Don't Miss!
- Sports
Ranji Trophy 2022-23: ಹೊರಬಿದ್ದ ಮುಂಬೈ; ಕರ್ನಾಟಕ ಸೇರಿ ಕ್ವಾರ್ಟರ್ ಫೈನಲ್ ತಲುಪಿದ ಅಗ್ರ 8 ತಂಡಗಳು
- News
ಫಾರೆನ್ಸಿಕ್ ಕ್ಯಾಂಪಸ್ ಶಂಕುಸ್ಥಾಪನೆಗೆ ಆಗಮಿಸಲಿರುವ ಅಮಿತ್ ಶಾ: ಧಾರವಾಡದಲ್ಲಿ ಭಾರಿ ಬಿಗಿ ಭದ್ರತೆ
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬೇಡದ ವಿಚಾರಗಳಿಗೆ ಸಮಯ ಹಾಳು ಮಾಡಬೇಡ ಎಂದಿದ್ದರು; ರವಿ ಬೆಳಗೆರೆ ಬಗ್ಗೆ ಚೈತ್ರಾ ಕೋಟೂರ್ ಮಾತು
ಖ್ಯಾತ ಪತ್ರಕರ್ತ, ನಿರೂಪಕ, ಲೇಖಕ, ಕಾದಂಬರಿಕಾರ, ನಟ, ಕ್ರೈಂ ಡೈರಿ ಕಾರ್ಯಕ್ರಮ ನಿರೂಪಕ, ಹಾಯ್ ಬೆಂಗಳೂರು ಹಾಗೂ ಓ ಮನಸೇ ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಇನ್ನು ನೆನಪು ಮಾತ್ರ.
ರವಿ ಬೆಳಗೆರೆ ಇಂದು ಬೆಳಗ್ಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ರವಿ ಬೆಳಗೆರೆ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ರವಿ ಬೆಳಗೆರೆ ಜೊತೆ ಕಾಲ ಕಳೆದ ಬಿಗ್ ಬಾಸ್ ಸ್ಪರ್ಧಿಗಳು ಕಣ್ಣೀರಾಕುತ್ತಿದ್ದಾರೆ. ಹೌದು, ಕಳೆದ ವರ್ಷ 2019ರಲ್ಲಿ ರವಿ ಬೆಳಗೆರೆ ಕನ್ನಡ ಬಿಗ್ ಬಾಸ್ ಗೆ ಎಂಟ್ರಿ ಕೊಡುವ ಮೂಲಕ ಅಚ್ಚರಿ ಮೂಡಿಸಿದ್ದರು.
ಖ್ಯಾತ
ಪತ್ರಕರ್ತ
ರವಿ
ಬೆಳಗೆರೆ
ನಿಧನಕ್ಕೆ
ಕಂಬನಿ
ಮಿಡಿದ
ನಟ
ಸುದೀಪ್
ಬಿಗ್ ಮನೆಯಲ್ಲಿ ಕೇವಲ ಒಂದು ವಾರವಷ್ಟೆ ಇದ್ದರೂ, ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳಿಗೂ ತುಂಬಾ ಹತ್ತಿರವಾಗಿದ್ದರು. ರವಿ ಬೆಳಗೆರೆ ಜೊತೆ ಬಿಗ್ ಬಾಸ್ ಮನೆಯಲ್ಲಿದ್ದ ನಟಿ ಚೈತ್ರಾ ಕೋಟೂರ್ ರವಿ ಬೆಳಗೆರೆ ಅವರ ನೆನಪನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದುಕೊಂಡಿರುವ ಚೈತ್ರಾ ಕೋಟೂರ್, ಇದ್ದಕ್ಕಿದ್ದಂತೆ ರವಿ ಅಪರಾಹ್ನವೇ ಮುಳುಗಿ ಕತ್ತಲಾದಂತೆ, ಖಾಲಿಯಾದಂತೆ ಎಂದು ಹೇಳಿದ್ದಾರೆ.

