ಹೆಚ್ಚು ಪೇಮೆಂಟ್ ಕೊಟ್ಟಿದ್ದಕ್ಕೆ ಆ ಹೀರೋನ ಒಪ್ಪಿದ ಆಶಿಕಾ ರಂಗನಾಥ್!
ನಿರ್ದೇಶಕ ಸಿಂಪಲ್ ಸುನಿ ನಿರ್ದೇಶಿಸಿದ 'ಅವತಾರ ಪುರುಷ' ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದ ಬಳಿಕ ಸುನಿ ಮುಂದಿನ ಸಿನಿಮಾದ ತಯಾರಿಯಲ್ಲಿ ಇದ್ದಾರೆ. ಅದುವೇ 'ಗತವೈಭವ'. ಈ ಮೂಲಕ ಹೊಸ ಪ್ರತಿಭೆ ದುಷ್ಯಂತ್‌ರನ್ನು ಹೀರೊ ಆಗಿ ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ.
ಸಿಂಪಲ್ ಸುನಿ ನಿರ್ದೇಶನದ 'ಗತವೈಭವ' ಸಿನಿಮಾದ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಎರಡು ಹಂತದ ಶೂಟಿಂಗ್ ಮುಗಿಸಿದೆ. ಈ ಮಧ್ಯೆ ಹೊಸ ಪ್ರತಿಭೆಗಾಗಿ ನಾಲ್ವರು ನಾಯಕಿಯನ್ನು ಅಪ್ರೋಚ್ ಮಾಡಿದ್ದಾರಂತೆ. ಆದರೆ ಈಗ ಕನ್ನಡದ ನಟಿ ಆಶಿಕಾ ರಂಗನಾಥ್ ಆಯ್ಕೆಯಾಗದ್ದಾರೆ.
ನಟಿ ಆಶಿಕಾ ರಂಗನಾಥ್ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಈಗ ಈ ಹೊಸ ಚಿತ್ರಕ್ಕೆ ನಾಯಿ ಆಗಿ ಆಯ್ಕೆ ಆಗಿದ್ದಾರೆ. ಆದರೆ ನಟಿ ಆಶಿಕಾ ರಂಗನಾಥ್ ಈ ಚಿತ್ರವನ್ನು ಒಟ್ಟಿಕೊಳ್ಳಲು ಹಲವು ಷರತ್ತುಗಳನ್ನು ಹಾಕಿದ್ದಾರೆ. ಆದರೂ ಒಂದೇ ಕಾರಣಕ್ಕೆ ಸಿನಿಮಾ ಒಪ್ಪಿಕೊಂಡಿದ್ದಾರೆ.

