ಚಿತ್ರರಂಗದಲ್ಲಿ 14 ವರ್ಷ ಪೂರೈಸಿದ ಸ್ವೀಟಿ ಅನುಷ್ಕಾ ಶೆಟ್ಟಿ

ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಈಗ ಮತ್ತೊಂದು ಮೈಲಿಗಲ್ಲು ನಿರ್ಮಿಸಿದ್ದಾರೆ. ಚಿತ್ರರಂಗದಲ್ಲಿ 14 ವರ್ಷ ಪೂರೈಸಿದ ಸಂಭ್ರಮದಲ್ಲಿ ಸ್ವೀಟಿ ಇದ್ದಾರೆ.

14 ವರ್ಷ ಪೂರ್ಣ ಮಾಡಿರುವ ಅನುಷ್ಕಾಗೆ ಅಭಿಮಾನಿಗಳ ಕಡೆಯಿಂದ ಶುಭಾಶಯ ತಲುಪಿದೆ. ಚಿತ್ರರಂಗದ ನಟ, ನಟಿಯರು ಸಹ ಅನುಷ್ಕಾಗೆ ವಿಶ್ ಮಾಡುತ್ತಿದ್ದಾರೆ. #14YearsOfAnushkaShetty ಎಂದು ಹ್ಯಾಶ್ ಟ್ಯಾಗ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸ್ವೀಟಿಗೆ ಶುಭಾಶಯ ತಿಳಿಸುತ್ತಿದ್ದಾರೆ.

ಮೂಲತಃ ಕರ್ನಾಟಕದ ಪುತ್ತೂರಿನವರಾದ ಅನುಷ್ಕಾ ಶೆಟ್ಟಿ 'ಸೂಪರ್' ಎಂಬ ತೆಲುಗು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದರು. ನಿರ್ದೇಶಕ ಪೂರಿ ಜಗನ್ನಾಥ್ ಅವರಿನ್ನು ಚಿತ್ರರಂಗಕ್ಕೆ ಪರಿಚಯ ಮಾಡಿದರು.

actress anushka shetty completed 14 years in movie industry

ತೆಲುಗು ಮತ್ತು ತಮಿಳು ಚಿತ್ರರಂಗದ ಬೇಡಿಕೆಯ ನಟಿಯಾಗರುವ ಅನುಷ್ಕಾ ಶೆಟ್ಟಿ, ಸದ್ಯ 45ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. 'ಬಾಹುಬಲಿ', 'ಆರುಂಧತಿ', 'ಸಿಂಗಂ' 'ಬಿಲ್ಲಾ' 'ಮಿರ್ಚಿ', 'ಲಿಂಗ' 'ಎನ್ನೈ ಅರಿಂದಾಲ್', 'ರುದ್ರಮದೇವಿ' ಸಿನಿಮಾಗಳು ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿವೆ.

ಬರೀ ಒಂದೇ ರೀತಿಯ ಪಾತ್ರಕ್ಕೆ ಅಂಟಿ ಕೊಳ್ಳದೆ ಎಲ್ಲ ರೀತಿಯ ಪಾತ್ರ ಮಾಡುವ ಮೂಲಕ ಅನುಷ್ಕಾ ಬೇರೆಲ್ಲ ನಾಯಕಿಯರಿಗಿಂತ ವಿಭಿನ್ನವಾಗಿ ನಿಲ್ಲುತ್ತಾರೆ.

actress anushka shetty completed 14 years in movie industry

ಸದ್ಯ, ಚಿರಂಜೀವಿ ನಟನೆಯ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ರಾಣಿ ಲಕ್ಷ್ಮಿ ಬಾಯಿ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದಾರೆ.

More from Filmibeat

English summary
South indian actress Anushka Shetty completed 14 years in movie industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X