Just In
Don't Miss!
- News
‘ನಕಲಿ ವ್ಯಾಕ್ಸಿನೇಷನ್’ ವಿಡಿಯೋ ವೈರಲ್: ಸ್ಪಷ್ಟನೆ ನೀಡಿದ ಆರೋಗ್ಯ ಸಚಿವ ಸುಧಾಕರ್
- Education
Karnataka SSLC Exam 2021: ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾತಿ ಕಡ್ಡಾಯ ಇಲ್ಲ
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Sports
ಭಾರತ vs ಆಸೀಸ್: ಕಾಕತಾಳೀಯ, ಕುತೂಹಲಕಾರಿ ಅಂಕಿ-ಅಂಶಗಳು!
- Automobiles
ಕೋವಿಡ್ ವ್ಯಾಕ್ಸಿನ್ ಸಾಗಾಣಿಕೆಗಾಗಿ ಹೊಸ ಮಾದರಿಯ ಟ್ರಕ್ ಸಿದ್ದಪಡಿಸಿದ ಭಾರತ್ ಬೆಂಝ್
- Lifestyle
ಶೇವಿಂಗ್ ಟಿಪ್ಸ್: ಹೀಗೆ ಮಾಡಿದರೆ ತ್ವಚೆ ಮೃದುವಾಗಿರುತ್ತೆ, ತುರಿಕೆ ಇರಲ್ಲ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆಳ್ಳಿತೆರೆಯಲ್ಲಿ ಮೋಡಿ ಮಾಡುತ್ತಿರುವ ಮುದ್ದು ಚೆಲುವೆ ಅನುಷಾ.!
ಸ್ಯಾಂಡಲ್ ವುಡ್ ನಲ್ಲಿ ಹೊಸ ಭರವಸೆ ಮೂಡಿಸಿರುವ ನಟಿ ಅನುಷಾ ರೈ ಮೂರನೇ ಚಿತ್ರವನ್ನ ಆರಂಭಿಸಿದ್ದಾರೆ. ಅದ್ಧೂರಿಯಾಗಿ ಸೆಟ್ಟೇರಿದ್ದ 'ಕರ್ಷಣಂ' ಚಿತ್ರದಲ್ಲಿ ಅನುಷಾ ಪತ್ರಕರ್ತೆ ಪಾತ್ರವನ್ನ ನಿಭಾಯಿಸಲಿದ್ದಾರೆ.
'ಚಂದ್ರಲೇಖಾ' ಧಾರಾವಾಹಿ ಖ್ಯಾತಿಯ ಧನಂಜಯ್ ಅತ್ರೆ ಚೊಚ್ಚಲ ಬಾರಿಗೆ ನಾಯಕನಾಗಿ ಅಭಿನಯಿಸುತ್ತಿರುವ 'ಕರ್ಷಣಂ' ಚಿತ್ರ ಇದಾಗಿದ್ದು, ಕ್ರೈಂ ಜರ್ನಲಿಸ್ಟ್ ಆಗಿ ಅನುಷಾ ಬಣ್ಣ ಹಚ್ಚಿದ್ದಾರೆ. ಈ ಹಿಂದೆ ಕನ್ನಡದಲ್ಲಿ ಮೂಡಿಬಂದಿದ್ದ 'ಮಹಾಭಾರತ' ಎಂಬ ಜನಪ್ರಿಯ ಧಾರಾವಾಹಿಯನ್ನು ನಿರ್ದೇಶಿಸಿದ್ದ ಶರವಣ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಅನುಷಾ ರೈ ಅವರ ಹೆಚ್ಚಿನ ಫೋಟೋಗಳು ನೋಡಿ
ಹಾಗಿದ್ರೆ, ಅನುಷಾ ರೈ ಅವರ ಮೊದಲ ಸಿನಿಮಾ ಯಾವುದು.? ಈ ಹಿಂದೆ ಏನ್ಮಾಡ್ತಿದ್ದರು.? ಎಂಬ ಕುತೂಹಲಕಾರಿ ಮಾಹಿತಿ ತಿಳಿಯಲು ಈ ಸ್ಟೋರಿ ಪೂರ್ತಿ ಓದಿ.....

ತುಮಕೂರಿನ ಮುದ್ದು ಚೆಲುವೆ
ಈ ಮುದ್ದು ಮುಖದ ಹುಡುಗಿ ಹುಟ್ಟಿ ಬೆಳೆದದ್ದು ತುಮಕೂರಿನಲ್ಲಿ. ತಂದೆ ಹನುಮಂತ್ ರಾಯ್, ತಾಯಿ ಭಾಗ್ಯ. ತುಮಕೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದ ಅನುಷಾ, ಬೆಂಗಳೂರಿನ ಆಚಾರ್ಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿಇ ಮುಗಿಸಿದ್ದಾರೆ. ಎಂಟೆಕ್ ಮಾಡಿ ಇಂಜಿನಿಯರ್ ಆಗಬೇಕು ಎಂದುಕೊಂಡಿದ್ದ ಅನುಷಾ ಆಗಿದ್ದು ನಟಿ.

