»   » 'ಎಲ್ಲಿದ್ದಾರೆ ರಮ್ಯಾ' ಎನ್ನುತ್ತಿದ್ದವರಿಗೆಲ್ಲ ಇಲ್ಲೊಂದು ಬ್ರೇಕಿಂಗ್ ನ್ಯೂಸ್

'ಎಲ್ಲಿದ್ದಾರೆ ರಮ್ಯಾ' ಎನ್ನುತ್ತಿದ್ದವರಿಗೆಲ್ಲ ಇಲ್ಲೊಂದು ಬ್ರೇಕಿಂಗ್ ನ್ಯೂಸ್

Posted By:
Subscribe to Filmibeat Kannada
ಪಾಕಿಸ್ತಾನದ ಪರ ಹೇಳಿಕೆ ನೀಡಿ ರಾಷ್ಟ್ರ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಈಗ ಎಲ್ಲಿದ್ದಾರೆ..?

ರಾಜ್ಯ ಕಾಂಗ್ರೆಸ್ ನಲ್ಲಿ ಹಲವು ಬೆಳವಣಿಗೆಗಳು ಆಗುತ್ತಿದ್ದರು ರಮ್ಯಾ ಅವರು ಪತ್ತೆ ಇಲ್ಲ. ತಮ್ಮ ರಾಜಕೀಯ ಗುರುಗಳಾದ ಎಸ್.ಎಂ ಕೃಷ್ಣ ಅವರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿದಾಗಲೂ ಕಾಂಗ್ರೆಸ್ ನ ಯುವರಾಣಿ ಎಲ್ಲೂ ಕಾಣ್ತಲೇ ಇಲ್ಲ ಯಾಕೆ.? ಎಂದು ಕೇಳಿದವರೇ ಹೆಚ್ಚು.[ನಟಿ ರಮ್ಯಾ ನಾಪತ್ತೆ.! ಇಡೀ ದೇಶ ಕೇಳುತ್ತಿದೆ ಕಾಂಗ್ರೆಸ್ ಯುವರಾಣಿ ಈಗೆಲ್ಲಿ.? ]

ಹೀಗೆ, 'ರಮ್ಯಾ ಎಲ್ಲಿದ್ದಾರೆ' ಎನ್ನುತ್ತಿದ್ದವರಿಗೆಲ್ಲ ಇಲ್ಲೊಂದು ಬ್ರೇಕಿಂಗ್ ನ್ಯೂಸ್ ಇದೆ ನೋಡಿ. ಮುಂದೆ ಓದಿ

ತುಮಕೂರಿನಲ್ಲಿ ರಮ್ಯಾ ಪ್ರತ್ಯಕ್ಷ!

ರಾಜಕೀಯವಾಗಿ ಹಲವು ಬೆಳವಣಿಗೆಗಳಾದರೂ ಮಾಜಿ ಸಂಸದೆ ರಮ್ಯಾ ಅವರು ಎಲ್ಲೂ ಕಾಣಿಸಿಕೊಂಡಿಲ್ಲ. ಮತ್ತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದ್ರೆ, ನಿನ್ನೆ (ಫೆಬ್ರವರಿ 17) ತುಮಕೂರಿನಲ್ಲಿ ಪ್ರತ್ಯಕ್ಷವಾಗಿದ್ದಾರೆ.[ಪಾಕ್ ಬಗ್ಗೆ ಹೇಳಿಕೆ ವಿವಾದ: ಟ್ವಿಟ್ಟರ್ ನಲ್ಲಿ ಮೌನ ಮುರಿದ ರಮ್ಯಾ]

ಕಾಲೇಜು ಕಾರ್ಯಕ್ರಮಕ್ಕೆ ರಮ್ಯಾ ಅತಿಥಿ

ತುಮಕೂರಿನ 'ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ' 2017ನೇ ಸಾಲೀನ ಕಲೋತ್ಸವ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಕ್ವೀನ್ ಅತಿಥಿಯಾಗಿ ಭಾಗವಹಿಸಿದ್ದರು.[ಪಾಕ್ ಬಗ್ಗೆ ಹೇಳಿಕೆ ವಿವಾದ: ಟ್ವಿಟ್ಟರ್ ನಲ್ಲಿ ಮೌನ ಮುರಿದ ರಮ್ಯಾ]

ವರ್ಣರಂಜಿತ ವೇದಿಕೆಯಲ್ಲಿ ಮಾಜಿ ಸಂಸದೆ

ತಂಪಾದ ಸಂಜೆಯಲ್ಲಿ ಕಲರ್ ಫುಲ್ ವೇದಿಕೆಯಲ್ಲಿ ಮಾಜಿ ಸಂಸದೆ ರಮ್ಯಾ ಮಿರ ಮಿರ ಅಂತ ಮಿಂಚಿದ್ದಾರೆ.

