ಟಾಲಿವುಡ್ ಗೆ ಹಾರಿದ ಮತ್ತೋರ್ವ ಕನ್ನಡದ ನಟಿ

ಟಾಲಿವುಡ್ ನಲ್ಲಿ ಸದ್ಯ ಕನ್ನಡದ ನಟಿಮಣಿಯರದ್ದೆ ಹವಾ. ಸ್ಯಾಂಡಲ್ ವುಡ್ ನಲ್ಲಿ ಒಂದೆರಡು ಸಿನಿಮಾ ಮಾಡುತ್ತಿದ್ದಂತೆ ಬಹುತೇಕ ನಟಿಯರು ಪಕ್ಕದ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ತೆಲುಗು ಸಿನಿಮಾರಂದಲ್ಲಿ ಮಿಂಚಿದರೆ ದೊಡ್ಡ ಮಟ್ಟದ ಜನಪ್ರಿಯತೆ ಸಿಗಲಿದೆ ಎನ್ನುವುದು ನಟಿಯರ ಲೆಕ್ಕಾಚಾರ ಇದ್ದರೂ ಇರಬಹುದು.

ಈಗಾಗಲೇ ಸಾಕಷ್ಟು ಕನ್ನಡದ ನಟಿಯರು ಟಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಅದೇ ಸಾಲಿಗೀಗ ಕನ್ನಡ ಮತ್ತೋರ್ವ ನಟಿ ಅನಿತಾ ಭಟ್ ಕೂಡ ಸೇರಿಕೊಂಡಿದ್ದಾರೆ. ಹೌದು, ಸೈಕೋ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬಂದ ನಟಿ ಅನಿತಾ ಭಟ್ ಇದೀಗ ತೆಲುಗು ಸಿನಿಮಾರಂಗದ ಕಡೆ ಮುಖ ಮಾಡಿದ್ದಾರೆ.

ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಹಾಟ್ ನಟಿ ಅನಿತಾ ಭಟ್ ಇತ್ತೀಚೀಗಷ್ಟೆ ಬಳೆಪೇಟೆ ಸಿನಿಮಾದ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಹೌದು, ಅನಿತಾ ಭಟ್ ನಟನೆಯ ಬಳೆಪೇಟೆ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಅನಿತಾ ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

Actress Anitha Bhatt make her tollywood debut with Krishna Lanka movie

ಅಂದಹಾಗೆ ಅನಿತಾ ಭಟ್ 'ಕೃಷ್ಣ ಲಂಕಾ' ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಚಿತ್ರದಲ್ಲಿ ಅನಿತಾ ಭಟ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೃಷ್ಣ ಲಂಕಾ ಸಿನಿಮಾದಲ್ಲಿ ನಾಯಕನಾಗಿ ಪರುಚೂರು ರವಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಕಾರ್ತಿಕೇಯನ್ ನಿರ್ದೇಶನ ಮಾಡುತ್ತಿದ್ದಾರೆ.

ಕೃಷ್ಣ ಲಂಕಾ ರೌಡಿಸಂ ಹಿನ್ನಲೆ ಇರುವ ಸಿನಿಮಾ ಎನ್ನಲಾಗುತ್ತಿದೆ. ಅಂದಹಾಗೆ ಈಗಾಗಲೇ ಅನಿತಾ ಭಟ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಫೆಬ್ರವರಿಯಿಂದ ಪೂರ್ಣ ಪ್ರಮಾಣದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

Recommended Video

ಮಾಡಿದ ತಪ್ಪನ್ನೆಲ್ಲ ಡೈರಿಯಲ್ಲಿ ಬರೆದು ಕ್ಷಮೆ ಕೇಳಿ ಪಶ್ಚಾತಾಪ ಪಟ್ಟಿದ್ದ ಜಯಶ್ರೀ | Filmibeat Kannada

More from Filmibeat

English summary
Kannada Actress Anitha Bhatt make her tollywood debut with Krishna Lanka movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X