'ರಾಬರ್ಟ್' ನಾಯಕಿಯ ಟ್ವಿಟ್ಟರ್-ಇನ್ಸ್ಟಾಗ್ರಾಮ್ ಹ್ಯಾಕ್ ಮಾಡಿದ ಟರ್ಕಿ ತಂಡ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ರಾಬರ್ಟ್ ಚಿತ್ರದ ನಾಯಕಿ ಆಶಾ ಭಟ್ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿದೆ. ಸಾಮಾನ್ಯವಾಗಿ ಹ್ಯಾಕರ್ಸ್ ಗಳಿಗೆ ಸೆಲೆಬ್ರಿಟಿಗಳ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳೆ ಟಾರ್ಗೆಟ್ ಆಗಿರುತ್ತೆ. ಈಗ ಹ್ಯಾಕರ್ಸ್ ಗಳ ಕಣ್ಣು ರಾಬರ್ಟ್ ನಾಯಕಿ ಆಶಾ ಭಟ್ ಅಕೌಂಟ್ ಮೇಲೆ ಬಿದ್ದಿದೆ.

ಇತ್ತೀಚಿಗಷ್ಟೆ ರಾಬರ್ಟ್ ಸಿನಿಮಾಗೆ ಆಯ್ಕೆಯಾದ ಆಶಾ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಆಶಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀಟ್ ಆಗಿದ್ದಾರೆ. ಅವರ ಹ್ಯಾಕ್ ಆಗುವ ಕೆಲವು ನಿಮಿಷಗಳ ಮೊದಲು ಅಭಿಮಾನಿಗಳಿಗೆ ದಸರಹಬ್ಬದ ವಿಶ್ ಮಾಡಿದ್ದರು. ಆ ನಂತರ ಆಶಾ ಭಟ್ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಹ್ಯಾಕ್ ಆಗಿರುವುದು ಗೊತ್ತಾಗಿದೆ.

ಹ್ಯಾಕರ್ಸ್ ಕಳುಹಿಸಿದ ಸಂದೇಶ

ಹ್ಯಾಕರ್ಸ್ ಕಳುಹಿಸಿದ ಸಂದೇಶ

ಆಶಾ ಭಟ್ ಟ್ವಿಟ್ಚರ್ ಮತ್ತು ಇನ್ಸ್ಟಾಗ್ರಾಮ್ ಹ್ಯಾಕ್ ಮಾಡಿದ ಹ್ಯಾಕರ್ಸ್ "ದೆವ್ವ ಕೂಡ ಸಹಿ ಕೇಳುತ್ತಿದೆ" ಎನ್ನುವ ಸಂದೇಶವನ್ನು ಕಳುಹಿಸಿದ್ದರು. ಆಶಾ ಭಟ್ ಟ್ವಿಟ್ಟರ್ ಅಕೌಂಟ್ ನಲ್ಲಿ ಈ ಸಂದೇಶ ಬರುತ್ತಿದ್ದ ಹಾಗೆ ಶಾಕ್ ಆದ ಆಶಾ ಅಕೌಂಟ್ ಹ್ಯಾಕ್ ಆಗಿರುವ ಬಗ್ಗೆ ಗಮನಕ್ಕೆ ಬಂದಿದೆ. ನಂತರ ಹ್ಯಾಕ್ ಆಗಿರುವ ಬಗ್ಗೆ ಕ್ರಮಕೈಗೊಂಡು ಸ್ನೇಹಿತರು ಮತ್ತು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಹ್ಯಾಕ್ ಮಾಡಿದ ಟರ್ಕಿ ತಂಡ

ಹ್ಯಾಕ್ ಮಾಡಿದ ಟರ್ಕಿ ತಂಡ

"ನಿನ್ನ ರಾತ್ರಿ (ಅಕ್ಟೋಬರ್-09) ನನ್ನ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಅಕೌಂಟ್ ಹ್ಯಾಕ್ ಆಗಿದೆ. ಟರ್ಕಿಶ್ ಗ್ರೂಪ್ ಅಕೌಂಟ್ ಹ್ಯಾಕ್ ಮಾಡಿದ್ದಾರೆ. ಅದೃಷ್ಟವಶಾತ್ ನನ್ನ ಟ್ವಿಟ್ಟರ್ ಖಾತೆ ಮತ್ತು ಇನ್ಸ್ಟಾಗ್ರಾಮ್ ಈಗ ನನ್ನ ಸಂಪೂರ್ಣ ನಿಯಂತ್ರಣದಲ್ಲಿದೆ. ಈ ಸಂದೇಶ ಕಳುಹಿಸಿದ್ದು ನಿಮ್ಮ ಆಶಾ ಭಟ್" ಎಂದು ಹೇಳಿದ್ದಾರೆ.

ಅಭಿಮಾನಿಗಳಲ್ಲಿ ಆಶಾ ಮನವಿ

ಅಭಿಮಾನಿಗಳಲ್ಲಿ ಆಶಾ ಮನವಿ

"ನನ್ನ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿತ್ತು. ನನ್ನ ಅಕೌಂಟ್ ನಲ್ಲಿರುವ ಯಾವುದೆ ಲಿಂಕ್ ಅನ್ನು ದಯವಿಟ್ಟು ಕ್ಲಿಕ ಮಾಡಬೇಡಿ ಮತ್ತು ನನ್ನ ಅಕೌಂಟ್ ನಿಂದ ಬರುವ ಸಂದೇಶವನ್ನು ಓಪನ್ ಮಾಡಿ ನೋಡಬೇಡಿ" ಎಂದು ಆಶಾ ಭಟ್ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಭದ್ರಾವತಿಯ ಸುಂದರಿ ಆಶಾ

ಭದ್ರಾವತಿಯ ಸುಂದರಿ ಆಶಾ

ಆಶಾ ಭಟ್ ಅಪ್ಪಟ ಕನ್ನಡದ ಪ್ರತಿಭೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬೆಡಗಿ ಆಶಾ ಭಟ್. 2014ರಲ್ಲಿ ಪೋಲೆಂಡ್ ನಲ್ಲಿ ನಡೆದ ಮಿಸ್ ಸುಪ್ರ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಮಿಸ್ ಸುಪ್ರ ಇಂಟರ್ ನ್ಯಾಷನಲ್ ಮುಡಿಗೇರಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಗೆ ಕಾಲಿಡುವ ಮೊದಲು ಆಶಾ ಹಿಂದಿ ಸಿನಿಮಾದಲ್ಲಿ ಮಿಂಚಿದ್ದಾರೆ. ಇತ್ತೀಚಿಗೆ ಬಾಲಿವುಡ್ ನಲ್ಲಿ ರಿಲೀಸ್ ಆದ ಜಂಗ್ಲಿ ಸಿನಿಮಾದಲ್ಲಿ ಆಶಾ ಬಣ್ಣ ಹಚ್ಚಿದ್ದಾರೆ. ವಿದ್ಯಾತ್ ಜಮ್ವಾಲ ನಾಯಕನಾಗಿ ಕಾಣಿಸಿಕೊಂಡಿದ್ದ ಚಿತ್ರದಲ್ಲಿ ಆಶಾ ಪ್ರಮುಕ ಪಾತ್ರದಲ್ಲಿ ಮಿಂಚಿದ್ದಾರೆ. ಈಗ ಮೊದಲ ಬಾರಿಗೆ ಕನ್ನಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Robert actress Asha Bhat twitter and Instagram account hacked by Turkish group.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X