Don't Miss!
- News
Breaking: ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ
- Finance
ಜೂ.29ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Sports
ಟಿ20 ವಿಶ್ವಕಪ್ ಭಾರತದ ಸಂಭಾವ್ಯ ತಂಡದಲ್ಲಿ ಈ ಸ್ಟಾರ್ ವೇಗಿಗೆ ಸ್ಥಾನವಿಲ್ಲ; ವರದಿ
- Lifestyle
ಗರ್ಲ್ಸ್ ಪುರುಷರ ಈ ಸೀಕ್ರೆಟ್ ತಿಳಿದುಕೊಂಡ್ರೆ ರಿಲೇಷನ್ಶಿಪ್ನಲ್ಲಿ ಸಮಸ್ಯೆನೇ ಬರಲ್ಲ
- Automobiles
ಸುರಕ್ಷತಾ ಮಾನದಂಡಗಳನ್ನು ರಾಜಿ ಮಾಡಿಕೊಳ್ಳಲು ಕಾರು ಕಂಪನಿಗಳ ಸಭೆ ಕರೆದ ನಿತಿನ್ ಗಡ್ಕರಿ
- Education
IWST Recruitment 2022 : 13 ಪ್ರಾಜೆಕ್ಟ್ ಫೆಲೋ ಮತ್ತು ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ಮಕ್ಕಳ ಜೊತೆ ಅಣ್ಣಮ್ಮ ದೇವಸ್ಥಾನದಲ್ಲಿ ಹರಕೆ ತೀರಿಸಿದ ನಟಿ ಅಮೂಲ್ಯ!
ಸ್ಯಾಂಡಲ್ವುಡ್ನಲ್ಲಿ ಗೋಲ್ಡನ್ ಕ್ವೀನ್ ಅಂತಲೇ ಕರೆಸಿಕೊಳ್ಳುವ ನಟಿ ಅಮೂಲ್ಯ ಸದ್ಯ ಕೌಟುಂಬಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ. ಮದುವೆ ಬಳಿಕ ಸಿನಿಮಾರಂಗದಿಂದ ಅಮೂಲ್ಯ ದೂರಾಗಿದ್ದಾರೆ. ಇನ್ನು ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಅಮೂಲ್ಯ ಸುದ್ದಿ ಆಗಿದ್ದರು.
ನಟಿ ಅಮೂಲ್ಯ ಸಾಮಾಜಿಕ ಜಾಲತಣದಲ್ಲಿ ಸದಾ ಸಕ್ರಿಯವಾಗಿ ಇರುತ್ತಾರೆ. ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹತ್ತಿರ ಆಗಿದ್ದಾರೆ. ಹಾಗಾಗಿ ತಮ್ಮ ಜೀವನದ ಹಲವು ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲೇ ಅಮೂಲ್ಯ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.
ಅವಳಿ
ಗಂಡು
ಮಕ್ಕಳಿಗೆ
ಜನ್ಮ
ನೀಡಿದ
ಗೋಲ್ಡನ್
ಕ್ವೀನ್
ಅಮೂಲ್ಯ
ಜಗದೀಶ್
ಮಕ್ಕಳಾದ ಬಳಿಕ ನಟಿ ಅಮೂಲ್ಯ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಈಗ ಮಕ್ಕಳ ಜೊತೆಗೆ ಪ್ರತ್ಯಕ್ಷ ಆಗಿದ್ದಾರೆ. ದೇವಸ್ಥಾನದಲ್ಲಿ ಮಕ್ಕಳ ಜೊತೆಗೆ ನಟಿ ಅಮೂಲ್ಯ ದಂಪತಿ ಕಾಣಿಸಿಕೊಂಡಿದ್ದಾರೆ.

