'ಬಿಗ್ ಬಾಸ್'ನಲ್ಲಿ ರವಿ ಬೆಳಗೆರೆ ಜೊತೆ ಕಳೆದ ನೆನಪನ್ನು ಹಂಚಿಕೊಂಡು ಭಾವುಕರಾದ ನಟಿ ದೀಪಿಕಾ

ಖ್ಯಾತ ಪತ್ರಕರ್ತ, ನಿರೂಪಕ, ಲೇಖಕ, ಕಾದಂಬರಿಕಾರ, ಚಿತ್ರಕಥೆ ಬರಹಗಾರ, ನಟ, ಕ್ರೈಂ ಡೈರಿ ಕಾರ್ಯಕ್ರಮ ನಿರೂಪಕ, ಹಾಯ್ ಬೆಂಗಳೂರು ಹಾಗೂ ಓ ಮನಸೇ ಪತ್ರಿಕೆಯ ಸಂಪಾದಕ, ಅಲ್ಲದೆ 'ಪ್ರಾರ್ಥನಾ ಶಾಲೆ'ಯ ಸಂಸ್ಥಾಪಕ ಕೂಡ ಆಗಿದ್ದ ರವಿ ಬೆಳಗೆರೆ ಇನ್ನು ನೆನಪು ಮಾತ್ರ.

ಇಂದು ಬೆಳಗ್ಗೆ ಹೃದಯಾಘಾತದಿಂದ ರವಿ ಬೆಳಗೆರೆ ಇಹಲೋಕ ತ್ಯಜಿಸಿದ್ದಾರೆ. ರವಿ ಬೆಳಗೆರೆ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಸಿನಿಮಾ ಕ್ಷೇತ್ರದ ಗಣ್ಯರು ರವಿ ಬೆಳಗೆರೆ ಜೊತೆಗಿನ ನೆನಪನ್ನು ಮೆಲಕು ಹಾಕುತ್ತಿದ್ದಾರೆ. ಕಳೆದ ವರ್ಷ 2019ರಲ್ಲಿ ಕನ್ನಡ ಬಿಗ್ ಬಾಸ್ ಗೆ ಎಂಟ್ರಿ ಕೊಡುವ ಮೂಲಕ ಅಚ್ಚರಿ ಮೂಡಿಸಿದ್ದರು.

ಬಿಗ್ ಮನೆಯಲ್ಲಿ ಒಂದು ವಾರವಷ್ಟೆ ಇದ್ದರೂ ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳಿಗೂ ತುಂಬಾ ಹತ್ತಿರವಾಗಿದ್ದರು. ಕಳೆದ ವರ್ಷ ಬಿಗ್ ಬಾಸ್ ಪ್ರವೇಶ ಮಾಡಿದ್ದ ನಟಿ ದೀಪಿಕಾ ದಾಸ್, ರವಿ ಬೆಳಗೆರೆ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.

Actress And Farmer Bigg Boss Contestant Deepika Das Mourns Ravi Belagere death

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ದೀಪಿಕಾ ರವಿ ಬೆಳಗೆರೆ ನೆನೆದು ಭಾವುಕರಾಗಿದ್ದಾರೆ. 'ಬಿಗ್ ಬಾಸ್ ನಲ್ಲಿ ಭೇಟಿಯಾದ ಬಳಿಕ ಮತ್ತೆ ಅವರನ್ನು ಭೇಟಿ ಮಾಡಿಲ್ಲ. ಬಿಗ್ ಬಾಸ್ ಮನೆಯಲ್ಲಿ ಒಂದು ವಾರ ಅಷ್ಟೆ ಅವರ ಜೊತೆ ಇದ್ದಿದ್ದು, ಆದರೆ ಅದೆಷ್ಟೋ ವರ್ಷದಿಂದ ಪರಿಚಯ ಇದ್ದ ಹಾಗೆ ಅನುಭವವಾಗಿತ್ತು. ಪುಟ್ಟ ಮಗುವಿನ ಹಾಗೆ ಇದ್ದರು.'ಎಂದಿದ್ದಾರೆ.

'ಬಿಗ್ ಬಾಸ್ ಮನೆಯಲ್ಲಿ ಎಲ್ಲದಕ್ಕೂ ಹಠ ಮಾಡುತ್ತಿದ್ದರು. ಎಲ್ಲರನ್ನು ರಿ ಫ್ರೆಶ್ ಮಾಡುತ್ತಿದ್ದರು. ರವಿ ಬೆಳಗೆರೆ ಎಂದರೆ ಬೇರೆಯದ್ದೇ ಭಾವನೆ ಇತ್ತು. ಆದರೆ ಬಿಗ್ ಬಾಸ್ ಮನೆಯಲ್ಲಿ ಮುಗ್ದ ಮನಸ್ಸಿನ ರವಿ ಬೆಳಗೆರೆ ನೋಡಿದ್ದೇವೆ. ಒಂದು ವಾರದಲ್ಲಿ ಅವರನ್ನು ಬಿಗ್ ಬಾಸ್ ಮನೆಯಿಂದ ಕಳುಹಿಸಲು ಇಷ್ಟವಿರಲಿಲ್ಲ. ಎಲ್ಲರೂ ಅತ್ತಿದ್ವಿ. ಆದರೆ ಇದೀಗ ಶಾಶ್ವತವಾಗಿ ದೂರ ಹೋಗಿದ್ದಾರೆ.' ಎಂದು ರವಿ ಬೆಳಗೆರೆ ಜೊತೆ ಕಳೆದ ನೆನಪನ್ನು ದೀಪಿಕಾ ಹಂಚಿಕೊಂಡಿದ್ದಾರೆ.

Recommended Video

K Manju speaks about Ravi Belegere : ನನ್ನ ಅವರ ಒಡನಾಟನೆ ಬೇರೆ !! | Filmibeat Kannada

More from Filmibeat

English summary
Senoir Journalist ravi belagere passaes away. Actress And Bigg Boss Contestant Deepika Das Mourns ravi Belagere death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X