ಹಿಂದಿ 40%, ಕನ್ನಡ 4%: ರಾಷ್ಟ್ರಭಾಷೆ ಬೇಕು ಎಂದ ಅನಿತಾ ಭಟ್ ಟ್ವೀಟ್‌ಗೆ ಕಿಡಿ
ನಟ ಕಿಚ್ಚ ಸುದೀಪ್ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಹೇಳಿದ್ದರು. ಹಿಂದಿ ಕೂಡ ಕೇವಲ ಒಂದು ಭಾಷೆ, ಅದನ್ನು ಬಿಟ್ಟು ಹಿಂದಿ ರಾಷ್ಟ್ರಭಾಷೆ ಎನ್ನುತ್ತಾ ಹಿಂದಿ ಹೇರಿಕೆ ಮಾಡುವುದು ಸರಿಯಲ್ಲ ಎಂದು ಮಾತನಾಡಿದ್ದರು. ಅದು ಟ್ವೀಟ್ ಮೂಲಕ ದೊಡ್ಡದಾಗಿ ಸದ್ದು ಮಾಡಿತ್ತು. ಬಳಿಕ ಬಾಲಿವುಡ್ ಅಜಯ್ ದೇವಗನ್ ಕಿಚ್ಚನ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದರು.
ಅಜಯ್ ದೇವಗನ್ ಹಿಂದಿ ರಾಷ್ಟ್ರ ಭಾಷೆ ಎಂದಿದ್ದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಕಿಚ್ಚನ ಪರವಾಗಿ ಹಲವು ತಾರೆಯರು ಮಾತನಾಡಿದರು. ಅಜಯ್ ದೇವಗನ್‌ಗೆ ಹಲವರು ಬೆವರಿಳಿಸಿದರು. ಸುದೀಪ್ ಮತ್ತು ಅಜಯ್ ದೇವಗನ್ ನಡುವಿನ ಮಾತಿನ ಚಕಮಕಿ ದೇಶದೆಲ್ಲೆಡೆ ಭಾರಿ ಸದ್ದು ಮಾಡಿತ್ತು.
ಇದೀಗ ಅದೇ ವಿಚಾರವಾಗಿ ಕನ್ನಡ ನಟಿ ಖ್ಯಾತಿಯ ಅನಿತಾ ಭಟ್ ಪ್ರತಿಕ್ರಿಯೆ ನೀಡಿದ್ದಾರೆ. ಟ್ವೀಟ್ ಮಾಡುವ ಮೂಲಕ ಈ ವಿಚಾರದಲ್ಲಿ ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಅನಿತಾ ಭಟ್ ಅವರ ಟ್ವೀಟ್ ಕಂಡು ಕನ್ನಡಿಗರು ಕೆಂಡಾಮಂಡಲವಾಗಿದ್ದಾರೆ. ಕನ್ನಡದ ನಟಿಯಾಗಿ ಹೀಗೆ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.
ಯಾಕೆಂದರೆ ಅನಿತಾ ಭಟ್ ಹಿಂದಿ ಪರ ಬ್ಯಾಟ್ ಬೀಸಿದ್ದಾರೆ. ಅನಿತಾ ಮಾಡಿರುವ ಟ್ವೀಟ್ ಈ ರೀತಿಯಾಗಿ ಇದೆ. "ನಮ್ಮ ದೇಶದಲ್ಲಿ 40% ಹಿಂದಿ ಮಾತನಾಡುತ್ತಾರೆ, ತಮಿಳು 7 % ಮತ್ತು ಕನ್ನಡ 4 % ಮಾತನಾಡುತ್ತಾರೆ. ನಾವು ನಮ್ಮ ದೇಶದಲ್ಲಿ ಯಾವ ಭಾಷೆ ಮಾತನಾಡಬೇಕು ಎಂಬುದು ಇದರಲ್ಲೇ ತಿಳಿಯಬೇಕು. ಯಾವ ಭಾಷೆ ಮಾತನಾಡಬೇಕು ಎಂದು ನಾವೇ ನಿರ್ಧಾರ ಮಾಡಬೇಕು." ಎಂದು ಬರೆದುಕೊಂಡಿದ್ದಾರೆ.

ಅನಿತಾ ಭಟ್ ಮಾಡಿದ ಈ ಟ್ವೀಟ್‌ಗೆ ಕನ್ನಡಿಗರು ಕೆಂಡಾಮಂಡಲವಾಗಿದ್ದಾರೆ. ಕರ್ನಾಟಕದಲ್ಲಿ ಇದ್ದು ಈ ರೀತಿ ಮಾತನಾಡುವುದಕ್ಕೆ ನಿಮಗೆ ನಾಚಿಕೆಯಾಗಬೇಕು ಎಂದು ಅವರ ಅನಿಸಿಕೆಗಳನ್ನು ತಿಳಿಸುತ್ತಿದ್ದಾರೆ. ಇನ್ನು ಕೆಲವು ಟ್ವೀಟ್‌ಗಳಲ್ಲಿ ಹಂದಿ, ನಾಯಿಗಳು ನಮ್ಮ ದೇಶದಲ್ಲಿ ಹೆಚ್ಚಿವೆ. ಅವುಗಳನ್ನ ರಾಷ್ಟ್ರ ಪ್ರಾಣಿಯಾಗಿ ಮಾಡಬಹುದು ಅಲ್ಲವೇ ಎಂಬುದಾಗಿ ಅನಿತಾ ಭಟ್‌ಗೆ ಟಾಂಗ್ ಕೊಟ್ಟಿದ್ದಾರೆ.
ಕಿಚ್ಚ ಮತ್ತು ಅಜಯ್ ದೇವಗನ್‌ರಿಂದ ಶುರುವಾದ ಈ ವಿವಾದದ ಬಗ್ಗೆ ದಿನಕ್ಕೊಬ್ಬರು ಪ್ರತಿಕ್ರಿಯೇ ನೀಡುತ್ತಿದ್ದಾರೆ. ಅಜಯ್ ದೇವಗನ್ ಮಾತಿಗೆ ಪ್ರತಿಕ್ರಿಯೆ ನೀಡಿದ್ದ ಕಿಚ್ಚ ಸುದೀಪ್ "ನಾವು ನಿಮ್ಮ ಭಾಷೆಯನ್ನು ಗೌರವಿಸುತ್ತೇವೆ. ಹಿಂದಿಯನ್ನು ಕಲಿಯುವ ಸಾಮರ್ಥ್ಯ ಹೊಂದಿದ್ದೇವೆ. ನೀವು ಮಾಡಿದ ಹಿಂದಿ ಪ್ರತಿಕ್ರಿಯೆ ರೀತಿಯೇ ನಾನು ಕೂಡ ಕನ್ನಡದಲ್ಲಿಯೇ ಪ್ರತಿಕ್ರಿಯೆ ನೀಡಿದರೆ ನಿಮ್ಮ ಪರಿಸ್ಥಿತಿ ಏನಾಗಿರುತ್ತಿತ್ತು." ಟ್ವೀಟ್ ಮಾಡಿ ಗಮನ ಸೆಳೆದಿದ್ದರು.


Click it and Unblock the Notifications