'ಬಿಗ್ ಬಾಸ್' ನಿಂದ ಹೊರಬಂದ ತಕ್ಷಣ ಸಿಗಬೇಕು ಎಂದಿದ್ದರು
'ನೋಡು ಇಲ್ಲಿಂದ ಹೊರಗೆ ಬಂದಿದ ತಕ್ಷಣ ನೀನು ಸಿಗಬೇಕು. ಹಾಗಂತ ಬೇಗ ಬಾ ಅಂತ ಅಲ್ಲ. ನೂರ್ ದಿನನೇ ಇರು. ಬಿಗ್ ಬಾಸ್ ಗೆಲ್ಲು. ಆಮೇಲೆ ನಂಗೆ ಸಿಗು. ನಿನ್ ಕೈಯಲ್ಲಿ ಸ್ಕ್ರಿಪ್ಟ ಬರೆಸ್ಬೇಕು ಅನಿಸ್ತಿದೆ. ಇವರುಗಳ ಕಥೆ ಬಿಟ್ಟಾಕು ನೀನು ತುಂಬಾ ಸೂಕ್ಷ್ಮ ಹುಡುಗಿ. ನೀನು ಭಾವ ಜೀವಿ ಸಾಮಾನ್ಯರಿಗೆ ನಿಲುಕೊಲ್ಲ. ಬೇಡದ ವಿಚಾರಗಳಲ್ಲಿ ಸಮಯ ಹಾಳು ಮಾಡಬೇಡ.

ಹೊಸದಾಗಿ ಬರೆಯೊ, ಹುಟ್ಟು ಹಾಕೊ ಶಕ್ತಿ ಇದೆ ಎಂದಿದ್ದರು
ನಿನಗೆ ಹೊಸದಾಗಿ ಬರೆಯೊ, ಹುಟ್ಟು ಹಾಕೊ ಶಕ್ತಿ ಇದೆ ಅಂದ್ರೆ ನಾವೆಲ್ಲ ವಿಶೇಷವಾದವರು. ಅದನ್ನ ನಾವು ತಿಳ್ಕೊಬೇಕು. ನಾನು ನಿನ್ನಲ್ಲಿ ಇರುವ ಪ್ರತಿಭೆ ಮತ್ತು ಸಾಧ್ಯತೆಗಳನ್ನು ನೋಡಿದ್ದೇನೆ. ಬಿಗ್ ಬಾಸ್ ನಿಂದ ಬಳಿಕ ಭೇಟಿಯಾಗು. ಬಿಗ್ ಬಾಸ್ ಮನೆಯಲ್ಲಿದ್ದಾಗ ಪದೇ ಪದೇ ಹೇಳಿದ್ದರು.

ಪ್ರೀತಿ ಪೂರ್ವಕವಾಗಿ ಬೆಂಬಲ ಮಾಡಿದ್ದರು
ನಾನು ನಿರಾಶಾವಾದಿ ಎಂದು ಬಿಗ್ ಬಾಸ್ ನಲ್ಲಿ ಯಾರೋ ಹೇಳಿದ್ದಕ್ಕೆ ಜಗತ್ತಿನ ಎಲ್ಲ ಕಾವ್ಯವೂ ನಿರಾಶವಾದದಲ್ಲೇ ಹುಟ್ಟುವುದು. she is a Writter, poet, dreamer and ಆ ನಿರಾಶಾವಾದ ಅವಳಿಗೆ ‘ವರ' ಎಂದು ನನ್ನ ಪರ ನಿಂತು ದೊಡ್ಡ ದನಿಯಲ್ಲಿ ಪ್ರೀತಿ ಪೂರ್ವಕವಾಗಿ ಬೆಂಬಲ ಮಾಡಿದ್ದರು.

'ಬಿಗ್ ಬಾಸ್' ಮನೆಯಿಂದ ಹೊರಬಂದ ತಕ್ಷಣ ಭೇಟಿಯಾದೆ
ಹೊರ ಹೋದ ಕೂಡಲೇ ಭೇಟಿಯಾಗಿದ್ದೆ. ಅದೆಷ್ಟು ಪ್ರೀತಿ ಆತ್ಮೀಯತೆ. ಅವರು, ಅವರ ಮುದ್ದಾದ ಮಾತು, ಆ ಕೈ ಬರವಣಿಗೆ, ಶ್ರದ್ಧೆ. ಇನ್ನು ಅದೆಷ್ಟೊ ಕೆಲಸಗಳನ್ನು ಮಾಡಬೇಕಿತ್ತು, ನಮ್ಮಂತವರಿಂದ ಮಾಡಿಸಬೇಕಿತ್ತು. ಇದ್ದಕ್ಕಿದ್ದಂತೆ ರವಿ ಅಪರಾಹ್ನವೇ ಮುಳುಗಿ ಕತ್ತಲಾದಂತೆ, ಖಾಲಿಯಾದಂತೆ