For Quick Alerts
  ALLOW NOTIFICATIONS  
  For Daily Alerts

  ಹಳ್ಳಿ ಜೀವನ ನಡೆಸುತ್ತಿದ್ದಾರೆ ರಾಬರ್ಟ್ ಬೆಡಗಿ ಆಶಾ ಭಟ್

  |

  ಕಲಾವಿದರಿಗೆ ಯಶಸ್ಸು ಅನ್ನೋದು ತುಂಬಾ ಅಗತ್ಯ. ಆದರೆ ಸಿಕ್ಕ ಯಶಸ್ಸನ್ನು ಹೇಗೆ ಬಳಸಿಕೊಳ್ಳಬೇಕು ಅನ್ನೋದು ತುಂಬಾ ಇಂಪಾರ್ಟೆಂಟ್. ಕೆಲವರಂತು ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ತಮಗೆ ತಾವೇ ದೊಡ್ಡ ಸೆಲೆಬ್ರೇಟಿಸ್ ಅಂದುಕೊಳ್ಳುತ್ತಾರೆ. ಇನ್ನು ಕೆಲವರು ಅದೆಷ್ಟೇ ದೊಡ್ಡ ಸ್ಟಾರ್‌ಗಳೊಂದಿಗೆ ಕೆಲಸ ಮಾಡಿರಲಿ, ಹೆಸರು ಸಂಪಾದಿಸಿರ್ಲಿ, ತಮ್ಮವರು, ತಮ್ಮ ಜಾಗ ಅಂತ ಬಂದಾಗ ಸಿಂಪಲ್ ಆಗಿ, ಬೇಕಾದ ಹಾಗೆ ಒಗ್ಗಿ ಹೋಗುತ್ತಾರೆ. ಈಗ ಇಷ್ಟೆಲ್ಲಾ ಹೇಳಲು ಕಾರಣ ನಟಿ ಆಶಾ ಭಟ್.

  ರಾಬರ್ಟ್ ಸಿನಿಮಾದಲ್ಲಿ ದರ್ಶನ್‌ಜೊತೆ ತೆರೆಹಂಚಿಕೊಂಡು ಮನೆ ಮಾತಾಗಿರುವ ಇವರು ಸದ್ಯ ತಮ್ಮ ಅಜ್ಜಿ ಮನೆಯಲ್ಲಿ ರೆಸ್ಟ್‌ ಮೂಡ್‌ನಲ್ಲಿ ಇದ್ದಾರೆ. ಹಾಗೇ ಅಲ್ಲಿ ಹೊಸ ಹೊಸ ವಿಚಾರಗಳನ್ನು ಕಲಿಯುತ್ತಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

  ಇತ್ತೀಚೆಗಷ್ಟೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಅಜ್ಜಿ ಮನೆಯಲ್ಲಿ ಅಡಿಕೆ ಸುಲಿಯುವ ವೀಡಿಯೋ ಶೇರ್ ಮಾಡಿದ್ದ ಆಶಾ ಭಟ್, ನಂತರ ಅಲ್ಲಿನ ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಸೇರಿ ಲಗೋರಿ ಕೂಡ ಆಡಿದ್ದರು. ಹೊಲ ಗದ್ದೆಗಳಲ್ಲಿ ಸಮಯ ಕಳೆಯುವ ಬಗ್ಗೆ ಶೇರ್ ಮಾಡಿಕೊಂಡಿದ್ದರು. ಇದೀಗ ಹಳ್ಳಿಯಲ್ಲಿ ಕುಚಲಕ್ಕಿ ರೊಟ್ಟಿಯನ್ನು ತಾವೇ ಮಾಡಿದ್ದಾರೆ. ಕುಚಲಕ್ಕಿ ರೊಟ್ಟಿಯನ್ನು ದಕ್ಷಿಣ ಕನ್ನಡ ಭಾಗಗಳಲ್ಲಿ ಹೆಚ್ಚಾಗಿ ಮಾಡುವ ರೂಢಿ ಇದೆ. ಬಾಳೆ ಎಲೆಯಲ್ಲಿ ಕುಚಲಕ್ಕಿ ಹಿಟ್ಟನ್ನು ಕೈಯಲ್ಲೆ ತಟ್ಟಿ ಕಾವಲಿಗೆ ಹಾಕಿ ಮಾಡುವ ವಿಧಾನ ಸ್ವಲ್ಪ ಕಷ್ಟವೇ ಸರಿ. ಇದನ್ನು ತನ್ನ ಅಕ್ಕಿಯಿಂದ ಕಲಿತು ಸಲೀಸಾಗಿ ಆಶಾ ಭಟ್ ಮಾಡಿ ಖುಷಿ ಪಟ್ಟಿದ್ದಾರೆ.

