For Quick Alerts
  ALLOW NOTIFICATIONS  
  For Daily Alerts

  ಆರ್‌ಆರ್‌ ನಗರದಲ್ಲಿ ಮತದಾನದ ಹಕ್ಕು ಚಲಾಯಿಸಿದ ನಟಿ ಅಮೂಲ್ಯ

  |

  ರಾಜರಾಜೇಶ್ವರಿ ನಗರ ಉಪಚುನಾವಣೆ ಹಿನ್ನೆಲೆ ಇಂದು ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ನಟಿ ಅಮೂಲ್ಯ ಅವರು ಇಂದು ಬೆಳಗ್ಗೆ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.

  ಪತಿ ಜಗದೀಶ್ ಹಾಗೂ ಅತ್ತೆ-ಮಾವ ಅವರೊಂದಿಗೆ ಮತಗಟ್ಟೆಗೆ ಆಗಮಿಸಿದ ಅಮೂಲ್ಯ ಕುಟುಂಬ ಸಮೇತ ಮತದಾನ ಮಾಡಿದ್ದಾರೆ. ನಂತರ ಮಾಧ್ಯಮದವರ ಬಳಿ ಮಾತನಾಡಿದ ಅಮೂಲ್ಯ ''ಎಲ್ಲರೂ ಮತದಾನ ಹಕ್ಕನ್ನು ಚಲಾಯಿಸಿ'' ಎಂದು ವಿನಂತಿಸಿದರು.

  ಹೆಸರು ಗಳಿಸಿದರೆ ನಿಮ್ಮಂತೆ ಗಳಿಸಬೇಕು; ದರ್ಶನ್ ಬಗ್ಗೆ ನಟಿ ಅಮೂಲ್ಯ ಹೀಗೆ ಹೇಳಿದ್ದೇಕೆ?ಹೆಸರು ಗಳಿಸಿದರೆ ನಿಮ್ಮಂತೆ ಗಳಿಸಬೇಕು; ದರ್ಶನ್ ಬಗ್ಗೆ ನಟಿ ಅಮೂಲ್ಯ ಹೀಗೆ ಹೇಳಿದ್ದೇಕೆ?

  ''ಕೊರೊನಾ ವೈರಸ್ ಭೀತಿಯಿಂದ ಮತದಾನ ಮಾಡುವುದು ಕಳೆದುಕೊಳ್ಳಬೇಡಿ. ಚುನಾವಣ ಆಯೋಗ ಎಲ್ಲ ರೀತಿಯ ಮುಂಜಾಗೃತೆ ವಹಿಸಿದೆ, ಧೈರ್ಯವಾಗಿ ಬಂದ ಮತದಾನ ಮಾಡಬಹುದು'' ಎಂದು ಸಲಹೆ ನೀಡಿದ್ದಾರೆ.

  ''ನಮ್ಮ ಬಗ್ಗೆ ನಾವು ಜಾಗೃತಿ ವಹಿಸಬೇಕಾದ ಅನಿವಾರ್ಯತೆ ಇರುವುದರಿಂದ, ನಾವು ಸಹ ಸ್ಯಾನಿಟೈಸರ್ ತಂದಿದ್ವಿ, ಮಾಸ್ಕ್ ಧರಿಸಿದ್ದೇವೆ'' ಎಂದ ಅಮೂಲ್ಯ ತಿಳಿಸಿದರು.

  ಅಂದ್ಹಾಗೆ, ಅಮೂಲ್ಯ ಅವರು ಬಿಜೆಪಿ ಕಾರ್ಯಕರ್ತೆ. ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ಪ್ರಚಾರ ಸಹ ಕೈಗೊಂಡಿದ್ದರು. ನಟ ದರ್ಶನ್ ಪ್ರಚಾರ ಮಾಡಿದ ವೇಳೆ ಅಮೂಲ್ಯ ಸಹ ಜೊತೆಯಲ್ಲಿ ಮತಯಾಚನೆ ಮಾಡಿದ್ದರು.

  Recommended Video

  ನನ್ನ ಪ್ಯಾಶನ್ ಗೋಸ್ಕರ ನಾನು ಏನ್ ಬೇಕಿದ್ರೂ ಮಾಡ್ತೀನಿ | Ganapathi Patil | Mukhavaada Illadavanu
  English summary
  Rajarajeshwari Nagar By Poll: Actress Amulya Voted In Rajarajeshwari Nagar constituency today.
  Tuesday, November 3, 2020, 10:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X