For Quick Alerts
  ALLOW NOTIFICATIONS  
  For Daily Alerts

  ಅಪ್ಪ..ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ: ಹುಟ್ಟುಹಬ್ಬದ ದಿನ ಅನು ಪ್ರಭಾಕರ್ ಭಾವುಕ ಪತ್ರ

  |

  ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟಿ ಅನು ಪ್ರಭಾಕರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 40ನೇ ವಸಂತಕ್ಕೆ ಕಾಲಿಟ್ಟಿರುವ ಅನು ಪ್ರಭಾಕರ್ ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಮುದ್ದು ಮಗಳು ನಂದನಾ, ಪತಿ ರಘು ಮುಖರ್ಜಿ ಮತ್ತು ತಾಯಿ ಗಾಯತ್ರಿ ಜೊತೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

  ಅನು ಪ್ರಭಾಕರ್ ಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಜನ್ಮದಿನದ ಸಂಭ್ರಮದಲ್ಲಿರುವ ಅನು ಪ್ರಭಾಕರ್ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪತ್ರವನ್ನು ಬರೆದಿದ್ದಾರೆ. ಅಪ್ಪನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿರುವ ಅನು ಪ್ರಭಾಕರ್, ತುಂಬಾ ಪ್ರೀತಿ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಅನು ಪ್ರಭಾಕರ್ ಟ್ವಿಟ್ಟರ್ ನಲ್ಲಿ ಬರೆದ ಭಾವುಕ ಪತ್ರ ಹೀಗಿದೆ. ಮುಂದೆ ಓದಿ..

  ವಯಸ್ಸಿನ ಬಗ್ಗೆ ಅಣುಕಿಸಿದವನಿಗೆ ತಿರುಗೇಟು ನೀಡಿದ ಅನು ಪ್ರಭಾಕರ್ವಯಸ್ಸಿನ ಬಗ್ಗೆ ಅಣುಕಿಸಿದವನಿಗೆ ತಿರುಗೇಟು ನೀಡಿದ ಅನು ಪ್ರಭಾಕರ್

  ಈ ಪ್ರಪಂಚಕ್ಕೆ ನಾನು ಖುಣಿಯಾಗಿದ್ದೇನೆ

  ಈ ಪ್ರಪಂಚಕ್ಕೆ ನಾನು ಖುಣಿಯಾಗಿದ್ದೇನೆ

  'ಇವತ್ತು ನಾನು 40ಕ್ಕೆ ಕಾಲಿಡುತ್ತಿದ್ದೇನೆ. ಕೃತಜ್ಞತೆ, ಎಂಬ ಪದವು ಇಂದು ನನ್ನ ಹೃದಯವನ್ನು ತುಂಬುತ್ತದೆ. ನನಗೆ ಈ ಅದ್ಭುತವಾದ ಜೀವನ ತಂದೆತಾಯಿ, ಕುಟುಂಬ ಮತ್ತು ಕುಟುಂಬದಂತಿರುವ ಸ್ನೇಹಿತರನ್ನು ನೀಡಿರುವ ದೇವರಿಗೆ ಮತ್ತು ಈ ಪ್ರಪಂಚಕ್ಕೆ ಖುಣಿಯಾಗಿದ್ದೇನೆ ಹಾಗೂ ವಂದನೆಗಳನ್ನು ಸಲ್ಲಿಸುತ್ತೇನೆ.

  ನನ್ನ ಜೀವನ ನಿಜವಾದ ಅರ್ಥದಲ್ಲಿ ಪರಿಪೂರ್ಣವಾಯಿತು

  ನನ್ನ ಜೀವನ ನಿಜವಾದ ಅರ್ಥದಲ್ಲಿ ಪರಿಪೂರ್ಣವಾಯಿತು

  ಗಾಯತ್ರಿ ಮತ್ತು ಪ್ರಭಾಕರ್ ಮಗಳಾಗಿ, ವಿಕ್ಕಿಯ ತಂಗಿಯಾಗಿ, ಅನ್ನಪೂರ್ಣಳಾಗಿ ನನ್ನ ಬ್ಲಾಯ ಕಳೆದೆ. ಅನಂತರ ಲಕ್ಷಾಂತರ ಕನ್ನಡಿಗರ ಹೃದಯದಲ್ಲಿ ಅನು ಪ್ರಭಾಕರ್ ಆಗಿ ನೆಲೆಸಿದೆ. ರಘು ಅವ ಜೀವನ ಸಂಗಾತಿಯಾಗಿ, ನಂದನಾಳ ಅಮ್ಮನಾಗುವ ಮೂಲಕ ನನ್ನ ಸುಂದರ ಜೀವನ ನಿಜವಾದ ಅರ್ಥದಲ್ಲಿ ಪರಿಪೂರ್ಣವಾಯಿತು.

  ತಾಯಿಯಾದ ಬಳಿಕ ಡಾಕ್ಟರ್ ಆದ ನಟಿ ಅನು ಪ್ರಭಾಕರ್ತಾಯಿಯಾದ ಬಳಿಕ ಡಾಕ್ಟರ್ ಆದ ನಟಿ ಅನು ಪ್ರಭಾಕರ್

  ವಾಗ್ದಾನ ಮಾಡಿದ ಅನು ಪ್ರಭಾಕರ್

  ವಾಗ್ದಾನ ಮಾಡಿದ ಅನು ಪ್ರಭಾಕರ್

  'ಈ 40 ವರ್ಷಗಳು ಸ್ಮರಣಯೋಗ್ಯ ಜೀವನವಾಗುವಂತೆ ಮಾಡಿದ ಪ್ರತಿಯೊಬ್ಬರಿಗೂ ನನ್ನ ವಂದನೆಗಳನ್ನು ಅರ್ಪಿಸುತ್ತೇನೆ. ಕೃತಜ್ಞತೆ ತುಂಬಿದ ಜೀವನವನ್ನು ನಡೆಸುವಲ್ಲಿ ನನ್ನ ತಂದೆತಾಯಿ ನನ್ನಲ್ಲಿ ಅಂತರ್ಗತ ಮಾಡಿರುವ ಮೂಲ ತತ್ವಗಳಂತೆ ಜೀವನವನ್ನು ಸಾಗಿಸುತ್ತೇನೆಂದು ನನಗೆ ವಾಗ್ದಾನ ಮಾಡಿಕೊಳ್ಳುತ್ತೇನೆ.'

  'Nodidavaru Enantare' ಹೊಸದೆಲ್ಲ ಆಚೆ ಬರ್ಬೇಕು | SriMurali | Filmibeat Kannada
  ಅಪ್ಪನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ

  ಅಪ್ಪನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ

  'ಅಪ್ಪ..ನಾನು ನಿಮ್ಮನ್ನು ತುಂಬಾ ಮಿಸ್ ಮಡಿಕೊಳ್ಳುತ್ತೀನಿ, ಆದರೆ ನನಗೆ ಗೊತ್ತು ಪ್ರತಿಕ್ಷಣ ನೀವು ಪಕ್ಕದಲ್ಲಿದ್ದು ನನ್ನ ಕೈಹಿಡಿದು ಆಶೀರ್ವಾದ ಮಾಡಿ ನನ್ನನ್ನು ನಡೆಸುತ್ತೀರಿ ಎಂದು' ಎಂದು ಬರೆದುಕೊಂಡಿದ್ದಾರೆ

  English summary
  Kannada Actress anu prabhakar pens emotional letter to her Father. She says I miss you the most.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X