ಗತವೈಭಕ್ಕೆ ಆಶಿಕಾ ಅರಸಿ ಬಂದ ಸುನಿ!
ಗತವೈಭವ ಚಿತ್ರಕ್ಕೆ ನಟಿ ಆಶಿಕಾ ರಂಗನಾಥ್ ಅವ್ರನ್ನ ಹುಡುಕಿಕೊಂಡು ನಿರ್ದೇಶಕ ಸಿಂಪ್ ಸುನಿ ಬರ್ತಾರೆ. ಆದರೆ ಬಂದೊಡನೆ ಆಶಿಕಾರನ್ನು ಸಿನಿಮಾದಲ್ಲಿ ನಟಿಸಲು ಕೇಳುತ್ತಾರೆ. ಆದರೆ ನಟಿ ಆಶಿಕಾ ಮಾತ್ರ ಮೊದಲು ಒಪ್ಪುವುದಿಲ್ಲ. ಹೊಸ ಹೀರೋ ಜೊತೆಗೆ ನಟಿಸುವ ಯೋಚನೆ ಇಲ್ಲ. ಸದ್ಯಕ್ಕೆ ನನ್ನ ಯೋಜನೆ ಬೇರೆ ಇದೆ ಎಂದು ಹೇಳುತ್ತಾರೆ. ಆದರೆ ಆಶಿಕಾಳನ್ನು ಒಪ್ಪಿಸಲು ನಿರ್ದೇಶಕ ಸುನಿ ಮಾಸ್ಟರ್ ಪ್ಲ್ಯಾನ್ ಮಾಡುತ್ತಾರೆ. ಆಗ ಒಂದೇ ಮಾತಿಗೆ ಸಿನಿಮಾದಲ್ಲಿ ನಟಿಸಲು ಆಶಿಕಾ ಒಪ್ಪಿಕೊಳ್ಳುತ್ತಾರೆ.
ಪೇಮೆಂಟ್ ವಿಚಾರಕ್ಕೆ ಸಿನಿಮಾ ಓಕೆ!
ನಟಿ ಆಶಿಕಾ, ಸುನಿ ಏನೇ ಹೇಳಿದರೂ 'ಗತವೈಭವ' ಸಿನಿಮಾದಲ್ಲಿ ನಟಿಸಲು ಒಪ್ಪುವುದಿಲ್ಲ. ಆಗ ಸುನಿ, ಆಶಿಕಾ ರಂಗನಾಥ್‌ಗೆ ಈ ಚಿತ್ರಕ್ಕೆ ಕೊಡುವ ಪೇಂಟ್ ಎಷ್ಟು ಎನ್ನುವುದನ್ನು ಒಂದು ಚೀಟಿಯಲ್ಲಿ ಬರೆದುಕೊಡುತ್ತಾರೆ. ಅದನ್ನು ನೋಡಿ ಫುಲ್ ಖುಷಿಯಾಗುವ ಆಶಿಕಾ ರಂಗನಾಥ್ ಒಂದೇ ಮಾತಿಗೆ ಸಿನಿಮಾ ಓಕೆ ಎನ್ನುತ್ತಾರೆ. ಇನ್ನು ನಾಯಕ ದುಶ್ಯಂತ್ ಬಂದು ಕಥೆ ಕೇಳಿ, ಅವ್ರು ಏನು ಹೇಳುತ್ತಿಲ್ಲ ಎಂದಾಗ, ಕಥೆನೂ ಕೇಳುವ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಆದರೆ ಸಿನಿಮಾ ಟೀಸರ್ ಇದಾಗಿದ್ದು, ಆಶಿಕಾ ಕೇಲವ ಪೇಂಟ್‌ಗಾಗಿ ಸಿನಿಮಾ ಒಪ್ಪಿದ್ದಾರೆ ಎನ್ನುವುದು ನಿಜವಲ್ಲ, ಟೀಸರ್‌ನಲ್ಲಿ ಟ್ವಿಸ್ಟ್ ಇರಲಿ ಎನ್ನುವ ಕಾರಣಕ್ಕೆ ಮಾಡಲಾಗಿದೆ.
ಆಶಿಕಾ ದೇವಕನ್ಯೆ ಲುಕ್!
ಇನ್ನು ಈ ಟೀಸರ್‌ನಲ್ಲಿ ನಟಿ ಆಶಿಕಾ ಲುಕ್ ರಿವೀಲ್ ಆಗಿದೆ. ಆಶಿಕಾ ದೇವಕನ್ಯೆಯ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ಗತವೈಭವ ಚಿತ್ರದಲ್ಲಿ ಗತಕಾಲವನ್ನು ನೆನಪಿಸುತ್ತದೆ ಆಶಿಕಾ ಲುಕ್. ಇನ್ನೂ ಈ ಹಿಂದೆ ನಟ ದುಶ್ಯಂತ್ ಲುಕ್ ಕೂಡ, ವಿಭಿನ್ನ ಟೀಸರ್ ನಲ್ಲಿ ರಿಲೀಸ್ ಆಗಿತ್ತು. ಈ ಚಿತ್ರದ ಮೂಲಕ ಆಶಿಕಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಶಿಕಾ ಫಸ್ಟ್ ಲುಕ್ ಕಂಡು ಸಿನಿಪ್ರಿಯರು ಫಿದಾ ಆಗಿದ್ದಾರೆ.

'ಗತವೈಭವ' ಕಥೆಯೇನು?
ಸಿಂಪಲ್ ಸುನಿ ನಿರ್ದೇಶಿಸುತ್ತಿರುವ 'ಗತವೈಭವ' ಸಿನಿಮಾ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ. ಈ ಸಿನಿಮಾದಲ್ಲಿ ದುಷ್ಯಂತ್ ಗ್ರಾಫಿಕ್ಸ್ ಡಿಸೈನರ್ ಆಗಿ ಕಾಣಿಸಿಕೊಂಡಿದ್ದಾರೆ. ಲವ್ ಸ್ಟೋರಿ ಜೊತೆಗೆ ಸೈಂಟಿಫಿಕ್ ಥ್ರಿಲ್ಲರ್ ಮಾದರಿಯ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದಾರೆ. ದುಷ್ಯಂತ್ ಜೊತೆ 'ರಾಬಿನ್ ಹುಡ್' ಮಾಡಲು ಹೊರಟಿದ್ದ ಸಿಂಪಲ್ ಸುನಿ 'ಗತವೈಭವ'ಕ್ಕೆ ಕೈ ಹಾಕಿದ್ದರು. ಸದ್ಯ ಶೇ.40ರಷ್ಟು ಶೂಟಿಂಗ್ ಮುಗಿದಿದ್ದು, ಇನ್ನು ಶೇ.60ರಷ್ಟು ಶೂಟಿಂಗ್ ಬಾಕಿ ಉಳಿದಿದೆ. ಈ ವೇಳೆ ಚಿತ್ರತಂಡಕ್ಕೆ ನಾಯಕಿಯ ಎಂಟ್ರಿ ಆಗಿದೆ.


Click it and Unblock the Notifications











