ಅನುಪಮ ಪರಮೇಶ್ವರನ್ ಲವ್ ಸ್ಟೋರಿ ಒನ್ ಸೈಡ್ ಅಂತೆ!

ಗುಂಗುರು ಕೂದಲಿನ ಸುಂದರಿ ಬಟ್ಟಲು ಕಣ್ಣಿನ ಚೆಲುವೆ ನಟಿ ಅನುಪಮ ಪರಮೇಶ್ವರನ್, ಸೌತ್ ಸಿನಿಮಾರಂಗದ ಖ್ಯಾತ ನಟಿಯರಲ್ಲಿ ಒಬ್ಬರು. ಮಲಯಾಳಂ ಮೂಲದ ಈ ಬೆಡಗಿ ಸದ್ಯ ತೆಲುಗಿನ ಸ್ಟಾರ್ ನಟಿಯರ ಪಟ್ಟಿ ಸೇರಿದ್ದಾರೆ. ತೆಲುಗು ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದಾರೆ.

ಅತಿ ಕಡಿಮೆ ಸಮಯದಲ್ಲಿ ಹೆಚ್ಚಿನ ಖ್ಯಾತಿ ಗಳಿಸಿದ ಗರಿಮೆ ಈಕೆಯದ್ದು. ಈ ಮುದ್ದು ಮುಖದ ಚೆಲುವೆಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಕನ್ನಡದಲ್ಲೂ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ ಅನುಪಮ. ಸದ್ಯ ತೆಲುಗಿನಲ್ಲಿ ಹೆಚ್ಚಾಗಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆದರೆ ಈಕೆಯ ಸುತ್ತ ಆಗಾಗ ಒಂದಷ್ಟು ಗಾಸಿಪ್‌ಗಳು ಗಿರಕಿ ಹೊಡೆಯುತ್ತಾ ಇರುತ್ತವೆ.

ಈಗ ಮತ್ತೊಮ್ಮೆ ಗಾಸಿಪ್ ಮೂಲಕವೇ ಅನುಪಮಾ ಪರಮೇಶ್ವರಂ ಸುದ್ದಿಯಾಗಿದ್ದಾರೆ. ಅನುಪಮ ಪರಮೇಶ್ವರನ್ ಪ್ರೀತಿಯಲ್ಲಿ ಬಿದ್ದಿದ್ದಾರಂತೆ. ಹೀಗಂತ ಯಾರೋ ಯಾರದೋ ಹೆಸರನ್ನು ಹೇಳುತ್ತಿಲ್ಲ. ಬದಲಿಗೆ ಈ ಬಗ್ಗೆ ಸಣ್ಣ ಹಿಂಟ್ ಕೊಟ್ಟಿದ್ದರೆ ನಟಿ ಅನುಪಮಾ ಪರಮೇಶ್ವರ ಅದು ಏನು ಎನ್ನುವುದನ್ನು ಮುಂದೆ ಓದಿ...

ಪ್ರೀತಿಯಲ್ಲಿ ಬಿದ್ದ ನಟಿ ಅನುಪಮ!

ಪ್ರೀತಿಯಲ್ಲಿ ಬಿದ್ದ ನಟಿ ಅನುಪಮ!

ಸದ್ಯ ಅನುಪಮಾ ಪರಮೇಶ್ವರನ್ ಅಭಿನಯದ 'ಕಾರ್ತಿಕೇಯ 2' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಆದರೆ ಸಿನಿಮಾಗಿಂತ ಹೆಚ್ಚಾಗಿ ತಮ್ಮ ಲವ್ ಸ್ಟೋರಿ ಮೂಲಕವೇ ಅನುಪಮಾ ಸುದ್ದಿಯಾಗುತ್ತಿದ್ದಾರೆ. ಹೌದು ನಟಿ ಅನುಪಮಾ ಪರಮೇಶ್ವರನ್ ಪ್ರೀತಿಯಲ್ಲಿ ಬಿದ್ದಿದ್ದಾರಂತೆ. ತಮ್ಮ ಬಹುದಿನಗಳ ಪ್ರೀತಿಯನ್ನು ಮನಸ್ಸಲ್ಲೇ ಇಟ್ಟುಕೊಂಡಿದ್ದಾರಂತೆ ಹಾಗಾಗಿ ಇದು ಒಂದು ಸೈಡೆಡ್ ಪ್ರೀತಿ ಎನ್ನುತ್ತಾರೆ ಅನುಪಮ ಪರಮೇಶ್ವರನ್.

ಅನುಪಮ ಹೇಳಿದ ಲವ್ ಕಥೆ!

ಅನುಪಮ ಹೇಳಿದ ಲವ್ ಕಥೆ!

