ಮಾಲ್ಡೀವ್ಸ್ ಬೀಚ್‌ನಲ್ಲಿ ಹಾಟ್ ಆರೆಂಜ್ ಬ್ಯೂಟಿ: ಶರ್ಟ್ ಬಟನ್ ಬಿಚ್ಚಿ ಆಶಿಕಾ ಬಿಂದಾಸ್ ಪೋಸ್

By ಫಿಲ್ಮಿಬೀಟ್ ಡೆಸ್ಕ್

ನಟಿ ಆಶಿಕಾ ರಂಗನಾಥ್ ಸಿನಿಮಾಗಳಿಂದ ಬ್ರೇಕ್ ಪಡೆದು ಸ್ನೇಹಿತೆಯರ ಜೊತೆ ಮಾಲ್ಡೀವ್ಸ್ ಟ್ರಿಪ್ ಹೋಗಿದ್ದಾರೆ. ಕಳೆದೊಂದು ವಾರದಿಂದ ಕಡಲ ತಡಿಯ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿರುವ ಚೆಲುವೆಯರು ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ಧಾರೆ. ಸದ್ಯ ಪಟಾಕಿ ಪೋರಿ ಪೋಸ್ಟ್ ಮಾಡಿರೋ ಫೋಟೊಗಳು ಸಖತ್ ವೈರಲ್ ಆಗ್ತಿದೆ.

ಆಶಿಕಾ ಇತ್ತೀಚೆಗೆ ತಮಿಳು, ತೆಲುಗು ಸಿನಿ ಇಂಡಸ್ಟ್ರಿಗೂ ಎಂಟ್ರಿ ಕೊಟ್ಟಿದ್ದಾರೆ. ಆಕೆಯ ತೆಲುಗು ಸಿನಿಮಾ 'ಅಮೀಗೊಸ್' ಇತ್ತೀಚೆಗೆ ರಿಲೀಸ್ ಆಗಿತ್ತು. ಇನ್ನು ಚಿತ್ರದ ಹಾಡೊಂದರಲ್ಲಿ ಬಿಂದಾಸ್ ಆಗಿ ದರ್ಶನ ಕೊಟ್ಟಿದ್ದ ಚೆಲುವೆ ಅಭಿಮಾನಿಗಳ ಮನಗೆದ್ದಿದ್ದರು. ಸದ್ಯ ಸಹೋದರಿ ಅನುಷಾ ಹಾಗೂ ಸ್ನೇಹಿತೆಯರ ಜೊತೆ ಮದಗಜನ ಅರಗಿಣಿ ಮಾಲ್ಡೀವ್ಸ್‌ನಲ್ಲಿ ಮೋಜು ಮಸ್ತಿ ಮಾಡ್ತಿದ್ದಾರೆ.

Actress Ashika Ranganath enjoys vacation in Maldives with girl gang, Photos Goes Viral

ಸ್ನೇಹಿತೆಯರ ಜೊತೆ ಆಶಿಕಾ ಅದ್ರಾನ್ ಪ್ರೆಸ್ಟೀಜ್ ವಡೂ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದಾರೆ. ಇದು ಮಾಲ್ಡೀವ್ಸ್‌ನಲ್ಲಿ ಬಹಳ ಜನಪ್ರಿಯ ವಾಟರ್ ವಿಲ್ಲಾ ರೆಸಾರ್ಟ್. ಬೀಚ್‌ನಿಂದ ಕೊಂಚ ಒಳಕ್ಕೆ ನೀರಿನ ನಡುವೆ ನಿರ್ಮಿಸಿರುವ ಪುಟ್ಟ ಪುಟ್ಟ ಗುಡಿಸಲು ಮಾದರಿಯ ರೂಮ್‌ಗಳಲ್ಲಿ ಉಳಿದುಕೊಳ್ಳಬಹುದು. ಇನ್ನು ರೆಸಾರ್ಟ್‌ಗೆ ಸೇತುವೆ ಮಾದರಿಯಲ್ಲಿ ದಾರಿ ಕೂಡ ಇದೆ. ಇಲ್ಲಿ ಸ್ಟೇ ಮಾಡುವುದೇ ಥ್ರಿಲ್ಲಿಂಗ್ ಅನುಭವ. ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗುವ ಬಹುತೇಕ ತಾರೆಯರ ನೆಚ್ಚಿನ ತಾಣ ಇದು.

4ನೇ ದಿನ ಮಾಲ್ಡೀವ್ಸ್‌ನಲ್ಲಿ ನಟಿ ಆಶಿಕಾ ಬೀಚ್‌ನಲ್ಲಿ ಆಟ ಆಡಿ ಖುಷಿಪಟ್ಟಿದ್ದಾರೆ. ಡೆನಿಮ್ ಶಾರ್ಟ್ಸ್, ಬಿಳಿ ಕ್ರಾಪ್ ಟಾಪ್, ಅದರ ಮೇಲೆ ಆರೆಂಜ್‌ ಕಲರ್ ಶರ್ಟ್ ಬಟನ್ ಬಿಚ್ಚಿ ಬಿಂದಾಸ್ ಪೋಸ್ ಕೊಟ್ಟಿದ್ದಾರೆ. ಆಶಿಕಾ ರಂಗನಾಥ್ ಸಹೋದರಿ ಅನುಷಾ ಫೋಟೊಗಳನ್ನು ಕ್ಲಿಕ್ಕಿಸಿದ್ದಾರೆ. ಆರೆಂಜ್‌(ಕೆತ್ತಳೆ) ಹಣ್ಣಿನ ಎಮೋಜಿ ಹಾಕಿ ಆಶಿಕಾ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಆಶಿಕಾ ಹಾಟ್ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Actress Ashika Ranganath enjoys vacation in Maldives with girl gang, Photos Goes Viral

