ಹುಟ್ಟುಹಬ್ಬದಂದೇ ಹೊಸ ಬದುಕಿಗೆ ಮುನ್ನುಡಿ ಬರೆಯಲಿದ್ದಾರೆ ರಮ್ಯಾ ; ಮದುವೆ ಬಗ್ಗೆ ಹೇಳಿದ್ದೇನು ಮೋಹಕತಾರೆ..?

ಹಿಂದೆ ಒಂದು ಕಾಲ ಇತ್ತು. ಚಿಕ್ಕ ಮಕ್ಕಳು ಕೂಡ ತಮ್ಮ ನೆಚ್ಚಿನ ನಟಿ ರಮ್ಯಾ ಎಂದು ಹೇಳುವ ಕಾಲ ಅದು. ಗ್ಲ್ಯಾಮರ್ ಹಾಗೂ ಗ್ರಾಮರ್ ನಿಂದ ಅಭಿಮಾನಿ ಬಳಗವನ್ನ ಹಾಗೂ ಭಗ್ನ ಪ್ರೇಮಿಗಳನ್ನ ಒಮ್ಮಿಂದೊಮ್ಮೆಲೆ ಸೃಷ್ಟಿಸಿಕೊಂಡಿದ್ದ ರಮ್ಯ ಮೋಹಕತಾರೆ ಎಂಬ ಪಟ್ಟವನ್ನ ಅಲಂಕರಿಸಿದಾಗ್ಲೇ ರಾಷ್ಟ್ರ ರಾಜಕಾರಣದಲ್ಲಿ ಕಳೆದು ಹೋದರು. ಸಕಾರಾತ್ಮಕವಾಗಿ, ನಕಾರಾತ್ಮಕವಾಗಿ, ಕಾಲೆಳೆಸಿಕೊಂಡ, ಉಗಿಸಿಕೊಂಡ ಏಕೈಕ ಗಟ್ಟಿಗಿತ್ತಿ ಎಂಬ ಹೆಗ್ಗಳಿಕೆಗೂ ರಾಷ್ಟ್ರ ರಾಜಕಾರಣದಲ್ಲಿ ರಮ್ಯ ಪಾತ್ರವಾದರು.

ಇಂಥಾ ರಮ್ಯಾ ಮದುವೆಯಾದರೆ ಜೀವನ ಪಾವನ ಎಂದು ಅನೇಕರು ಅಂದುಕೊಂಡಿದ್ದಾರೆ. ಇದಕ್ಕೆ ಪೂರಕವೆನ್ನುವಂತೆ ರಮ್ಯಾ ಮದುವೆಯ ಕುರಿತು ಇಲ್ಲಿಯವರೆಗೆ ಹಲವಾರು ಸುದ್ದಿಗಳು ಹೊರ ಬಂದಿವೆ. ಇನ್ನೇನು ರಮ್ಯಾ ಮದುವೆಯಾಗಿಯೇ ಬಿಡ್ತಾರೆ ಎಂದು ಅನೇಕರು ಮಾತನಾಡಿಕೊಂಡಿದ್ದು ಇದೆ. ಆದರೆ.. ರಮ್ಯಾ ಮಾತ್ರ ಮದುವೆಯಾಗಿಲ್ಲ. ಕಾರಣ ಅವರಿಗೆ ಗೊತ್ತಾದರೂ ಇವತ್ತು ಕೂಡ ರಮ್ಯಾ ಅವರ ಮದುವೆ ಕಣ್ತುಂಬಿಕೊಳ್ಳುವ ಆಸೆ ಬಹುತೇಕರಲ್ಲಿ ಇನ್ನೂ ಜೀವಂತವಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ರಮ್ಯಾ ಕಲ್ಯಾಣದ ಕುರಿತು ಮತ್ತೊಮ್ಮೆ ಗಾಸಿಪ್ ಅಂಗಳದಲ್ಲಿ ಇಂದು ಬೆಳ್ಳಿಗ್ಗೆಯಿಂದ ಕೇಳಿ ಬರುತ್ತಿದೆ.

Actress and former MP Ramya reacts to marriage rumors involving a businessman

ಆದರೆ ಹರಿದಾಡುತ್ತಿರುವ ಈ ಸುದ್ದಿ ನಿಜಾನಾ..? ಈ ಬಾರಿಯಾದರೂ ರಮ್ಯಾ ಮದುವೆಯಾಗಲಿದ್ದಾರಾ..? ಹೀಗೊಂದು ಪ್ರಶ್ನೆ ಸದ್ಯಕ್ಕೆ ಅನೇಕರನ್ನು ಕಾಡುತ್ತಿದೆ. ಸಹಜವಾಗಿ ರಮ್ಯಾ ಮದುವೆಯಾಗಲಿರುವ ಆ ಅದೃಷ್ಟವಂತ ಯಾರು ಎನ್ನುವ ಪ್ರಶ್ನೆ ಕೂಡ ಇವರ ಅಭಿಮಾನಿಗಳ ತಲೆಯಲ್ಲಿ ಗಿರಕಿ ಹೊಡೆಯುತ್ತಿದೆ.