  Actress Asha Bhat spending time at her native place

  ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ ಆಶಾ ಭಟ್. ಈ ವೀಡಿಯೋದಲ್ಲಿ ಆಶಾ ಭಟ್ ಅವರು ಒಲೆಯ ಮೇಲೆ ರೊಟ್ಟಿಯನ್ನು ಮಾಡುತ್ತಿರೊದನ್ನು ನೋಡಿದ ಅಭಿಮಾನಿಗಳು ಬಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.ಆಶಾ ಭಟ್ ಸರಳತೆ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ.

  ಇನ್ನೂ ನಟಿ ಆಶಾ ಭಟ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಮೂಲಕ ಮೊದಲನೆಯದಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ರಾಬರ್ಟ್ ಸಿನಿಮಾ ಒಂದರಲ್ಲೇ ಅಭಿನಯಿಸಿದ್ದರು. ಸಾಕಷ್ಟು ಜನಪ್ರಿಯತೆ ಸಹ ಪಡೆದುಕೊಂಡಿದ್ದಾರೆ. ಸಿನಿಮಾ ರಂಗಕ್ಕೆ ಬರೋಕು ಮುಂಚೆ ಆಶಾ ಭಟ್ ಮಾಡೆಲ್‌ ಆಗಿ ಸಾಕಷ್ಟು ಹೆಸರು ಮಾಡಿದ್ದರು. 2014 ರಲ್ಲಿ ಮಿಸ್ ಸುಪ್ರನ್ಯಾಷನಲ್ ಮತ್ತು ಮಿಸ್ ದೀವಾ ಸುಪ್ರನ್ಯಾಷನಲ್ ಎನ್ನುವ ಟೈಟಲ್ ಅನ್ನು ಪಡೆದುಕೊಂಡಿದ್ದಾರೆ. 2019 ರಲ್ಲಿ ಹಿಂದಿಯಲ್ಲಿ ವಿದ್ಯುತ್ ಜಮ್ವಾಲ್ ಅವರ ಜೊತೆಗೆ ಜಂಗ್ಲಿ ಚಿತ್ರದಲ್ಲಿ ಮೊದಲನೆಯದಾಗಿ ನಟಿಸಿದ್ದಾರೆ. ಇದರಲ್ಲಿ ಆಶಾ ಭಟ್ ಅವರು ಮೀರಾ ಪಾತ್ರದಲ್ಲಿ ನಟಿಸಿದ್ದರು.

  Actress Asha Bhat spending time at her native place

  ರಾಬರ್ಟ್ ಸಿನಿಮಾದ ಬಳಿಕ ನಟಿ ಆಶಾ ಭಟ್‌ರನ್ನ ಅರಸಿ ಸಾಕಷ್ಟು ಆಫರ್ ಗಳು ಬರುತ್ತಿದ್ದು, ಸದ್ಯ ಉಪೇಂದ್ರ ಅಭಿನಯದ ಕಬ್ಜ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೇ ತೆಲುಗಿನ ಒಂದು ಪ್ರಾಜೆಕ್ಟ್‌ ಕೂಡ ಆಶಾ ಭಟ್ ಕೈಯಲ್ಲಿದ್ದು,ಇನ್ನು ಟೈಟಲ್ ಫೈನಲ್ ಆಗಬೇಕಿದೆ. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಆಶಾ ಭಟ್ ತೊಡಗಿಸಿಕೊಂಡಿದ್ದು, ಅಭಿಮಾನಿಗಳು ಕೂಡ ಖುಷಿಯಾಗಿದ್ದಾರೆ.

  English summary
  Roberrt movie heroine asha bhat currently at her native place. Shared some videos.
  Tuesday, October 26, 2021, 17:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X