'ವಿವಾಹಿತ ವ್ಯಕ್ತಿ ಜೊತೆ ಅಫೇರ್ ಇತ್ತು': ಸತ್ಯ ಒಪ್ಪಿಕೊಂಡ ನಟಿ
ಸಿನಿಮಾ ಇಂಡಸ್ಟ್ರಿಯಲ್ಲಿ ಗಾಸಿಪ್ ಗೆ ಹೆಚ್ಚು ಡಿಮ್ಯಾಂಡ್ ಇರುತ್ತೆ. ಒಬ್ಬ ನಟ ಯಾವುದಾದರೂ ಹುಡುಗಿ ಜೊತೆ ಪಾರ್ಟಿ, ಪಬ್, ರೆಸ್ಟೋರೆಂಟ್ ಅಂತ ಕಾಣಿಸಿಕೊಂಡ್ರೆ ಅವರಿಬ್ಬರ ಮಧ್ಯೆ ಲವ್ ಇದೆ, ಅಫೇರ್ ಇದೆ ಎಂಬ ಸುದ್ದಿ ಹರಿದಾಡುತ್ತೆ. ಅದೇ ರೀತಿ ನಟಿ ವಿಚಾರದಲ್ಲೂ ಆಗುತ್ತೆ.
ಲವ್ ಅಥವಾ ಅಫೇರ್ ಇದೆ ಎಂದು ಸಾಮಾನ್ಯವಾಗಿ ಸೆಲೆಬ್ರಿಟಿಗಳು ಕೂಡ ಒಪ್ಪಿಕೊಳ್ಳುವುದಿಲ್ಲ. ಇದ್ದರೂ ಸೀಕ್ರೆಟ್ ಆಗಿರುವಂತೆ ನೋಡಿಕೊಳ್ಳುತ್ತಾರೆ. ಆದ್ರೆ, ಇಲ್ಲೊಬ್ಬ ನಟಿ ತನಗೆ ''ವಿವಾಹಿತ ಪುರುಷನ ಜೊತೆ ಅಫೇರ್ ಇತ್ತು' ಎಂದು ಧೈರ್ಯದಿಂದ ಹೇಳಿಕೊಂಡಿದ್ದಾರೆ.
ಹೌದು, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಆಂಡ್ರಿಯಾ, ಪುಸ್ತಕವೊಂದನ್ನ ಬರೆದಿದ್ದು, ಅದರಲ್ಲಿ 'ನನಗೆ ವಿವಾಹಿತ ವ್ಯಕ್ತಿಯ ಅಫೇರ್ ಇತ್ತು' ಎಂದು ಉಲ್ಲೇಖಿಸಿದ್ದಾರೆ. ಏನಿದು ? ಮುಂದೆ ಓದಿ....

'ಬ್ರೋಕನ್ ವಿಂಗ್' ಪುಸ್ತಕದಲ್ಲಿ ಸ್ಫೋಟಕ ಸತ್ಯ
'ವಡಾ ಚೆನ್ನೈ' ಚಿತ್ರದಲ್ಲಿ ಕೊನೆಯದಾಗಿ ಗಮನ ಸೆಳೆದಿದ್ದ ನಟಿ ಆಂಡ್ರಿಯಾ 'ಬ್ರೋಕನ್ ವಿಂಗ್' ಪುಸ್ತಕ ಬರೆಯುತ್ತಿರುವುದಾಗಿ ಹೇಳಿಕೊಂಡಿದ್ದರು. ಈ ಪುಸ್ತಕದಲ್ಲಿ ಆಂಡ್ರಿಯಾಗೆ ಸಂಬಂಧಪಟ್ಟ ಹಲವು ಸತ್ಯ ಘಟನೆಗಳನ್ನ ಬಹಿರಂಗಪಡಿಸಿದ್ದಾರೆ. ಅದರಲ್ಲಿ ಖಾಸಗಿ ಜೀವನಕ್ಕೆ ಸಂಬಂಧಪಟ್ಟ ವಿಷ್ಯ ಪ್ರಮುಖವಾಗಿದೆ.

