ಆರ್‌ಆರ್ ನಗರದಲ್ಲಿ ಮತದಾನದ ಹಕ್ಕು ಚಲಾಯಿಸಿದ ನಟಿ ಅಮೂಲ್ಯ
ರಾಜರಾಜೇಶ್ವರಿ ನಗರ ಉಪಚುನಾವಣೆ ಹಿನ್ನೆಲೆ ಇಂದು ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ನಟಿ ಅಮೂಲ್ಯ ಅವರು ಇಂದು ಬೆಳಗ್ಗೆ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.
ಪತಿ ಜಗದೀಶ್ ಹಾಗೂ ಅತ್ತೆ-ಮಾವ ಅವರೊಂದಿಗೆ ಮತಗಟ್ಟೆಗೆ ಆಗಮಿಸಿದ ಅಮೂಲ್ಯ ಕುಟುಂಬ ಸಮೇತ ಮತದಾನ ಮಾಡಿದ್ದಾರೆ. ನಂತರ ಮಾಧ್ಯಮದವರ ಬಳಿ ಮಾತನಾಡಿದ ಅಮೂಲ್ಯ ''ಎಲ್ಲರೂ ಮತದಾನ ಹಕ್ಕನ್ನು ಚಲಾಯಿಸಿ'' ಎಂದು ವಿನಂತಿಸಿದರು.
''ಕೊರೊನಾ ವೈರಸ್ ಭೀತಿಯಿಂದ ಮತದಾನ ಮಾಡುವುದು ಕಳೆದುಕೊಳ್ಳಬೇಡಿ. ಚುನಾವಣ ಆಯೋಗ ಎಲ್ಲ ರೀತಿಯ ಮುಂಜಾಗೃತೆ ವಹಿಸಿದೆ, ಧೈರ್ಯವಾಗಿ ಬಂದ ಮತದಾನ ಮಾಡಬಹುದು'' ಎಂದು ಸಲಹೆ ನೀಡಿದ್ದಾರೆ.

''ನಮ್ಮ ಬಗ್ಗೆ ನಾವು ಜಾಗೃತಿ ವಹಿಸಬೇಕಾದ ಅನಿವಾರ್ಯತೆ ಇರುವುದರಿಂದ, ನಾವು ಸಹ ಸ್ಯಾನಿಟೈಸರ್ ತಂದಿದ್ವಿ, ಮಾಸ್ಕ್ ಧರಿಸಿದ್ದೇವೆ'' ಎಂದ ಅಮೂಲ್ಯ ತಿಳಿಸಿದರು.
ಅಂದ್ಹಾಗೆ, ಅಮೂಲ್ಯ ಅವರು ಬಿಜೆಪಿ ಕಾರ್ಯಕರ್ತೆ. ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ಪ್ರಚಾರ ಸಹ ಕೈಗೊಂಡಿದ್ದರು. ನಟ ದರ್ಶನ್ ಪ್ರಚಾರ ಮಾಡಿದ ವೇಳೆ ಅಮೂಲ್ಯ ಸಹ ಜೊತೆಯಲ್ಲಿ ಮತಯಾಚನೆ ಮಾಡಿದ್ದರು.


Click it and Unblock the Notifications











