''ಹೆಂಡ್ತಿಯನ್ನು ಹೀಗೆ ಬದುಕಿಸಿಕೊಂಡವರನ್ನು ಕಂಡದ್ದು ಕಡಿಮೆ'' - ನುಡಿಗಾತಿಯ ಹಿಡಿನೆನಪು...!

ಮಾತುಗಳ ಮೂಲಕವೇ ಮನಸನ್ನೂ ಗೆದ್ದವರು ಅಪರ್ಣಾ. ಕನ್ನಡ ನಾಡು ಕಂಡ ಅಪರೂಪದ ನಿರೂಪಕಿ. ಅಚ್ಚ ಕನ್ನಡದಲ್ಲಿ ಸ್ವಚ್ಛವಾಗಿ ಮಾತನಾಡುವ ಮೂಲಕ ಕನ್ನಡದ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬಂದ ಅಪರ್ಣಾ ವಸ್ತಾರೆ, ಕೇವಲ .. ನಿರೂಪಕಿ ಅಷ್ಟೇ ಆಗಿರಲಿಲ್ಲ. ಬದಲಿಗೆ ಅತ್ಯುತ್ತಮ ಕಲಾವಿದೆ ಕೂಡ ಆಗಿದ್ದರು.

ಮೂಡಲ ಮನೆ.. ಇಂತಿ ನಿನ್ನ ಸುಜಾತಾ ಧಾರಾವಾಹಿಯಲ್ಲಿಯೂ ತಮ್ಮ ಛಾಪು ಮೂಡಿಸಿದ್ದರು. ಟಿ.ಎನ್.ಸೀತಾರಾಂ ಅವರ ಮುಕ್ತ ಧಾರಾವಾಹಿಯ ಶೀಲಾ ದೀಕ್ಷಿತ್ ಪಾತ್ರದಿಂದ ನಟಿಯಾಗಿ ಜನರ ಮನಸಿನಲ್ಲಿ ಉಳಿದರು. ಸಿನಿಮಾ .. ಧಾರಾವಾಹಿ .. ದೂರದರ್ಶನ ನಿರೂಪಣೆ .. ಆಕಾಶವಾಣಿ .. ವೇದಿಕೆ ಕಾರ್ಯಕ್ರಮ .. ಹೀಗೆ ಎಲ್ಲೆಡೆಯೂ ಮಿಂಚಿ ಮರೆಯಾದ ಅಪರ್ಣಾ ಅವರಿಗೆ ಅವರ ಪತಿ ನಾಗರಾಜ್ ವಸ್ತಾರೆ ಆತ್ಮೀಯರ ಸಮ್ಮುಖದಲ್ಲಿ ಭಾವಪೂರ್ಣವಾದ ಗಾನ ನಮನವನ್ನು ಇತ್ತೀಚೆಗೆ ಸಲ್ಲಿಸಿದ್ದಾರೆ. ಕವಿತೆಗಳ ಮೂಲಕ ತಮ್ಮ ಪತ್ನಿ ಅಪರ್ಣಾ ಅವರನ್ನು ನೆನೆದಿದ್ದಾರೆ.

Actress and Kannada voice of our metro Aparna Vastarey was remembered at the prayer meet

ಅಪರ್ಣಾ ಅವರ ಸ್ಮರಣಾರ್ಥ ನಡೆದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಷ್ಣು ಹೆಸರಲ್ಲಿ ನಾನಾ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದ ವೀರಕಪುತ್ರ ಶ್ರೀನಿವಾಸ್, ಈ ಅರ್ಥಪೂರ್ಣ ಕಾರ್ಯಕ್ರಮದ ಕುರಿತು ತಮ್ಮ ಮನದ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

