For Quick Alerts
  ALLOW NOTIFICATIONS  
  For Daily Alerts

  ವಾಟ್ಸ್‌ಆಪ್ ನಂಬರ್ ಕೊಡ್ತೀನೆಂದು ಹೇಳಿ ಕಾಗೆ ಹಾರಿಸಿದ ಹಾಟ್ ನಟಿ

  |

  ಕನ್ನಡದ ಹಾಟ್ ನಟಿ ಅನಿತಾ ಭಟ್ ಅವರು ಇಂದು 'ಕನ್ನಡ ಫಿಲ್ಮೀಬೀಟ್' ಫೇಸ್‌ಬುಕ್ ಪೇಜ್‌ ಮೂಲಕ ಲೈವ್ ಬಂದು ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

  ಲೈವ್ ವೇಳೆ ಕೆಲವರು 'ನಿಮ್ಮ ನಂಬರ್ ಕೊಡಿ' ಎಂದು ಅನಿತಾ ಭಟ್ ಅವರನ್ನು ಕೇಳಿದರು. ಸರಿ ಲೈವ್ ನ ಕೊನೆಯಲ್ಲಿ ನಂಬರ್ ಕೊಡ್ತೀನಿ ಎಂದರು ಅನಿತಾ ಭಟ್.

  32 ನಿಮಿಷಗಳ ಕಾಲ ಲೈವ್‌ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟಿ ಅನಿತಾ ಭಟ್, ಕೊನೆಯಲ್ಲಿ ನಂಬರ್ ಕೊಡದದೇ ಹಾಗೆಯೇ ಬಾಯ್ ಹೇಳಿ ಕಾದಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

  ಅಭಿಮಾನಿಗಳು ಅನಿತಾ ಭಟ್ ಅವರಿಗೆ ಏನೇನೊ ಪ್ರಶ್ನೆ ಕೇಳಿದರು. ಅವರು ಕೊಟ್ಟ ಉತ್ತರಗಳೇನು?

  ಲಾಕ್‌ಡೌನ್ ಸಮಯದಲ್ಲಿ ಏನು ಮಾಡುತ್ತಿದ್ದೀರಿ?

  ಲಾಕ್‌ಡೌನ್ ಸಮಯದಲ್ಲಿ ಏನು ಮಾಡುತ್ತಿದ್ದೀರಿ?

  ಲಾಕ್‌ಡೌನ್ ಸಮಯದಲ್ಲಿ ಸಾಕಷ್ಟು ಯೋಗ ಮಾಡುತ್ತಿರುವುದಾಗಿ ಹೇಳಿದ ಅನಿತಾ ಭಟ್, ಪುಸ್ತಕ ಓದುವ ಹವ್ಯಾಸವಿದ್ದು, ಸಾಕಷ್ಟು ಪುಸ್ತಕಗಳನ್ನು ಓದುತ್ತಿದ್ದೇನೆ ಎಂದ ಅನಿತಾ ತಮ್ಮ ಮನೆಯಲ್ಲಿನ ಲೈಬ್ರೆರಿಯನ್ನು ತೋರಿಸಿದರು.

  ನಟ ಡಾಲಿ ಧನಂಜಯ್ ಬಗ್ಗೆ ಹೊಗಳಿಕೆ

  ನಟ ಡಾಲಿ ಧನಂಜಯ್ ಬಗ್ಗೆ ಹೊಗಳಿಕೆ

  ಟಗರು ಚಿತ್ರೀಕರಣದ ಬಗ್ಗೆ ಮಾತನಾಡಿದ ಅನಿತಾ ಭಟ್, ನಟ ಟಾಲಿ ಧನಂಜಯ್ ವೃತ್ತಿಪರ ನಟ, ತಾವಾಯಿತು ತಮ್ಮ ಕೆಲಸವಾಯಿತು ಎಂದಿರುವವರು. ಸೆಟ್‌ನಲ್ಲಿ ನಟನೆಯ ಮೇಲಷ್ಟೆ ಅವರ ಗಮನ. ಅದ್ಭುತವಾಗಿ ನಟಿಸುತ್ತಾರೆ ಎಂದು ಹೊಗಳಿದರು. ನಿರ್ದೇಶಕ ಸೂರಿ ಅವರನ್ನು ಹೊಗಳುವುದನ್ನು ಮರೆಯಲಿಲ್ಲ.