ಅವಳಿ ಮಕ್ಕಳ ಜೊತೆಗೆ ಕಾಣಿಸಿಕೊಂಡ ಅಮೂಲ್ಯ!
ನಟಿ ಅಮೂಲ್ಯ ಮಕ್ಕಳ ಫೊಟೋಗಳನ್ನು ಯಾವಾಗ ಹಂಚಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಾ ಇದ್ದಾರೆ. ಈಗ ಮೊದಲ ಬಾರಿಗೆ ಅಮೂಲ್ಯ ಮತ್ತು ಮಕ್ಕಳು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಕುಟುಂಬದ ಜೊತೆಗೆ ಅಮೂಲ್ಯ ದಂಪತಿ ಮತ್ತು ಮಕ್ಕಳ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟಿ
ಅಮೂಲ್ಯ
ಅದ್ದೂರಿ
ಪಾರ್ಟಿ:
ಹರಿದು
ಬಂತು
ಸ್ಯಾಂಡ್ವುಡ್
ತಾರೆಯರ
ದಂಡು!

ಅಣ್ಣಮ್ಮ ದೇವಸ್ಥಾನದಲ್ಲಿ ಅಮೂಲ್ಯ ಹರಕೆ!
ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ಇರುವ ಅಣ್ಣಮ್ಮ ದೇವಸ್ಥಾನಕ್ಕೆ, ನಟಿ ಅಮೂಲ್ಯ ಭೇಟಿ ನೀಡಿದ್ದಾರೆ. ಅಮೂಲ್ಯ ಪತಿ ಮತ್ತು ಮಕ್ಕಳ ಜೊತೆಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಹರಕೆ ತೀರಿಸಿದ್ದಾರೆ. ಮಗು ಆದ ಬಳಿಕ ಇದೆ ಮೊದಲ ಬಾರಿಗೆ ಅಮೂಲ್ಯ ಹೊರಗೆ ಕಾಣಿಸಿಕೊಂಡಿದ್ದಾರೆ. ಇನ್ನು ಮಕ್ಕಳ ಜೊತೆಗೆ ಕಾಣಿಸಿಕೊಂಡಿದ್ದು ಮಾತ್ರ ವಿಶೇಷವಾಗಿತ್ತು.

ನಟಿಯಾಗಿ ಯಶಸ್ಸು ಕಂಡ ಅಮೂಲ್ಯ!
'ಚಲುವಿನ ಚಿತ್ತಾರ' ಚಿತ್ರದ ಮೂಲಕ ನಾಯಕಿಯಾದ ನಟಿ ಅಮೂಲ್ಯ, ಕನ್ನಡ ಚಿತ್ರರಂಗದ ಗೋಲ್ಡನ್ ಕ್ವೀನ್ ಎಂದು ಖ್ಯಾತಿ ಗಳಿಸಿದ್ದಾರೆ. ಇನ್ನು ಬಾಲ ನಟಿಯಾಗಿಯೂ ಅಮೂಲ್ಯ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಾಯಕಿ ಆದ ಬಳಿಕವೂ ಸಾಲು, ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಗುಡ್
ನ್ಯೂಸ್
ಕೊಟ್ಟ
ನಟಿ
ಅಮೂಲ್ಯ:
ಸಂತಸದಲ್ಲಿ
ಕುಟುಂಬ!

ನಟಿ ಅಮೂಲ್ಯ ಕಮ್ಬ್ಯಾಕ್ ಯಾವಾಗ?
2017ರಲ್ಲಿ ಜಗದೀಶ್ ಅವರನ್ನು ಮದುವೆಯಾದ ಅಮೂಲ್ಯಾ, ಚಿತ್ರಗಳಲ್ಲಿ ನಟಿಸುವುದನ್ನು ನಿಲ್ಲಿಸಿದ್ದಾರೆ. ಚೈತ್ರದ ಚಂದ್ರಮ, ಶ್ರಾವಣಿ ಸುಬ್ರಮಣ್ಯಂ, ಗಜಕೇಸರಿ ಸೇರಿದಂತೆ ಇನ್ನು ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಅಮೂಲ್ಯಾ ಮುಂದಿನ ದಿನಗಳಲ್ಲಿ ಚಿತ್ರರಂಗಕ್ಕೆ ಬರುತ್ತಾರಾ ನೋಡಬೇಕಿದೆ.