"ನುಡಿಗಾತಿ ಅಪರ್ಣಾ ವಸ್ತಾರೆ ಅವರ ನೆನಪಿನ ಪ್ರಾರ್ಥನಾ ಸಭೆ. ನಾ ಕಂಡ ಅತ್ಯಂತ ಭಾವಪೂರ್ಣ ಗಾನ ನಮನವಿದು. ಪ್ರತಿ ಹಂತದಲ್ಲೂ ಅಭಿರುಚಿ, ಶಿಸ್ತು, ಪ್ರೀತಿ ದಟ್ಟವಾಗಿ ಕಾಣುತ್ತಿದೆ. ಅಪರ್ಣ ಅವರ ಫೋಟೋಗಳ ಆಯ್ಕೆ, ಅದಕ್ಕೊಪ್ಪುವ ಕವಿತೆ , ಸುಂದರವಾದ ವಿನ್ಯಾಸ, ಅಪಾರವಾದ ಆಪ್ತಬಳಗ. ಹೆಂಡ್ತಿ ಸತ್ತಾಗ ಅತ್ತಂತಹ ಹೆಚ್ಚು ಜನರನ್ನು ಕಂಡಿದ್ದೇನೆ. ಆದ್ರೆ ಹೀಗೆ ಬದುಕಿಸಿಕೊಂಡವರನ್ನು ಕಂಡದ್ದು ಕಡಿಮೆ" ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವೀರಕಪುತ್ರ ಶ್ರೀನಿವಾಸ್ ಬರೆದುಕೊಂಡಿದ್ದಾರೆ.

ಇನ್ನೂ.. ಜೀವನವೇ ಒಂದು ನಿತ್ಯೋತ್ಸವ ಎನ್ನುತ್ತಿದ್ದ ನಿರೂಪಕಿ ಅಪರ್ಣಾ ಅವರಿಗೆ ಅವರ ಆಪ್ತ ಗೆಳತಿ ನೆನಪಿರಲಿ ವರ್ಷಾ ಕೂಡ ಅಕ್ಷರ ನಮನ ಸಲ್ಲಿಸಿದ್ಧಾರೆ. ಕವನವೊಂದನ್ನು ಹಂಚಿಕೊಂಡಿದ್ದಾರೆ.

ಕನ್ನಡದ ವೇದಿಕೆಗಳು ಇನ್ಮುಂದೆ ಬಿಕೋ

ಸಂಗೀತಮಯವಾಗಿ ಕೇಳುತಿದ್ದ ಕನ್ನಡ

ಇನ್ಮುಂದೆ ಬರೀ ಪದಗಳಾಗಿ ಕೇಳುತ್ತವೆ

ಮಾತನಾಡಿ ಆಯಾಸವಾಯಿತೇ

ಹಾಗಾಗಿ

ಮೌನಕ್ಕೆ ಜಾರಿದೆಯೇ ?

ನೆಮ್ಮದಿ ಇಂದ ಇದ್ದೀರಿ ಎಂದು ಖುಷಿ ಪಡಲೋ

ಇಲ್ಲವೇ

ನೀವೇ ಇಲ್ಲವೆಂದು ದುಃಖಿಸಲೋ ?!

ಅಪರ್ಣೆ

ಆದಿ

ಅನಂತ

ಎಂದಿಗೂ ಜೀವಂತ

ಭಾವನೆಗಳಲ್ಲಿ ಬಿಗಿದಪ್ಪಿಕೊಳ್ಳುವೆ ಗೆಳತಿ

ಹೋಗಿ ಬಾ !

ಇನ್ನೂ ಈ ಪ್ರಾರ್ಥನಾ ಸಭೆಯಲ್ಲಿ ಡಾ.ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಕೂಡ ಭಾಗಿಯಾಗಿ ಅಪರ್ಣಾ ಅವರಿಗೆ ನಮನ ಸಲ್ಲಿಸಿದ್ದಾರೆ. ಹೇಮಾ ಪ್ರಭಾತ್ ಸೇರಿ ಇನ್ನೂ ಅನೇಕ ತಾರೆಯರು ನುಡಿಗಾತಿಯ ಹಿಡಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ನನ್ನ ಗುರುತು ಕನ್ನಡ.. ನನ್ನ ಅಸ್ತಿತ್ವ ಕನ್ನಡ..ಎಂದು ಹೇಳುತ್ತಿದ್ದ ಹೆಮ್ಮೆಯ ಕನ್ನಡತಿಯನ್ನು ನೆನೆದು ಭಾವುಕರಾಗಿದ್ಧಾರೆ.

More from Filmibeat

Read more about: anchor aparna namma metro
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X