ಹೌದು, ಆ ವ್ಯಕ್ತಿಯನ್ನ ಪ್ರೀತಿಸಿದೆ
''ವಿವಾಹಿತ ವ್ಯಕ್ತಿಯೊಬ್ಬನನ್ನು ನಾನು ಪ್ರೀತಿಸಿದೆ. ಆತನು ನನ್ನ ಮಾನಸಿಕ ಮತ್ತು ದೈಹಿಕವಾಗಿ ಪೀಡಿಸಿದ. ಇದನ್ನ ಭರಿಸಲಾಗದೆ ನಾನು ಖಿನ್ನತೆಗೆ ಒಳಗಾದೆ. ಅದರಿಂದ ಹೊರಗೆ ಬರಲು ಆರ್ಯವೇದಿಕ್ ಚಿಕಿತ್ಸೆ ಪಡೆದುಕೊಂಡೆ. ಈ ನೋವಿನಿಂದ ಹೊರಬರಲು 'ಬ್ರೋಕನ್ ವಿಂಗ್' ಪುಸ್ತಕ ಬರೆದೆ. ಅದಕ್ಕಾಗಿ ಸಿನಿಮಾದಿಂದಲೂ ಸ್ವಲ್ಪ ಅಂತರ ಕಾಯ್ದುಕೊಂಡೆ'' ಎಂದು ಆಂಡ್ರಿಯಾ ಹೇಳಿಕೊಂಡಿದ್ದಾರೆ.

ಅನಿರುದ್ಧ ಜೊತೆ ಫೋಟೋ ಲೀಕ್
ಅಂದ್ಹಾಗೆ, ನಟಿ ಆಂಡ್ರಿಯಾ ಮತ್ತು ಗಾಯಕ, ಸಂಗೀತ ನಿರ್ದೇಶಕ ಅನಿರುದ್ಧ್ ಅವರ ಕೆಲವು ಆತ್ಮೀಯ ಫೋಟೋಗಳು ಲೀಕ್ ಆಗಿದ್ದರು. ಇಬ್ಬರ ನಡುವೆ ಲವ್ ಇದೆ, ಇಬ್ಬರು ಮದುವೆ ಆಗ್ತಾರೆ ಎಂಬ ಸುದ್ದಿಗಳು ಸದ್ದು ಮಾಡಿತ್ತು. ಈ ವಿಷ್ಯದಿಂದಲೂ ನಟಿ ಆಂಡ್ರಿಯಾ ನೊಂದಿದ್ದರು.

ಮತ್ತೆ ಸಿನಿಮಾದಲ್ಲಿ ಬ್ಯುಸಿ
ಮಾನಸಿಕ ಖಿನ್ನತೆಗೆ ಒಳಗಾಗಿದ್ದ ನಟಿ ಆಂಡ್ರಿಯಾ ಅವರು ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಸತತವಾಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ತಮಿಳಿನಲ್ಲಿ ಕಾ, ವತ್ತಂ ಮತ್ತು ಮಾಳಿಗೈ ಎಂಬ ಚಿತ್ರಗಳಲ್ಲಿ ಆಂಡ್ರಿಯಾ ಅಭಿನಯಿಸುತ್ತಿದ್ದಾರೆ. ಆಂಡ್ರಿಯಾ ಬರಿ ನಟಿ ಮಾತ್ರವಲ್ಲ, ಅದ್ಭುತ ಗಾಯಕಿ ಕೂಡ ಹೌದು. ತಮಿಳು ಮತ್ತು ತೆಲುಗಿನ ಅನೇಕ ಹಾಡುಗಳಿಗೆ ಧ್ವನಿಯಾಗಿದ್ದಾರೆ.


Click it and Unblock the Notifications











