For Quick Alerts
  ALLOW NOTIFICATIONS  
  For Daily Alerts

  ತೆನೆ ಇಳಿಸಿ ಕಮಲ ಮುಡಿದ ನಟಿ ಅಮೂಲ್ಯ

  |

  ಜೆಡಿಎಸ್ ಮುಖಂಡರಾಗಿದ್ದ ನಟಿ ಅಮೂಲ್ಯ ಅವರ ಮಾವ ಜಿ.ಎಚ್.ರಾಮಚಂದ್ರ ಅವರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಮಾವ ಹಾಗೂ ಪತಿ ಜಗದೀಶ್ ಜೊತೆಗೆ ಅಮೂಲ್ಯ ಸಹ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

  ರಾಮಚಂದ್ರ ಅವರ ನಿವಾಸದಲ್ಲಿಯೇ ನಡೆದ ಸರಳ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಸಮ್ಮುಖದಲ್ಲಿ ನಟಿ ಅಮೂಲ್ಯ, ಪತಿ ಜಗದೀಶ್, ಮಾವ ರಾಮಚಂದ್ರ ಅವರುಗಳು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

  ರಾಮಚಂದ್ರ ಅವರು ಜೆಡಿಎಸ್‌ನ ಮುಖಂಡರಾಗಿದ್ದು, ಆರ್‌ಆರ್‌ ನಗರದಲ್ಲಿ ಜೆಡಿಎಸ್‌ನಿಂದ ಚುನಾವಣೆಗೆ ಸಹ ಸ್ಪರ್ಧಿಸಿದ್ದರು. ಆಗ ನಟಿ ಅಮೂಲ್ಯ ಅವರು ಮಾವನ ಪರವಾಗಿ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

  ಆದರೆ ನಂತರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ರಾಮಚಂದ್ರ ಅವರು ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡರು. ಕೊನೆಗೆ ನಿನ್ನೆ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

  ಮದುವೆಯ ಬಳಿಕ ಸಿನಿಮಾಗಳಿಂದ ದೂರ ಉಳಿದಿರುವ ನಟಿ ಅಮೂಲ್ಯ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಪತಿಯೊಂದಿಗೆ ಸೇರಿ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸಾಕಷ್ಟು ಸಮಾಜಿಕ ಕಾರ್ಯಗಳನ್ನು ಅವರು ಮಾಡಿದ್ದರು.

  ಚಿರು ನನಗೆ 10 ಸಾವಿರ ಆಡಿಯೋ ಮೆಸೇಜ್ ಕಳಿಸಿದ್ದಾರೆ | Chiranjeevi Sarja | Pratham | Filmibeat Kannada

  ಆರ್‌ಆರ್‌ ನಗರ ಕ್ಷೇತ್ರದ ಉಪಚುನಾವಣೆ ನಡೆಯುತ್ತಿದ್ದು, ಮುನಿರತ್ನ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಪರವಾಗಿ ಅಮೂಲ್ಯ ಅವರು ಪ್ರಚಾರಕ್ಕೆ ಇಳಿಯುತ್ತಾರೆಯೇ ಎಂಬುದು ಕಾದು ನೋಡಬೇಕಿದೆ.

  English summary
  : Actress Amulya joined BJP. Her husband Jagadeesh and father in law Ramachandra also joined BJP.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X