»   » ನಿಶ್ಚಯವಾಗಿದ್ದ ಮದುವೆಯನ್ನ ಮುರಿದುಕೊಂಡ ನಟಿ

ನಿಶ್ಚಯವಾಗಿದ್ದ ಮದುವೆಯನ್ನ ಮುರಿದುಕೊಂಡ ನಟಿ

Posted By:
Subscribe to Filmibeat Kannada
ಲಕ್ಷ್ಮಿ ಬಾರಮ್ಮ ಖ್ಯಾತಿಯ ಕುಮುದ ಅಲಿಯಾಸ್ ಅನಿಕ ಸಿಂಧ್ಯಾ ಮದುವೆ ಕ್ಯಾನ್ಸಲ್ | Filmibeat Kannada

ಕಳೆದ ಒಂದು ತಿಂಗಳ ಹಿಂದಿಯಷ್ಟೇ ನಿಶ್ವಿತಾರ್ಥ ಮಾಡಿಕೊಂಡಿದ್ದ ಖ್ಯಾತ ನಟಿ ನಿಶ್ಚಯವಾಗಿದ್ದ ಮದುವೆಯನ್ನ ಮುರಿದುಕೊಂಡಿದ್ದಾರೆ. ಎರಡು ಮನೆಯಲ್ಲಿ ಒಪ್ಪಿ ಖುಷಿಯಿಂದ ಮದುವೆಗೆ ಸಮ್ಮತಿ ನೀಡಿದ್ದ ನಟಿ ಈಗ ಮದುವೆಯೇ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

ಕಿರುತೆರೆ ಹಾಗೂ ಹಿರಿತೆರೆಯಲ್ಲಿಯೂ ಗುರುತಿಸಿಕೊಂಡಿರುವ ನಟಿ ಮದುವೆ ಮುರಿದು ಬೀಳಲು ಕಾರಣ ಸ್ಯಾಂಡಲ್ ವುಡ್ ನ ಖ್ಯಾತ ನಟಿ ಅನ್ನುವುದು ಆಶ್ಚರ್ಯಕರವಾದ ವಿಚಾರ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಮದುವೆ ಆಗಬೇಕಿತ್ತು. ಆದರೆ ಮುಂದಿನ ಜೀವನದ ಬಗ್ಗೆ ಯೋಚನೆ ಮಾಡಿದ ನಟಿ ಮದುವೆ ಆಗದಿರಲು ನಿರ್ಧಾರ ಮಾಡಿದ್ದಾರೆ.

ಫಿಕ್ಸ್ ಆಗಿದ್ದ ಮದುವೆಯನ್ನ ಮುರಿದುಕೊಂಡ ನಟಿ ಯಾರು? ಯಾವ ಕಾರಣಕ್ಕೆ ಮದುವೆ ಕ್ಯಾನ್ಸಲ್ ಮಾಡಿಕೊಂಡರು, ನಟಿಯ ಮದುವೆ ಮುರಿದ ಮತ್ತೊಬ್ಬ ನಟಿ ಯಾರು ? ಇವೆಲ್ಲವುದಕ್ಕೂ ಉತ್ತರ ಇಲ್ಲಿದೆ ಮುಂದೆ ಓದಿ

ಮದುವೆ ಮುರಿದುಕೊಂಡ ನಟಿ ಅನಿಕಾ

ಕಳೆದ ಒಂದು ತಿಂಗಳ ಹಿಂದೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟಿ ಅನಿಕಾ ಮದುವೆ ಕ್ಯಾನ್ಸಲ್ ಆಗಿದೆ. ನಿಶ್ಚಿತಾರ್ಥದ ಸಂದರ್ಭದಲ್ಲೇ ವಿವಾದ ಸೃಷ್ಠಿ ಆದ ನಂತರ ಅನಿಕಾ ಮನೆಯಲ್ಲಿ ಮದುವೆ ಮಾಡುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

ಸಚಿನ್-ಅನಿಕಾ ಮಧ್ಯೆ ಕಾರುಣ್ಯಾ ರಾಮ್

ನಟಿ ಅನಿಕಾ ಹಾಗೂ ಸಚಿನ್ ಮದುವೆ ನಿಶ್ಚಯ ಆಗಿದೆ ಅಂತ ಸುದ್ದಿ ಆಗಿದ ತಕ್ಷಣ ನಟಿ ಕಾರುಣ್ಯಾ ರಾಮ್ ನಾನು ಸಚಿನ್ ಮದುವೆ ಆಗಬೇಕಿತ್ತು ಎಂದು ತಕರಾರು ತೆಗೆದಿದ್ದರು. ಅನಂತರ ಈ ವಿಚಾರ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ಆಗಿತ್ತು.

ಅನುಮಾನಗಳ ಮಧ್ಯೆ ಮುರಿದು ಬಿತ್ತು ಮದುವೆ

ನಿಶ್ಚಿತಾರ್ಥದ ನಂತ್ರ ಬಹಳಷ್ಟು ಚರ್ಚೆ ಆಗಿದ್ದ ಅನಿಕಾ-ಸಚಿನ್ ಮತ್ತು ಕಾರುಣ್ಯ ತ್ರಿಕೋನ ಪ್ರೇಮ ಕತೆಗೆ ಈಗ ಬ್ರೇಕ್ ಬಿದ್ದಿದೆ. ಅನುಮಾನಗಳ ಮಧ್ಯೆ ಬದುಕು ಕಷ್ಟವಾಗಿತ್ತೆ ಎಂದು ಅನಿಕಾ ತಂದೆ ತಾಯಿ ಮದುವೆ ಕ್ಯಾನ್ಸೆಲ್ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾರೆ.

ಕಾರುಣ್ಯ ಮದುವೆ ಬಗ್ಗೆ ಚರ್ಚೆ

ಇತ್ತ ಅನಿಕಾ ಮತ್ತು ಸಚಿನ್ ಮದುವೆ ಕ್ಯಾನ್ಸಲ್ ಆಗುತ್ತಿದ್ದಂತೆ ಸಚಿನ್ ಮತ್ತು ಕಾರುಣ್ಯ ಮದುವೆ ಈ ಹಿಂದೆಯೇ ಆಗಿತ್ತು ಎನ್ನುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಆದರೆ ಕಾರುಣ್ಯ ರಾಮ್ ಮಾತ್ರ ಈ ವಿವಾದಕ್ಕೂ ತಮಗೂ ಯಾವುದೇ ಸಂಬಂದವಿಲ್ಲದ ಹಾಗೆ ಸುಮ್ಮನಿದ್ದಾರೆ.

English summary
Kannada actress Anika and Sachin marriage called off. Sachin and Anika were engaged in December last year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X