ಇತ್ತೀಚೆಗೆ ಅನುಪಮಾ 'ಕಾರ್ತಿಕೇಯ 2' ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದರು. ಈ ವೇಳೆ ತಮ್ಮ ಲವ್ ಕಹಾನಿ ಬಗ್ಗೆ ಕೂಡ ಅನುಪಮ ಮಾತನಾಡಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ಅನುಪಮಾ ಪರಮೇಶ್ವರನ್, "ನಾನು ಇನ್ನೂ ಹೆಚ್ಚು ದಿನಗಳ ಕಾಲ ಒಂಟಿಯಾಗಿರಲ್ಲ. ಬಹುಶಃ ಇದು ಒನ್ ಸೈಡ್ ಲವ್." ಎಂದು ಹೇಳಿದ್ದಾರೆ ಅನುಪಮ. ಅವರ ಈ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ. ಯಾಕೆಂದರೆ ಅನುಪಮಾ ಪರಮೇಶ್ವರನ್ ಸದ್ಯ ಪ್ರೀತಿಯಲ್ಲಿ ಬಿದ್ದಿದ್ದು ಆ ಹುಡುಗ ಯಾರು ಎನ್ನುವುದನ್ನು ರಿವೀಲ್ ಮಾಡಿಲ್ಲ. ಜೊತೆಗೆ ಇದು ಒಂದು ಸೈಡ್ ಲವ್ ಎಂದು ಹೇಳುವ ಮೂಲಕ ತಾನಿನ್ನೂ ಪ್ರೀತಿಯನ್ನು ವ್ಯಕ್ತಪಡಿಸಿಲ್ಲ ಎನ್ನುವುದನ್ನು ಖಚಿತಗೊಳಿಸಿದ್ದಾರೆ.

ಜಸ್ಪ್ರೀತ್ ಬುಮ್ರಾ, ಅನುಪಮ ಬಗ್ಗೆ ಗಾಸಿಪ್!

ಜಸ್ಪ್ರೀತ್ ಬುಮ್ರಾ, ಅನುಪಮ ಬಗ್ಗೆ ಗಾಸಿಪ್!

ಇನ್ನು ಈ ಹಿಂದೆ ಕ್ರಿಕೆಟಿಗ ಜಸ್ಪ್ರಿತ್ ಬುಮ್ರಾ ಜೊತೆಗೆ ಅನುಪಮಾ ಪರಮೇಶ್ವರನ್ ಹೆಸರು ಕೇಳಿಬಂದಿತ್ತು. ಜಸ್ಪ್ರೀತ್ ಬುಮ್ರಾ ಜೊತೆಗೆ ಅನುಪಮಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಹೆಚ್ಚು ಸಮಯ ತೆಗೆದುಕೊಳ್ಳದೇ ಈ ಬಗ್ಗೆ ಅನುಪಮಾ ಸ್ಪಷ್ಟನೆ ನೀಡಿದ್ದರು. ಜಸ್ಟಿಸ್ ಮತ್ತು ತಾನು ಉತ್ತಮ ಸ್ನೇಹಿತರು ಎಂದು ಹೇಳುವ ಮೂಲಕ ಗಾಸಿಪ್‌ಗೆ ಬ್ರೇಕ್ ಹಾಕಿದ್ದರು. ಆದರೆ ಈಗ ಒಂದು ಸೈಡ್ ಲವ್ ಎಂದು ಹೇಳಿಕೊಂಡಿದ್ದಾರೆ.

ಅನುಪಮ ಹುಡುಗನ ಬಗ್ಗೆ ಕುತೂಹಲ!

ಅನುಪಮ ಹುಡುಗನ ಬಗ್ಗೆ ಕುತೂಹಲ!

ಅನುಪಮಾ ಪರಮೇಶ್ವರನ್ ಈ ರೀತಿ ಹೇಳಿಕೆ ನೀಡುತ್ತಾ ಇದ್ದಂತೆಯೇ ಹುಡುಗ ಯಾರು ಎನ್ನುವ ಬಗ್ಗೆ ಪ್ರಶ್ನೆ ಹುಟ್ಟಿಕೊಂಡಿದೆ. ಅನುಪಮ ಸಿನಿಮಾರಂಗಕ್ಕೆ ಸಂಬಂಧಿಸಿದವರನ್ನು ಪ್ರೀತಿಸುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. ಸದ್ಯದಲ್ಲೆ ಅನುಪಮಾ ಪ್ರೀತಿಯ ಬಗ್ಗೆ ಮಾತಾಡಬಹುದು. ಯಾಕೆಂದರೆ, ಇನ್ನೂ ಹೆಚ್ಚು ದಿನಗಳ ಕಾಲ ಒಂಟಿಯಾಗಿ ಉಳಿಯುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಇತ್ತ ಅನುಪಮಾ ಸೌತ್ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದು, ಕನ್ನಡದಲ್ಲೂ ಕೂಡ ಸಿನಿಮಾ ಮಾಡಿದ್ದಾರೆ. ಕನ್ನಡದ 'ನಟಸಾರ್ವಭೌಮ' ಸಿನಿಮಾದಲ್ಲಿ ನಟ ಪುನೀತ್ ರಾಜಕುಮಾರ್ ಜೊತೆಗೆ ಅನುಪಮ ತೆರೆ ಹಂಚಿಕೊಂಡಿದ್ದಾರೆ

More from Filmibeat

English summary
Actress Anupama Parameswaran Is In Love With A Boy, But Its One Sided, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X