ಇದಕ್ಕೆ ಪೂರಕವಾಗಿ ರಮ್ಯಾ ಉದ್ಯಮಿಯೊಬ್ಬರ ಜೊತೆ ಮದುವೆಯಾಗಲಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.ಇದೇ ನವೆಂಬರ್‌ನಲ್ಲಿ ಅಂದ್ರೆ ರಮ್ಯಾ ಹುಟ್ಟುಹಬ್ಬದ ಪ್ರಯುಕ್ತ, ನಿಶ್ಚಿತಾರ್ಥ್ ಸಮಾರಂಭ ಕೂಡ ನಡೆಯಲಿದೆ ಎನ್ನುವ ಪುಕಾರು ಗಾಂಧಿನಗರದ ತುಂಬಾ ಹಬ್ಬಿದೆ. ರಾಜಸ್ಥಾನದಲ್ಲಿ ರಮ್ಯಾ ಮದುವೆ ನಡೆಯುವುದು ಪಕ್ಕಾ ಎನ್ನುವ ಭವಿಷ್ಯವಾಣಿ ಕೂಡ ಕೇಳಿ ಬರುತ್ತಿದೆ.

actress-and-former-mp-ramya-reacts-to-marriage-rumors-involving-a-businessman

ಸಹಜವಾಗಿ ತಮ್ಮ ಕುರಿತು ಹಬ್ಬಿರುವ ಈ ವದಂತಿ ರಮ್ಯಾ ಅವರ ಕಿವಿಗೆ ಕೂಡ ತಲುಪಿದೆ. ಹೀಗಾಗಿಯೇ ಏನೋ ತಡಮಾಡದೇ ಪ್ರತಕ್ರಿಯೆಯನ್ನು ನೀಡಿರುವ ರಮ್ಯಾ ಹೌದಾ ನನಗೆ ಇನ್ನೂ ಗೊತ್ತಾಗಿಲ್ಲವಲ್ಲಾ ಎಂದು ಉದ್ಗಾರ ತೆಗೆದಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿಯ ಜೊತೆ ಮಾತನಾಡಿರುವ ರಮ್ಯಾ, ಎಂದಿನಂತೆ ಇದು ಕೂಡ ಕೇವಲ ವದಂತಿಯಷ್ಟೇ ಎಂದು ಹೇಳಿರುವ ರಮ್ಯಾ ಮದುವೆಯ ಸುದ್ದಿಯನ್ನು ಅಲ್ಲಗೆಳೆದಿದ್ದಾರೆ.

ಹಾಗಂಥ ರಮ್ಯಾ ಮದುವೆಯಾಗುತ್ತಿಲ್ಲ, ಹಬ್ಬಿರುವ ಸುದ್ದಿ ಸುಳ್ಳು ಎಂಬ ತೀರ್ಮಾನಕ್ಕೆ ಬರುವಂತೆ ಇಲ್ಲ. ಯಾಕೆಂದರೆ ಇದು ಬಣ್ಣದ ಲೋಕ. ಇಲ್ಲಿ ಯಾವತ್ತು ಯಾರ ಮೇಲೆ ಯಾವಾಗ ಪ್ರೇಮಾಂಕುರವಾಗುತ್ತೆ ಎಂದು ಹೇಳುವುದು ಕಷ್ಟ. ಎಲ್ಲಕ್ಕಿಂತ ಹೆಚ್ಚಾಗಿ ಬೆಂಕಿಯಿಲ್ಲದೇ ಹೊಗೆಯಾಡಲು ಸಾಧ್ಯ ಇಲ್ಲ.ಇದಕ್ಕೆ ಪೂರಕವಾಗಿ ರಮ್ಯಾ ಅವರ ಮದುವೆ ಸುದ್ದಿಯನ್ನು ಅವರ ಆಪ್ತರೇ ಖಚಿತ ಪಡಿಸಿದ್ದಾರೆ ಎಂದು ಕೂಡ ಮಾಧ್ಯಮಗಳು ವರದಿ ಮಾಡಿವೆ. ಕನ್ನಡ ಚಿತ್ರರಂಗದ ಮೋಹಕತಾರೆ ರಮ್ಯಾ ಅವರಿಗೆ ಕೊನೆಗೂ ಕಂಕಣ ಭಾಗ್ಯ ಕೂಡಿ ಬಂದಿದೆ ಎನ್ನುವ ಬ್ರೇಕಿಂಗ್ ನ್ಯೂಸ್ ಕೂಡ ಪ್ರಸಾರ ಮಾಡಿವೆ. ಯಾರಿಗೆ ಗೊತ್ತು ಈ ಬಾರಿ ಹರಿದಾಡುತ್ತಿರುವ ಈ ಸುದ್ದಿ ನಿಜವಾದರು ಆಗಬಹುದು. ನವೆಂಬರ್‌ನಲ್ಲಿ ರಮ್ಯಾ ಗುಡ್ ನ್ಯೂಸ್ ನೀಡಿದರು ನೀಡಬಹುದು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X