  ಮುಂಬರುವ ಸಿನಿಮಾಗಳು ಯಾವುವು?

  ಮುಂಬರುವ ಸಿನಿಮಾಗಳು ಯಾವುವು?

  ಮುಂಬರುವ ಸಿನಿಮಾಗಳ ಪಟ್ಟಿಯನ್ನು ಈ ಹಂತದಲ್ಲಿ ನೀಡುವುದು ಬೇಡ ಎಂದ ಅನಿತಾ ಭಟ್. ನಾಲ್ಕು ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ ಎಂದಷ್ಟೆ ಹೇಳಿದರು. ಆದರೆ ಕೊರೊನಾ ಬಂದಿದ್ದರಿಂದ ಯಾವುದೇ ಹೊಸ ಕೆಲಸ ಇಲ್ಲದ ಹಾಗೆ ಹಾಗಿದೆ. ಎಲ್ಲವನ್ನೂ ಮೊದಲಿನಿಂದ ಪ್ರಾರಂಭಿಸಬೇಕು ಎಂದರು.

  ಕನ್ನಡದ ನಂಬರ್ ಒನ್ ನಟ ಯಾರು?

  ಕನ್ನಡದ ನಂಬರ್ ಒನ್ ನಟ ಯಾರು?

  ಕನ್ನಡದಲ್ಲಿ ಸದ್ಯಕ್ಕಿರುವ ಎಲ್ಲಾ ಟಾಪ್ ನಟರು ನಂಬರ್ ಒನ್ ನಟರೇ ಎಂದ ಅನಿತಾ ಭಟ್ ಎಲ್ಲಾ ಟಾಪ್ ನಟರ ಹೆಸರು ಹೇಳಿದರು. ತಮ್ಮ ನೆಚ್ಚಿನ ಹೀರೋ ಬಗ್ಗೆ ಮಾತನಾಡಲು ಕೋರಿದ ಅಭಿಮಾನಿಗಳಿಗೆ ಎಲ್ಲಾ ನಟರ ಬಗ್ಗೆಯೂ ಗೌರವ ಇದೆ, ಹಾಗೆಂದು ಸೀಮಿತ ಅವಧಿಯಲ್ಲಿ ಎಲ್ಲರ ಬಗ್ಗೆಯೂ ಹೇಳುತ್ತಾ ಇರಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.

  ಎಲ್ಲ ಪ್ರಶ್ನೆಗಳಿಗೂ ಉತ್ತರ

  ಎಲ್ಲ ಪ್ರಶ್ನೆಗಳಿಗೂ ಉತ್ತರ

  ತಮ್ಮ ಬಾಲ್ಯ, ಇದ್ದ ಊರು, ಸಿನಿಮಾಕ್ಕೆ ಬಂದ ಬಗೆ, ನೋಡುತ್ತಿರುವ ಸಿನಿಮಾಗಳು, ಇಷ್ಟದ ಸಿನಿಮಾ, ಇಷ್ಟದ ನಟ ಎಲ್ಲದರ ಬಗ್ಗೆಯೂ ಅನಿತಾ ಭಟ್ ಅವರಿಗೆ ಪ್ರಶ್ನೆಗಳು ಎದುರಾದವು. ಕೆಲವಕ್ಕೆ ವ್ಯಂಗ್ಯವಾಗಿ, ಕೆಲವಕ್ಕೆ ಗಂಭಿರವಾಗಿ ಉತ್ತರಿಸಿದರು ಅನಿತಾ ಭಟ್.

  English summary
  Kannada actress Anitha Bhatt answers fans question in Facebook live. She promised to give her mobile number in the end but she did not.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X