ಹಂಸಲೇಖ ಅವರ ಸ್ಟೂಡೆಂಟ್
ನಟನೆಯ ಜೊತೆ ಸಂಗೀತದಲ್ಲಿ ಆಸಕ್ತಿ ಹೊಂದಿರುವ ಅನುಷಾ ಈ ಮೊದಲು ಹಂಸಲೇಖ ಮ್ಯೂಸಿಕ್ ಸ್ಕೂಲ್ ನಲ್ಲಿ ಸಂಗೀತ ಕಲಿತ್ತಿದ್ದಾರಂತೆ. ಅಲ್ಲಿದಾಗಲೇ ಮೊದಲ ಸಿನಿಮಾ ಮಾಡುವ ಅವಕಾಶ ಬಂದಿದೆ. ನಂತರ ಬೆಳ್ಳಿತೆರೆಗೆ ಕಾಲಿಟ್ಟಿ ಅನುಷಾ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

'ಮಹಾನುಭಾವರು' ಚಿತ್ರದ ನಾಯಕಿ
ಅನುಷಾ ರೈ ಅಭಿನಯದ ಎರಡು ಸಿನಿಮಾಗಳು ಈಗಾಗಲೇ ತೆರೆಕಂಡಿದೆ. 'ಮಹಾನುಭಾವರು' ಮತ್ತು 'ಬಿಎಂಡಬ್ಲ್ಯೂ' ಚಿತ್ರಗಳಲ್ಲಿ ಅನುಷಾ ನಾಯಕಿಯಾಗಿ ಅಭಿನಯಿಸಿದ್ದರು. ತಮ್ಮ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.

ಕಿರುತೆರೆಯ ಫೇಮಸ್ ನಟಿ
ಸಿನಿಮಾ ಮಾತ್ರವಲ್ಲ 'ಸರಯೂ', 'ರಾಧಾರಮಣ', 'ಅಣ್ಣಯ್ಯ', ಧಾರಾವಾಹಿಗಳಲ್ಲಿ ಹಾಗೂ 'ಪ್ರಾರ್ಥನಾ' ಎಂಬ ಟೆಲಿ ಫಿಲ್ಮ್ ನಲ್ಲಿ ಅನುಷಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ನಾಗಕನ್ನಿಕೆ ಧಾರಾವಾಹಿಯಲ್ಲಿ ಅನುಷಾ ರೈ ನಟಿಸುತ್ತಿದ್ದಾರೆ.

ತಮಿಳಿನಲ್ಲೂ ಅವಕಾಶ ಹೊಂದಿದ್ದಾರೆ
ಕನ್ನಡ ಮಾತ್ರವಲ್ಲ ತಮಿಳು ಸಿನಿರಂಗದಲ್ಲೂ ಗುರುತಿಸಿಕೊಂಡಿರುವ ಅನುಷಾಗೆ ಬಹಳಷ್ಟು ಅವಕಾಶಗಳು ಬರುತ್ತಿವೆಯಂತೆ. ತಮಿಳಿನಲ್ಲಿ ಪ್ರಸಾರವಾಗುತ್ತಿರುವ 'ವಾಣಿರಾಣಿ' ಸೀರಿಯಲ್‌ನಲ್ಲಿ ಕೂಡಾ ಅನುಷಾ ಲೀಡ್ ರೋಲ್ ಮಾಡಿದ್ದಾರೆ.

'ಕರ್ಷಣಂ' ಚಿತ್ರತಂಡದ ಬಗ್ಗೆ....
ಧನಂಜಯ್ ಅತ್ರೆ ಅವರು ಸ್ವತಃ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ವಿಜಯ್ ಚೆಂಡೂರ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರೋ ಚಿತ್ರ. ಈ ಚಿತ್ರಕ್ಕೆ ಮೋಹನ್ ಎಂ ಮುಗುಡೇಶ್ವರ್ ಅವರ ಛಾಯಾಗ್ರಹಣ, ಗೌರಿ ಅತ್ರೆ ಕಥೆ, ವೆಂಕಟೇಶ್ ಸಂಕಲನ, ಎಸ್. ಎಸ್ ಅರ್ಜುನ್ ಅವರ ಸಹ ನಿರ್ದೇಶನ, ವಸಂತ ರಾವ್ ಎಂ ಕುಲಕರ್ಣಿ ಅವರ ಕಲಾ ನಿರ್ದೇಶನ, ಅಶೋಕ್, ಸತೀಶ್ ಬ್ರಹ್ಮಾವರ್ ಸಾಹಸವಿದೆ.