ಆಶಿಕಾ ಸಹೋದರಿ ಅನುಷಾಗೂ ಸಿಕ್ತು ದೊಡ್ಡ ಆಫರ್
ನಟಿ ಆಶಿಕಾ ರಂಗನಾಥ್ ಸಿನಿಮಾಗಳ ಮೇಲೆ ಸಿನಿಮಾಗಳನ್ನು ಮಾಡಿ ಮುಂದೆ ಸಾಗುತ್ತಿದ್ದಾರೆ. ಒಳ್ಳೆ ಒಳ್ಳೆಯ ಅವಕಾಶಗಳು ಅವರ ಪಾಲಾಗುತ್ತಿದೆ. ಈಗ ಅವರ ಅಕ್ಕ ಅನುಷಾ ರಂಗನಾಥ್ ಕೂಡ ದೊಡ್ಡ ಆಫರ್ ಪಡೆದಿದ್ದಾರೆ.

ವಿನಯ್ ರಾಜ್ ಕುಮಾರ್ ನಟನೆಯ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ಅನುಷಾ ರಂಗನಾಥ್ ಕಾಣಿಸಿಕೊಳ್ಳುತ್ತಿದ್ದಾರೆ. ಅನುಷಾ ಚಿತ್ರದಲ್ಲಿ ಬ್ಯಾಂಕ್ ಉದ್ಯೋಗಿಯ ಪಾತ್ರ ಮಾಡುತ್ತಿದ್ದು, ಗಟ್ಟಿಯಾದ ಪಾತ್ರ ಇದಾಗಿದೆಯಂತೆ. ಇಂತಹ ಪಾತ್ರವನ್ನು ಇದೇ ಮೊದಲ ಬಾರಿಗೆ ಅನುಷಾ ನಿರ್ವಹಿಸುತ್ತಿದ್ದಾರೆ.
ಮೊದಲು ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಈ ನಟಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಂದ ಮೆಚ್ಚುಗೆ ಪಡೆದಿದ್ದರು. ಅದರ ನಂತರ 'ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಟಿ' ಹಾಗೂ 'ಕೌರವ 2' ಚಿತ್ರಗಳಲ್ಲಿ ನಟಿಸಿದ್ದರು. ಬಳಿಕ ಒಂದು ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದು, ಆ ಸಮಯ ಈಗ ಬಂದಿದೆ. ಅಂದಹಾಗೆ, ಈ ಹೊಸ ಸಿನಿಮಾವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುತ್ತಿದ್ದು, ಕರಮ್ ಚಾವ್ಲಾ ನಿರ್ದೇಶನ ಮಾಡುತ್ತಿದ್ದಾರೆ.

ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್ ಬಾಕ್ಸರ್ ಪಾತ್ರವನ್ನು ಮಾಡುತ್ತಿದ್ದು, ಇತ್ತೀಚಿಗಷ್ಟೆ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿತ್ತು.


Click it and Unblock the Notifications











