ಪುನೀತ್ ಜೊತೆ ನಟಿಸಿದ್ದ ಅಂಜಲಿ ಈಗ ಶಿವರಾಜ್ ಕುಮಾರ್ ಗೆ ನಾಯಕಿ
ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಹೊಸ ಸಿನಿಮಾ 'ಶಿವಪ್ಪ' ಬಹಳ ಗಮನ ಸೆಳೆದಿದೆ. ಬಹುತಾರಾಗಣದ ಈ ಸಿನಿಮಾದ ಚಿತ್ರೀಕರಣ ಈಗಷ್ಟೆ ಆರಂಭವಾಗಿದೆ.
Recommended Video
ತಮಿಳಿನ ವಿಜಯ್ ಮಿಲ್ಟನ್ ನಿರ್ದೇಶನದ ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಯಾಗಿ ಡಾಲಿ ಧನಂಜಯ್, ಪೃಥ್ವಿ ಅಂಬರ್ ಸಹ ನಟಿಸುತ್ತಿದ್ದು, ಶಶಿಕುಮಾರ್, ಉಮಾಶ್ರಿ ಸಹ ಇದ್ದಾರೆ.
ಬಹುತಾರಾಗಣದ ಈ ಸಿನಿಮಾಕ್ಕೆ ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲ ಎದ್ದಿತ್ತು, ಆದರೆ ಆ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಏಳು ವರ್ಷದ ಹಿಂದೆ ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ್ದ ನಟಿ ಅಂಜಲಿ ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಗೆ ನಾಯಕಿ ಆಗಲಿದ್ದಾರೆ.

ರಣವಿಕ್ರಮ ಸಿನಿಮಾದಲ್ಲಿ ಅಂಜಲಿ ನಟನೆ
ಹಲವಾರು ತೆಲುಗು, ತಮಿಳು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಅಂಜಲಿ, ಪುನೀತ್ ರಾಜ್‌ಕುಮಾರ್ ಅವರ ರಣವಿಕ್ರಮ ಸಿನಿಮಾದಲ್ಲಿ ಗೌರಿ ಪಾತ್ರದಲ್ಲಿ ನಟಿಸಿದ್ದರು. ಏಳು ವರ್ಷಗಳ ನಂತರ ಈಗ ಮತ್ತೆ ಅವರು ಕನ್ನಡದಲ್ಲಿ ನಟಿಸುತ್ತಿದ್ದಾರೆ.

2008 ರಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು ಅಂಜಲಿ
ತಮ್ಮ ವೃತ್ತಿ ಜೀವನದ ಆರಂಭದಲ್ಲಿಯೇ ಅಂಜಲಿ ಕನ್ನಡದಲ್ಲಿ ನಟಿಸಿದ್ದರು. 2008 ರಲ್ಲಿ ಹೊಂಗನಸು ಎಂಬ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಅಂಜಲಿ ತಮಿಳು, ತೆಲುಗಿನಲ್ಲಿ ಬ್ಯುಸಿ ಆಗಿದ್ದರು. ಶಿವಪ್ಪ ಅಂಜಲಿ ಅವರ ಮೂರನೇ ಸಿನಿಮಾ.

ಡಾಲಿ ಧನಂಜಯ್ ಗೆ ಹರ್ಷಿಕಾ ಪೂಣಚ್ಚ ನಾಯಕಿ?
ಡಾಲಿ ಧನಂಜಯ್ ಗೆ ಎದುರಾಗಿ ಕನ್ನಡದ ಹರ್ಷಿಕಾ ಪೂಣಚ್ಚ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ ಆದರೆ ಸುದ್ದಿಖಾತ್ರಿಯಾಗಿಲ್ಲ. ಯುವ ನಟ ಪೃಥ್ವಿ ಅಂಬರ್ ಗೆ ಯಾರು ನಾಯಕಿ ಎಂಬುದು ಗೊತ್ತಾಗಬೇಕಿದೆ.

ತಮಿಳು ಸಿನಿಮಾದ ರೀಮೇಕ್?
'ಶಿವಪ್ಪ' ಸಿನಿಮಾವನ್ನು ತಮಿಳಿನ ವಿಜಯ್ ಮಿಲ್ಟನ್ ನಿರ್ದೇಶಿಸುತ್ತಿದ್ದಾರೆ. ತಮಿಳಿನಲ್ಲಿ ಅವರೇ ನಿರ್ದೇಶಿಸಿದ್ದ 'ಕಗುಡು' ಸಿನಿಮಾದ ರೀಮೇಕ್ 'ಶಿವಪ್ಪ' ಸಿನಿಮಾ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು, ನವೆಂಬರ್ 23 ರಿಂದ ಧನಂಜಯ್ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.


Click it and Unblock the Notifications











