ಅಮೂಲ್ಯ ಮಕ್ಕಳ ವಿಶೇಷ ಫೋಟೊ ಶೂಟ್!
ಅವಳಿ ಮಕ್ಕಳಿಗೆ ಜನ್ಮ ನೀಡಿರುವ ನಟಿ ಅಮೂಲ್ಯ ತಮ್ಮ ಮಕ್ಕಳನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಕಲರ್‌ಫುಲ್ ಫೋಟೊಶೂಟ್ ಮಾಡಿಸಿ, ಮುದ್ದಿನ ಮಕ್ಕಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ನಿಮ್ಮೆಲ್ಲರ ಶುಭಾರ್ಶೀವಾದ ಇರಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದರು.
ಹಸಿರು ಬಣ್ಣದ ಲಾಂಗ್ ಗೌನ್‌ನಲ್ಲಿ ಅಮೂಲ್ಯ ಫೋಟೊಶೂಟ್‌ನಲ್ಲಿ ಮಿಂಚಿದ್ದರು. ಅಮೂಲ್ಯ ಜೊತೆ ಇಬ್ಬರು ಮುದ್ದು ಮಕ್ಕಳು ಕೂಡ ಮುದ್ದಾಗಿ ಮಿಂಚಿದ್ದರು. ಅಮೂಲ್ಯ ಮತ್ತು ಮಕ್ಕಳಿಗೆ ಅಭಿಮಾನಿಗಳು ಮತ್ತು ಚಿತ್ರೋದ್ಯಮದ ಸ್ನೇಹಿತರಿಂದ ಶುಭಾಷಯ ಹರಿದು ಬಂದಿತ್ತು.
ಈಗ ಗಣೇಶ ಹಬ್ಬದ ಪ್ರಯುಕ್ತ ಮತ್ತೆ ತಮ್ಮ ಮಕ್ಕಳ ಫೋಟೋ ಶೂಟ್ ಮಾಡಿಸಿದ್ದಾರೆ. ವಿಶೇಷ ಕಾನ್ಸೆಪ್ಟ್ ಮೂಲಕ ಮತ್ತೇ ಮಕ್ಕಳ ಫೊಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಕ್ಕಳ ಪಾಲನೆಯಲ್ಲಿ ಬ್ಯುಸಿ ಅಮೂಲ್ಯ!
ಮಕ್ಕಳ ಲಾಲನೆ ಪಾಲನೆಯಲ್ಲಿ ಅಮೂಲ್ಯ ಕಳೆದ 5 ತಿಂಗಳಿನಿಂದ ನಟಿ ಅಮೂಲ್ಯ ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಹೆರಿಗೆಯ ನಂತರ ಸ್ಲಿಮ್ ಆಗಿರುವ ಐಸೂ ತಮ್ಮ ಫೋಟೋಗಳನ್ನು ಆಗಾಗ್ಗೆ ಶೇರ್ ಮಾಡುತ್ತಿದ್ದರು. ಇದೀಗ ಮಕ್ಕಳ ಜೊತೆ ಮತ್ತೊಂದು ಫೋಟೊಶೂಟ್ ಮಾಡಿಸಿದ್ದಾರೆ. ಮೃದುವಾದ ಬಟ್ಟೆಯಲ್ಲಿ ಮಕ್ಕಳನ್ನು ಸುತ್ತಿ ಮಾಡಿಸಿರುವ ಕ್ಲಿಕ್ಕಿಸಿರುವ ಫೋಟೊಗಳು ಸಖತ್ ವೈರಲ್ ಆಗಿದೆ.

ಅಮೂಲ್ಯ ಮಕ್ಕಳ ಫೋಟೋ ಶೂಟ್!
ನಟಿ ಅಮೂಲ್ಯ ಮಕ್ಕಳಿಗೆ 6 ತಿಂಗಳು ತುಂಬಿದೆ. ಹಾಗಾಗಿ ತಮ್ಮ ಅವಳಿ ಮಕ್ಕಳ ಅವಳಿ ಫೋಟೋ ಶೂಟ್ ಮಾಡಿಸಿದ್ದಾರೆ. ಇಬ್ಬರು ಮಕ್ಕಳಿಗೆ ಒಂದೇ ರೀತಿಯ ಕಾಸ್ಟ್ಯೂಂ ಹಾಕಿ. ಸುತ್ತಲೂ ಪುಸ್ತಕ, ಸ್ಲೇಟ್‌ಗಳನ್ನು ಇಟ್ಟು ಫೋಟೋ ಶೂಟ್ ಮಾಡಿದ್ದಾರೆ. ಈ ಫೋಟೋಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಬಾಲ ನಟಿಯಾಗಿ ಬಂದ ಅಮೂಲ್ಯ!
ಮಕ್ಕಳ ಜೊತೆ ಅಣ್ಣಮ್ಮ ದರ್ಶನ ಮಾಡಿದ ಐಸೂ ಕೆಲವೇ ದಿನಗಳ ಹಿಂದೆ ನಟಿ ಅಮೂಲ್ಯ ಪತಿ ಜಗದೀಶ್ ಚಂದ್ರ ಹಾಗೂ ಅವಳಿ ಮಕ್ಕಳ ಜೊತೆ ಗಾಂಧಿನಗರದಲ್ಲಿರುವ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಅಮೂಲ್ಯ 'ಚೆಲುವಿನ ಚಿತ್ತಾರ' ಚಿತ್ರದ ಐಸೂ ಪಾತ್ರದಿಂದ ಅಭಿಮಾನಿಗಳ ಮನಗೆದ್ದರು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡ ನಟಿ 2017ರಲ್ಲಿ ಜಗದೀಶ್ ಚಂದ್ರ ಕೈ ಹಿಡಿದಿದ್ದರು.

ಅಮೂಲ್ಯ ಕಮ್ ಬ್ಯಾಕ್ ಮಾಡ್ತಾರಾ?
ನಟಿ ಅಮೂಲ್ಯ ಮದುವೆ ನಂತರ ಸಿನಿಮಾಗಳಲ್ಲಿ ನಟಿಸಲೇ ಇಲ್ಲ. 'ಮುಗುಳುನಗೆ' ಚಿತ್ರದಲ್ಲಿ ಕೊನೆಯ ಬಾರಿಗೆ ಅಮೂಲ್ಯ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆದರೆ ನೆಚ್ಚಿನ ನಟಿ ಸಿನಿಮಾಗಳಲ್ಲಿ ನಟಿಸಬೇಕು ಅನ್ನುವುದು ಅಭಿಮಾನಿಗಳ ಆಸೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪದೇ ಪದೇ ಮನವಿ ಮಾಡುತ್ತಲೇ ಇರುತ್ತಾರೆ. ಆದರೆ ಐಸೂ ಮಾತ್ರ ಮತ್ತೆ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಯೋಚಿಸಿದಂತೆ ಕಾಣುತ್ತಿಲ್ಲ.


Click it and Unblock the Notifications











