ದರ್ಶನ್ ಜೊತೆ ನಟಿಸ್ತಿರೋ ಈ ನಟಿ ಯಾರು.. ಗುರುತು ಸಿಕ್ತ?
ಗಣರಾಜ್ಯೋತ್ಸವದ ಈ ವಿಶೇಷ ದಿನ ನಟಿ ಆಶಾ ಭಟ್ ಒಂದು ವಿಶೇಷ ಫೋಟೋ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಶುಭಾಶಯವನ್ನು ತಿಳಿಸಿದ್ದಾರೆ.
ಎನ್ ಸಿ ಸಿ ಫೋಟೋ ಇದಾಗಿದೆ. ಪ್ಯಾರೇಡ್ ನಲ್ಲಿ ಆಶಾ ಭಟ್ ಭಾಗಿಯಾಗಿದ್ದಾರೆ. 10 ವರ್ಷದ ಹಿಂದಿನ ಫೋಟೋ ಇದಾಗಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಶಾ ಭಟ್ ಇಂದು ಈ ಫೋಟೋವನ್ನು ಶೇರ್ ಮಾಡಿದ್ದಾರೆ.
''ಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ಥಾನ್ ಹಮಾರ... ನಮ್ಮ ಸುಂದರವಾದ ಭಾರತ ಧೀರ್ಘಕಾಲ ಬದುಕಬೇಕು.'' ಎಂದು ಬರೆದುಕೊಂಡಿದ್ದಾರೆ. ತುಂಬ ಹಳೆಯ ಫೋಟೋ ಇದಾಗಿದ್ದು, ಇಲ್ಲಿ ಇರುವುದು ತಾವೇ ಎಂದು ವಿಶೇಷ ಸೂಚನೆ ನೀಡಿದ್ದಾರೆ.

ಆಶಾ ಭಟ್ ಪಿಯುಸಿ ಓದುವಾಗ ತೆಗೆದ ಫೋಟೋ ಇದಾಗಿದೆ. ಕಾಲೇಜು ದಿನಗಳಲ್ಲಿ ಮಾಡಲಿಂಗ್ ಮಾಡುತ್ತಿದ್ದ ಆಶಾ ಭಟ್ ಆ ಜೊತೆಗೆ ಎನ್ ಸಿ ಸಿ ಯಲ್ಲಿಯೂ ಇದ್ದರು.
ಭದ್ರಾವತಿ ಬ್ಯೂಟಿ ಆಶಾ ಭಟ್ ಸದ್ಯ 'ರಾಬರ್ಟ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮೂಲಕ ಕನ್ನಡದಲ್ಲಿ ಅವರು ಲಾಂಚ್ ಆಗುತ್ತಿದ್ದಾರೆ. ದರ್ಶನ್ ಈ ಸಿನಿಮಾದ ನಾಯಕರಾಗಿದ್ದು, ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಇದೇ ವರ್ಷ ಬೇಸಿಗೆಯಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.


Click it and Unblock the Notifications











