For Quick Alerts
  ALLOW NOTIFICATIONS  
  For Daily Alerts

  ಈ ಬಾಲ್ಯದ ಫೋಟೊ ಕನ್ನಡದ ಯಾವ ನಟಿಯದ್ದು ಎಂದು ಗುರುತಿಸಬಲ್ಲಿರಾ?

  |

  ನಿನ್ನೆ( ನವೆಂಬರ್ 14) ಮಕ್ಕಳ ದಿನಾಚರಣೆಯ ಪ್ರಯುಕ್ತ ಹಲವಾರು ಸಿನಿ ತಾರೆಯರು ತಮ್ಮ ಬಾಲ್ಯದ ಚಿತ್ರಗಳನ್ನು ಹಂಚಿಕೊಂಡು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಹೀಗೆ ನಟ ಹಾಗೂ ನಟಿಯರು ಹಂಚಿಕೊಂಡ ಬಾಲ್ಯದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಾಲಿಗೆ ಕನ್ನಡದ ಯುವ ನಟಿಯೋರ್ವಳ ಈ ಬಾಲ್ಯದ ಫೋಟೋ ಕೂಡಾ ಸೇರ್ಪಡೆಗೊಂಡಿದೆ.

  ಈಗಾಗಲೇ ಫೋಟೋದಲ್ಲಿ ಭರತನಾಟ್ಯದ ಪೋಸ್ ನೀಡುತ್ತಿರುವ ನಟಿ ಯಾರೆಂದು ನಿಮ್ಮಲ್ಲಿ ಕೆಲವರು ಸರಿಯಾಗಿ ಊಹಿಸಿರಬಹುದು ಹಾಗೂ ಇನ್ನೂ ಹಲವರಿಗೆ ಈ ನಟಿ ಯಾರೆಂಬುದನ್ನು ಊಹಿಸಲು ಆಗದೆ ಇರಬಹುದು. ಒಂದುವೇಳೆ ಈ ಫೋಟೋದಲ್ಲಿರುವುದು ಕನ್ನಡದ ಯುವ ನಟಿ ಆಶಾ ಭಟ್ ಎಂದು ನೀವು ಊಹಿಸಿದ್ದರೆ ನಿಮ್ಮ ಊಹೆ ಸರಿ ಇಲ್ಲವಾದರೆ ನಿಮ್ಮ ಊಹೆ ತಪ್ಪು.

  ಹೌದು, ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಭದ್ರಾವತಿ ಮೂಲದ ಅಪ್ಪಟ ಕನ್ನಡತಿ ಆಶಾ ಭಟ್ ಅವರ ಬಾಲ್ಯದ ಫೋಟೋ ಇದಾಗಿದೆ. ಈ ಫೋಟೋವನ್ನು ತನ್ನ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯ ಸ್ಟೋರಿ ಮೂಲಕ ಹಂಚಿಕೊಂಡಿದ್ದ ನಟಿ ಆಶಾ ಭಟ್ ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯ ಕೋರಿದ್ದಾರೆ.

  ರಾಬರ್ಟ್ ಚಿತ್ರದ ನಂತರ ಕನ್ನಡದ ಯಾವುದೇ ಚಿತ್ರದಲ್ಲಿಯೂ ಕಾಣಿಸಿಕೊಳ್ಳದ ನಟಿ ಆಶಾ ಭಟ್ ಅಭಿನಯದ ಓರಿ ದೇವುಡ ಎಂಬ ತೆಲುಗು ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಗೊಂಡಿತ್ತು. ಇದು ತಮಿಳಿನ ಓ ಮೈ ಕಡವುಲೆ ಚಿತ್ರದ ರಿಮೇಕ್ ಆಗಿದ್ದು, ಕನ್ನಡದಲ್ಲಿಯೂ ಈ ಚಿತ್ರ ಲಕ್ಕಿ ಮ್ಯಾನ್ ಎಂಬ ಶೀರ್ಷಿಕೆ ಅಡಿಯಲ್ಲಿ ರಿಮೇಕ್ ಆಗಿತ್ತು. ಇದರಲ್ಲಿ ಪುನೀತ್ ರಾಜ್ ಕುಮಾರ್ ಹಾಗೂ ಡಾಲಿ ಕೃಷ್ಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.

  English summary
  Actress Asha Bhat shared her childhood photo on the occasion of Children's Day
  Tuesday, November 15, 2022, 6:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X