಿ ಕೊಡ್ತಾರೆ. ಆದರೆ ನಟಿ ಅಮೂಲ್ಯ ಹೆಚ್ಚು ಸಮಯ ತೆಗೆದುಕೊಂಡಿಲ್ಲ. ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ ಈಗಲೂ ಹಾಗೆ ಇದ್ದಾರೆ. ಗ್ಲಾಮರ್ ಗೊಂಬೆಯಂತೆ ಕಾಣಿಸುವ ಅಮೂಲ್ಯ ಹೊಸ ಫೋಟೋಶೂಟ್ ಮಾಡಿಸಿ, ಫೋಟೊಗಳನ್ನು ಹಂಚಿಕೊಂಡಿದ್ದರು.

ಅಮೂಲ್ಯ ಗ್ಲಾಮರ್ ಲುಕ್!
ಹಸಿರು ಬಣ್ಣದ ಡ್ರೆಸ್‌ಕೊಟ್ಟು ಅಮುಲ್ಯ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇನ್ನು ಅಮೂಲ್ಯ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮಕ್ಕಳಾದ ಬಳಿಕವೂ ಇಷ್ಟೋಂದು ಗ್ಲಾಮರಸ್ ಆಗಿ ಕಾಣಿಸುವ ಅಮೂಲ್ಯ ಕಮ್ ಬ್ಯಾಕ್ ಯಾವಾಗ ಎಂದು ಪ್ರಶ್ನೆ ಮಾಡುತ್ತಾ ಇದ್ದಾರೆ. ಇನ್ನು ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಅಮೂಲ್ಯ ಇನ್ನೂ ಕೆಲವು ವರ್ಷ ಮಕ್ಕಳ ಪೋಷಣೆಯಲ್ಲೇ ತೊಡಗಿರಬೇಕಾಗುತ್ತದೆ. ಆ ಬಳಿಕ ಅಮೂಲ್ಯ ಮತ್ತೆ ಬಣ್ಣ ಹಚ್ಚ ಬಹುದು.


Click it and Unblock the Notifications