ತುಂಡು ಬಟ್ಟೆಯಲ್ಲಿ ಆಶಿಕಾ ಹಾಟ್ ಫೋಟೊಗಳು ಸಖತ್ ವೈರಲ್ ಆಗಿದೆ. ಇನ್ನು ಅಭಿಮಾನಿಗಳು ಲೈಕ್ಸ್, ಕಾಮೆಂಟ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನು ಆಶಿಕಾ ಸಿನಿಮಾಗಳ ವಿಚಾರಕ್ಕೆ ಬಂದರೆ ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್‌ನಲ್ಲಿ 'O2' ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ. ಇನ್ನು ಸಿಂಪಲ್ ಸುನಿ ನಿರ್ದೇಶನದ 'ಗತವೈಭವ' ಚಿತ್ರದಲ್ಲೂ ಆಶಿಕಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

'ಕ್ರೇಜಿ ಬಾಯ್' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಆಶಿಕಾ, ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಆದರೆ ಪಟಾಕಿ ಪೋರಿಗೆ ಈವರೆಗೆ ಒಂದೊಳ್ಳೆ ಬ್ರೇಕ್ ಮಾತ್ರ ಸಿಕ್ಕಿಲ್ಲ. ಸ್ಟಾರ್‌ಗಳ ಸಿನಿಮಾ ಸಾಂಗ್‌ಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಕಾಲಿವುಡ್ ಹಾಗೂ ಟಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಆಕೆಯ 'ರ್ಯಾಂಬೊ -2' ಹಾಗೂ 'ಮದಗಜ' ಸಿನಿಮಾಗಳು ಮಾತ್ರ ಕೊಂಚಮಟ್ಟಿಗೆ ಸದ್ದು ಮಾಡಿದ್ದವು.

ತೆಲುಗಿನ 'ಅಮೀಗೊಸ್' ಚಿತ್ರದ ಹಾಡೊಂದರಲ್ಲಿ ನಟ ಕಲ್ಯಾಣ್ ರಾಮ್ ಜೊತೆ ಆಶಿಕಾ ಹಾಟ್ ಆಗಿ ದರ್ಶನ ಕೊಟ್ಟಿದ್ದರು. ಬಾಲಕೃಷ್ಣ ನಟನೆಯ 'ಧರ್ಮಕ್ಷೇತ್ರಂ' ಚಿತ್ರದ 'ಎನ್ನೋ ರಾತ್ರುಲೊಸ್ತಾಯಿ' ಎನ್ನುವ ಹಾಡನ್ನು ರೀಮಿಕ್ಸ್ ಮಾಡಿ ಚಿತ್ರದಲ್ಲಿ ಬಳಸಿಕೊಳ್ಳಲಾಗಿತ್ತು. ಕಲರ್‌ಫುಲ್ ಸಾಂಗ್‌ನಲ್ಲಿ ಮಾದಕವಾಗಿ ಕಾಣಿಸಿಕೊಂಡು ಆಶಿಕಾ ತೆಲುಗು ಸಿನಿರಸಿಕರ ಗಮನ ಸೆಳೆದಿದ್ದರು. ಕಲ್ಯಾಣ್ ರಾಮ್ ತ್ರಿಬಲ್ ರೋಲ್ ಮಾಡಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲೇಯಿಲ್ಲ.

ಇನ್ನು ಆಶಿಕಾ ಮಾಲ್ಡೀವ್ಸ್ ಪ್ರವಾಸಕ್ಕೆ ಸಹೋದರಿ ಅನುಷಾ, ಸ್ನೇಹಿತೆಯರಾದ ತೇಜಸ್ವಿನಿ ಹಾಗೂ ಸೊನಾಲಿ ಕರಿಯಪ್ಪ ಸಾಥ್ ನೀಡಿದ್ದಾರೆ. ಕನ್ನಡ ಜೊತೆಗೆ ತೆಲುಗು, ತಮಿಳು ಸಿನಿಮಾ ಅವಕಾಶಗಳಿಗಾಗಿ ಆಶಿಕಾ ರಂಗನಾಥ್ ಕಾಯುತ್ತಿದ್ದಾರೆ. ಕಾಲಿವುಡ್‌, ಟಾಲಿವುಡ್‌ನಲ್ಲಿ ಪಟಾಕಿ ಪೋರಿಯ ತಲಾ ಒಂದು ಸಿನಿಮಾ ರಿಲೀಸ್ ಆಗಿದ್ದು ಮುಂದಿನ ದಿನಗಳಲ್ಲಿ ಅವಕಾಶಗಳು ಅರಸಿ ಬರುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Actress Ashika Ranganath enjoys vacation in Maldives with girl gang, Photos Goes Viral. She has been sharing Photos from her holiday. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X