ಅಭಿಮಾನಿಗಳಿಗೆ ಹೊಸ ಚಾಲೆಂಜ್ ನೀಡಿದ ಆಶಾ ಭಟ್
'ರಾಬರ್ಟ್' ಸಿನಿಮಾ ನಾಯಕಿ ಅಭಿಮಾನಿಗಳಿಗೆ ಹೊಸ ಚಾಲೆಂಜ್ ಹಾಕಿದ್ದಾರೆ. ಆಶಾ ಭಟ್ ನೀಡಿರುವ ಸವಾಲು ತುಂಬ ಇಂಟರೆಸ್ಟಿಂಗ್ ಆಗಿದೆ.
ಆಶಾ ಭಟ್ ಕೆಲವೊಂದು ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇವುಗಳು 'ರಾಬರ್ಟ್' ಸಿನಿಮಾದ ಚಿತ್ರೀಕರಣದ ಮುಕ್ತಾಯದ ಸಮಯದ ಫೋಟೋಗಳಾಗಿದೆ. ಆ ಫೋಟೋಗಳನ್ನು ನೋಡಿ ಅವರ ಮಾತನ್ನು ಊಹಿಸಬೇಕಾಗಿದೆ.
ನಿರ್ದೇಶಕ ತರುಣ್ ಸುಧೀರ್ ಹಾಗೂ ಸಿನಿಮಾಟೋಗ್ರಾಫರ್ ಸುಧಾಕರ್ ಎಸ್ ರಾಜ್ ಜೊತೆಗೆ ಆಶಾ ಭಟ್ ಫೋಟೋ ತೆಗೆದುಕೊಂಡಿದ್ದಾರೆ. ಮಾತನಾಡುವ ಸಮಯದಲ್ಲಿ, ಸಹಜವಾಗಿ ಈ ಫೋಟೋಗಳನ್ನು ಕ್ಲಿಕ್ ಮಾಡಲಾಗಿದೆ.

ಈ ಫೋಟೋಗಳನ್ನು ನೋಡಿ ಅವರ ನಡುವೆ ನಡೆದ ಸಂಭಾಷಣೆಯನ್ನು ಹೇಳಬೇಕಿದೆ. ನಿಮ್ಮ ಕಾಮೆಂಟ್ಸ್ ಓದಲು ಉತ್ಸುಕಳಾಗಿದ್ದೇನೆ ಎಂದು ಆಶಾ ಭಟ್ ಹೇಳಿದ್ದಾರೆ.

ಭದ್ರಾವತಿ ಬ್ಯೂಟಿ ಆಶಾ ಭಟ್ 'ರಾಬರ್ಟ್' ಸಿನಿಮಾದ ಮೂಲಕ ಕನ್ನಡದಲ್ಲಿ ಲಾಂಚ್ ಆಗುತ್ತಿದ್ದಾರೆ. ದರ್ಶನ್ ನಟನೆಯ ಈ ಸಿನಿಮಾ ಏಪ್ರಿಲ್ 9ಕ್ಕೆ ಬಿಡುಗಡೆ ಆಗುತ್ತಿದೆ. ರಾಮ ನವಮಿ ಹಾಗೂ ಗುಡ್ ಫ್ರೈಡೆ ನಡುವೆ ಸಿನಿಮಾ ರಿಲೀಸ್ ಆಗುತ್ತಿದೆ .
English summary
Robert actress Asha Bhat gave a challenge to her fans.


Click it and Unblock the Notifications