ಕಾಲೇಜು ವಿದ್ಯಾರ್ಥಿಯರು ಜೊತೆ ಮಾತು

ಮೈಕ್ ಹಿಡಿದು ಮಾತುಗಿಳಿದ ರಮ್ಯಾ, ಕಾಲೇಜು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದಾರೆ

ಸೆಲ್ಫಿಗೆ ಸಖತ್ ಫೋಸ್

ಮೋಹಕ ತಾರೆ ರಮ್ಯಾ ತಮ್ಮ ಕಾಲೇಜಿಗೆ ಆಗಮಿಸಿದ್ದ ಸಂಭ್ರಮದಲ್ಲಿದ್ದ ವಿದ್ಯಾರ್ಥಿಗಳು, ತಮ್ಮ ನೆಚ್ಚಿನ ನಟಿಯ ಜೊತೆ ಸೆಲ್ಫಿ ತೆಗಿಸಿಕೊಳ್ಳುವುದಕ್ಕೆ ಮುಗಿಬಿದ್ದರು. ಈ ವೇಳೆ ರಮ್ಯಾ ಅವರು ಸೆಲ್ಫಿಗೆ ಸ್ಟೈಲಿಶ್ ಫೋಸ್ ಗಳನ್ನ ನೀಡಿದ್ದು ಗಮನ ಸೆಳೆಯಿತು.

ಡಿಸೆಂಬರ್ 5 ರಂದೇ ಕೊನೆದಾಗಿ ಕಾಣಿಸಿದ್ದ ರಮ್ಯಾ!

ಜ್ವರದಿಂದ ಆಸ್ಪತ್ರೆ ಸೇರಿದ್ದ ರಮ್ಯಾ ಡಿಸೆಂಬರ್ 5 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದಾಗ ಒಂದು ಟ್ವೀಟ್ ಮಾಡಿದ್ದರು. ಅವತ್ತೇ ಕೊನೆ. ಅದಾದ ಬಳಿಕ ಟ್ವಿಟ್ಟರ್ ಲೋಕದಲ್ಲಿ ರಮ್ಯಾ ಕಾಣಿಸಿಕೊಂಡಿದ್ದೇ ಇಲ್ಲ.[ ನಟಿ ರಮ್ಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್]

ಯಾಕೆ ಮೌನವಾಗಿದ್ದಾರೆ?

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟೀವ್ ಆಗಿರುತ್ತಿದ್ದ ರಮ್ಯಾ ಮೇಡಂ ಕಳೆದ ಎರಡು ತಿಂಗಳಿನಿಂದ ಟ್ವಿಟ್ಟರ್ ಕಡೆ ಮುಖ ಮಾಡಿಲ್ಲ. ರಮ್ಯಾ ರವರ ರಾಜಕೀಯ ಗುರುಗಳಾದ ಎಸ್.ಎಂ.ಕೃಷ್ಣ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಬಗ್ಗೆ ಕೂಡ ರಮ್ಯಾ ಪ್ರತಿಕ್ರಿಯೆ ನೀಡಿಲ್ಲ. ಇದೆಲ್ಲವನ್ನ ಗಮನಿಸಿದ್ದ ಹಲವರು ರಮ್ಯಾ ಅವರು ಮತ್ತೆ ವಿದೇಶಕ್ಕೆ ಹಾರಿದ್ದಾರೆ ಎಂದುಕೊಂಡಿದ್ದರು.[ರಾಜಕೀಯವೂ ಬೇಡ, ಸಿನೆಮಾನೂ ಬೇಡ, ಮದುವೆಯಾಗಿ 'ರಮ್ಯ'ವಾಗಿರಲಿ!]

ರಮ್ಯಾ ಇಲ್ಲೆ ಇದ್ದಾರೆ!

ರಮ್ಯಾ ಅವರು ವಿದೇಶಕ್ಕೆ ಹೋಗಿಲ್ಲ. ರಾಜ್ಯದಲ್ಲೇ ಇದ್ದಾರೆ. ಆದ್ರೆ, ಅವರು ಯಾಕೇ ರಾಜಕಾರಣದಲ್ಲಿ ಸಕ್ರೀಯರಾಗಿಲ್ಲ ಎಂಬುದು ಮಾತ್ರ ಈಗ ಕುತೂಹಲವಾಗಿದೆ.[2016: ಗೂಗಲ್ ನಲ್ಲಿ ಅತಿ ಹೆಚ್ಚು ಸುದ್ದಿಯಾಗಿದ್ದ ಕನ್ನಡದ ನಟಿ ಯಾರು.?]

English summary
Sandalwood Actress, Congress Politician, EX MP Ramya aka Divya Spandana is not in News from Past 2 months. Where is Ramya now.? Here is the Answer to This Quetion.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada