For Quick Alerts
  ALLOW NOTIFICATIONS  
  For Daily Alerts

  ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಅವಳಿ ಮಕ್ಕಳನ್ನು ಪರಿಚಯಿಸಿದ ನಟಿ ಅಮೂಲ್ಯ!

  |

  ಶಿವರಾತ್ರಿ ಹಬ್ಬದ ದಿನವೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದ ನಟಿ ಅಮೂಲ್ಯ ಇದೀಗ ಮಕ್ಕಳನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಕಲರ್‌ಫುಲ್ ಫೋಟೊಶೂಟ್ ಮಾಡಿಸಿ, ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ನಮ್ಮ ಮುದ್ದಿನ ಮಕ್ಕಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ನಿಮ್ಮೆಲ್ಲರ ಶುಭಾರ್ಶೀವಾದ ಇರಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

  ಮಕ್ಕಳ ಜೊತೆಗೆ ನಟಿ ಅಮೂಲ್ಯ ಹಾಗೂ ಪತಿ ಜಗದೀಶ್ ಚಂದ್ರ ಕೂಡ ಫೋಟೊಶೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವಳಿ ಮಕ್ಕಳನ್ನು ಹಿಡಿದುಕೊಂಡು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೊಗಳು ಈಗ ಸಖತ್ ವೈರಲ್ ಆಗಿದ್ದು, ಐಸೂ ಅಭಿಮಾನಿಗಳು ಲೈಕ್ಸ್, ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವೆರೈಟಿ ವೆರೈಟಿ ಥೀಮ್‌ನಲ್ಲಿ ಬಹಳ ಅದ್ಧೂರಿಯಾಗಿ ಫೋಟೊಶೂಟ್ ಮಾಡಿಸಿದ್ದಾರೆ.

  ನಟಿ ಅಮೂಲ್ಯ ಮೊದಲ ರೀಲ್ಸ್ ನೋಡಿದ್ರ? ಗ್ಲಾಮರಸ್ ಲುಕ್‌ನಲ್ಲಿ ಡ್ಯಾನ್ಸ್!ನಟಿ ಅಮೂಲ್ಯ ಮೊದಲ ರೀಲ್ಸ್ ನೋಡಿದ್ರ? ಗ್ಲಾಮರಸ್ ಲುಕ್‌ನಲ್ಲಿ ಡ್ಯಾನ್ಸ್!

  ಹಸಿರು ಬಣ್ಣದ ಲಾಂಗ್ ಗೌನ್‌ನಲ್ಲಿ ಅಮೂಲ್ಯ ಫೋಟೊಶೂಟ್‌ನಲ್ಲಿ ಮಿಂಚಿದ್ದಾರೆ. ನಟಿಯರಾದ ಸೋನು ಗೌಡ, ಪ್ರಿಯಾಂಕ ಉಪೇಂದ್ರ, ಹಿರಿಯ ನಟಿ ಶೃತಿ, ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ, ವೈಷ್ಣವಿ ಸೇರಿದಂತೆ ಸಾಕಷ್ಟು ಜನ ಸೆಲೆಬ್ರೆಟಿಗಳು 'ಸೋ ಕ್ಯೂಟ್' ಎಂದು ಅಮೂಲ್ಯ ಅವಳಿ ಮಕ್ಕಳನ್ನು ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.

   ಅಭಿಮಾನಿಗಳ ಮನವಿಗೆ ಸ್ಪಂದಿಸಿದ ಅಮೂಲ್ಯ

  ಅಭಿಮಾನಿಗಳ ಮನವಿಗೆ ಸ್ಪಂದಿಸಿದ ಅಮೂಲ್ಯ

  ಶಿವರಾತ್ರಿ ಹಬ್ಬದ ದಿನವೇ ನಟಿ ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅಂದಿನಿಂದಲೂ ಅಭಿಮಾನಿಗಳು ಮಕ್ಕಳ ಫೋಟೊ ಶೇರ್ ಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಲೇ ಇದ್ದರು. ಈ ಹಿಂದೆ ಮಕ್ಕಳ ಕಾಲುಗಳ ಫೋಟೊವನ್ನು ಹಂಚಿಕೊಂಡಿದ್ದರು. ಇದೀಗ ಅಭಿಮಾನಿಗಳ ಆಸೆಯಂತೆ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಫೋಟೊ ಶೇರ್ ಮಾಡಿದ್ದಾರೆ. ಮಕ್ಕಳ ಜೊತೆ ಅಮೂಲ್ಯ ನೀವು ಕೂಡ ಚೆನ್ನಾಗಿ ಇದ್ದೀರಿ ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ.

