For Quick Alerts
  ALLOW NOTIFICATIONS  
  For Daily Alerts

  ನಟಿ -ನಿರ್ಮಾಪಕಿ ಅನಿತಾ ರಾಣಿ ಪರ್ಸ್ ಗೆ ಕನ್ನ ಹಾಕಿದ ಕಳ್ಳರು

  By Bharath Kumar
  |

  ಕನ್ನಡ ಸಿನಿಮಾ, ಧಾರಾವಾಹಿಯ ನಟಿ ಹಾಗೂ ನಿರ್ಮಾಪಕಿ ಅನಿತಾ ರಾಣಿ ಅವರ ಪರ್ಸ್ ಗೆ ಕಳ್ಳರು ಕನ್ನ ಹಾಕಿದ್ದಾರೆ. ಅನಿತಾ ರಾಣಿ ನಿನ್ನೆ (ಜುಲೈ 31 ರಂದು) ಬ್ಯಾಂಕ್ ಗೆ ಹೋಗಿದ್ದಾರೆ. ಅನಿತಾ ರಾಣಿ ಬ್ಯಾಂಕ್ ನಿಂದ ಹೊರ ಬರುತ್ತಿರುವುದನ್ನು ಗಮನಿಸಿದ ಕಳ್ಳರು ಅಡ್ರೆಸ್ ಕೇಳುವ ನೆಪದಲ್ಲಿ ಅನಿತಾ ರಾಣಿ ಬಳಿ ಬಂದಿದ್ದಾರೆ.

  ಅಡ್ರಸ್ ಕೇಳುತ್ತಲೇ ಅನಿತಾ ರಾಣಿ ಅವರ ಕಾರ್ ಹಿಂದೆ ಇದ್ದ ಪರ್ಸ್ ಅನ್ನು ಎತ್ತಿಕೊಂಡು ಪರಾರಿ ಆಗಿದ್ದಾನೆ. ಪರ್ಸ್ ನಲ್ಲಿ ನಾಲ್ಕು ಸಾವಿರ ಹಣ ಒಂದು ಮೊಬೈಲ್, ಎಟಿಎಂ ಕಾರ್ಡ್ ಗಳು ಮತ್ತು ಸಿನಿಮಾರಂಗಕ್ಕೆ ಸಂಬಂದಪಟ್ಟ ದಾಖಲಾತಿಗಳನ್ನು ಇಟ್ಟಿದ್ದರಂತೆ.

  ಆರ್ ಟಿ ನಗರದ ಬ್ಯಾಂಕ್ ಆಫ್ ಇಂಡಿಯಾ ಸಮೀಪದಲ್ಲಿ ಈ ಘಟನೆ ನೆಡೆದಿದ್ದು, ಅನಿತಾ ರಾಣಿ ಈಗಾಗಲೇ ಈ ಬಗ್ಗೆ ಆರ್ ಟಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಇನ್ನು ಕ್ರೈಂ ಬ್ರಾಂಚ್ ನವರು ದೂರು ದಾಖಲು ಮಾಡಲು ಹೋದರೆ ನಮಗೆ ಇಲ್ಲ ಸಲ್ಲದ ಪ್ರಶ್ನೆಗಳನ್ನು ಕೇಳುತ್ತಾರೆ ಎನ್ನುವ ಆರೋಪವನ್ನು ಮಾಡಿದ್ದಾರೆ ಅನಿತಾ ರಾಣಿ.

  ಸದ್ಯ ಪೊಲೀಸರು ಕಳ್ಳರನ್ನು ಹುಡುಕಿಕೊಡುವುದಾಗಿ ತಿಳಿಸಿದ್ದು ಬ್ಯಾಂಕ್ ಗಳ ಸುತ್ತ ಮುತ್ತವೇ ಈ ರೀತಿಯ ಘಟನೆ ನಡೆದರೇ ಸಾಮಾನ್ಯ ಸ್ಥಳದಲ್ಲಿ ಪೊಲೀಸರು ಯಾರ ರೀತಿಯಲ್ಲಿ ರಕ್ಷಣೆ ಒಡಗಿಸುತ್ತಾರೆ ಎನ್ನುವುದು ಅನಿತಾ ಅವರ ಪ್ರಶ್ನೆ.

  English summary
  Kannada actress and Producer anita rani's purse has robbed at RT Nagar. she was registered complaint in RT Nagar police station.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X