  ಮಕ್ಕಳ ಲಾಲನೆ ಪಾಲನೆಯಲ್ಲಿ ಅಮೂಲ್ಯ

  ಕಳೆದ 5 ತಿಂಗಳಿನಿಂದ ನಟಿ ಅಮೂಲ್ಯ ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಹೆರಿಗೆಯ ನಂತರ ಸ್ಲಿಮ್ ಆಗಿರುವ ಐಸೂ ತಮ್ಮ ಫೋಟೋಗಳನ್ನು ಆಗಾಗ್ಗೆ ಶೇರ್ ಮಾಡುತ್ತಿದ್ದರು. ಇದೀಗ ಮಕ್ಕಳ ಜೊತೆ ಮತ್ತೊಂದು ಫೋಟೊಶೂಟ್ ಮಾಡಿಸಿದ್ದಾರೆ. ಮೃದುವಾದ ಬಟ್ಟೆಯಲ್ಲಿ ಮಕ್ಕಳನ್ನು ಸುತ್ತಿ ಮಾಡಿಸಿರುವ ಕ್ಲಿಕ್ಕಿಸಿರುವ ಫೋಟೊಗಳು ಸಖತ್ ವೈರಲ್ ಆಗಿದೆ.

   ಮತ್ತೆ ಸಿನಿಮಾಗಳಲ್ಲಿ ಐಸೂ?

  ಮತ್ತೆ ಸಿನಿಮಾಗಳಲ್ಲಿ ಐಸೂ?

  ನಟಿ ಅಮೂಲ್ಯ ಮದುವೆ ನಂತರ ಸಿನಿಮಾಗಳಲ್ಲಿ ನಟಿಸಲೇ ಇಲ್ಲ. 'ಮುಗುಳುನಗೆ' ಚಿತ್ರದಲ್ಲಿ ಕೊನೆಯ ಬಾರಿಗೆ ಅಮೂಲ್ಯ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆದರೆ ನೆಚ್ಚಿನ ನಟಿ ಸಿನಿಮಾಗಳಲ್ಲಿ ನಟಿಸಬೇಕು ಅನ್ನುವುದು ಅಭಿಮಾನಿಗಳ ಆಸೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪದೇ ಪದೇ ಮನವಿ ಮಾಡುತ್ತಲೇ ಇರುತ್ತಾರೆ. ಆದರೆ ಐಸೂ ಮಾತ್ರ ಮತ್ತೆ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಯೋಚಿಸಿದಂತೆ ಕಾಣುತ್ತಿಲ್ಲ.

   ಮಕ್ಕಳ ಜೊತೆ ಅಣ್ಣಮ್ಮ ದರ್ಶನ ಮಾಡಿದ ಐಸೂ

  ಮಕ್ಕಳ ಜೊತೆ ಅಣ್ಣಮ್ಮ ದರ್ಶನ ಮಾಡಿದ ಐಸೂ

  ಕೆಲವೇ ದಿನಗಳ ಹಿಂದೆ ನಟಿ ಅಮೂಲ್ಯ ಪತಿ ಜಗದೀಶ್‌ ಚಂದ್ರ ಹಾಗೂ ಅವಳಿ ಮಕ್ಕಳ ಜೊತೆ ಗಾಂಧಿನಗರದಲ್ಲಿರುವ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಅಮೂಲ್ಯ 'ಚೆಲುವಿನ ಚಿತ್ತಾರ' ಚಿತ್ರದ ಐಸೂ ಪಾತ್ರದಿಂದ ಅಭಿಮಾನಿಗಳ ಮನಗೆದ್ದರು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡ ನಟಿ 2017ರಲ್ಲಿ ಜಗದೀಶ್ ಚಂದ್ರ ಕೈ ಹಿಡಿದಿದ್ದರು.

  Recommended Video

  Darshan and Puneeth Rajkumar | ದರ್ಶನ್ ಅಪ್ಪು ಸ್ನೇಹದ ಬಗ್ಗೆ ರಾಘಣ್ಣ ಮಾತು | Raghavendra Rajkumar
  English summary
  Actress Amulya Shares Her Twins Photos On Occasion Of Krishna Janmashtami

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X