ನಟಿ ಆಶಿಕಾ ರಂಗನಾಥ್ ಪಾಲಿಗೆ ಮತ್ತೊಂದು ಆಫರ್

Recommended Video

ಆಶಿಕಾಗೆ ಸಿಕ್ತು ಸೂಪರ್ ಆಫರ್..! | Filmibeat Kannada

ಆಶಿಕಾ ರಂಗನಾಥ್ ಕನ್ನಡ ಚಿತ್ರರಂಗದ ಸ್ವೀಟ್ ಹಾಗೂ ಕ್ಯೂಟ್ ನಟಿ. ಸ್ಕೂಲ್ ಹುಡುಗರಿಂದ ಹಿಡಿದು ಅಂಕಲ್ ಗಳ ವರೆಗೆ ಆಶಿಕಾಗೆ ಈಗ ಎಲ್ಲರ ಪಾಲಿನ ಕ್ರಶ್ ಆಗಿದ್ದಾರೆ.

ಹೀಗಿರುವಾಗ ಆಶಿಕಾಗೆ ಅವಕಾಶ ಮೇಲೆ ಅವಕಾಶಗಳು ಸಿಗುತ್ತಿವೆ. 'ಮುಗುಳು ನಗೆ', 'ರಾಜು ಕನ್ನಡ ಮೀಡಿಯಂ' ಹಾಗೂ 'ರಾಂಬೋ 2' ಚಿತ್ರಗಳ ಹ್ಯಾಟ್ರಿಕ್ ಗೆಲುವಿನ ನಂತರ ಆಶಿಕಾ ರಂಗನಾಥ್ ಬೇಡಿಕೆ ಜಾಸ್ತಿಯಾಗಿದೆ. ದೊಡ್ಡ ಸಕ್ಸಸ್ ಸಿಕ್ಕ ಮೇಲೆ ಆಶಿಕಾ ಬಳಿಗೆ ಬಂದು ಕಥೆ ಹೇಳುವವರ ಸಂಖ್ಯೆ ಕೂಡ ಹೆಚ್ಚಾಗಿದೆ.

ಸದ್ಯ ಅಜಯ್ ರಾವ್ ನಟನೆಯ 'ತಾಯಿಗೆ ತಕ್ಕ ಮಗ' ಸಿನಿಮಾದಲ್ಲಿ ಬ್ಯುಸಿ ಇರುವ ಆಶಿಕಾ ರಂಗನಾಥ್ ಅದರ ಜೊತೆಗೆ ಈಗ ಮತ್ತೊಂದು ಹೊಸ ಸಿನಿಮಾವನ್ನ ಒಕೆ ಮಾಡಿದ್ದಾರೆ. ಆಶಿಕಾ ಅವರ ಹೊಸ ಚಿತ್ರದ ಕೆಲ ಮಾಹಿತಿ ಮುಂದಿದೆ ಓದಿ...

'ರಂಗ ಮಂದಿರ'

'ರಂಗ ಮಂದಿರ'

'ರಂಗ ಮಂದಿರ' ಎಂಬ ಹೊಸ ಸಿನಿಮಾದಲ್ಲಿ ಈಗ ಆಶಿಕಾ ರಂಗನಾಥ್ ನಟಿಸುತ್ತಿದ್ದಾರೆ. ಈ ಸಿನಿಮಾದ ಕಥೆ ಮತ್ತು ಪಾತ್ರ ಇಷ್ಟವಾಗಿರುವ ಕಾರಣ ಚಿತ್ರದಲ್ಲಿ ನಟಿಸಲು ಅವರು ಸಮ್ಮತಿ ನೀಡಿದ್ದಾರೆ. ಈ ಚಿತ್ರದಲ್ಲಿ ಬಹು ತಾರಾಬಹಳ ಇದ್ದು, ಲೀಡ್ ರೋಲ್ ಗೆ ಆಶಿಕಾ ರಂಗನಾಥ್ ಆಯ್ಕೆ ಆಗಿದ್ದಾರೆ.

ಕಲಾವಿದರ ದೊಡ್ಡ ಪಟ್ಟಿ

ಕಲಾವಿದರ ದೊಡ್ಡ ಪಟ್ಟಿ

ಈ ಸಿನಿಮಾದಲ್ಲಿ ಅನೇಕ ಕಲಾವಿದರು ನಟಿಸುತ್ತಿದ್ದಾರೆ. ನಟ ಪ್ರವೀಣ್ ತೇಜ್, ಅನುಪಮ ಗೌಡ, ಶೃತಿ ಪ್ರಕಾಶ್, ನಿರ್ಮಾಪಕ ಆಶು ಬೇಂದ್ರೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದಿನ ಶಾಡ್ಯೂಲ್ ಶೂಟಿಂಗ್ ನಿಂದ ಆಶಿಕಾ ಈ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

ಶಾಹುರಾಜ್ ಶಿಂಧೆ

ಶಾಹುರಾಜ್ ಶಿಂಧೆ

ಶಾಹುರಾಜ್ ಶಿಂಧೆ ಈ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ. ಎಂಟು ವರ್ಷಗಳ ನಂತರ ಅವರು ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಅಕ್ಟೋಬರ್ ಕೊನೆಗೆ ಇಡೀ ಸಿನಿಮಾದ ಶೂಟಿಂಗ್ ಮುಗಿಸುವ ಪ್ಲಾನ್ ಇದ್ದು, ಜಿಸ್ಸಿ ಗಿಫ್ಟ್ ಸಂಗೀತ ಚಿತ್ರದಲ್ಲಿ ಇರಲಿದೆಯಂತೆ.

ಒಂದು ಪಾತ್ರದಲ್ಲಿ ಆನಂದ್ ತುಮಕೂರು

ಒಂದು ಪಾತ್ರದಲ್ಲಿ ಆನಂದ್ ತುಮಕೂರು

ಇನ್ನೊಂದು ಕಡೆ ಚಿತ್ರದಲ್ಲಿ ರಂಗಾಯಣ ರಘು ಅಚ್ಚುತ್ ಕುಮಾರದ ಹಾಗೂ ತೆಲುಗು ನಟ ಸುಮನ್ ನಟಿಸುತ್ತಿದ್ದಾರೆ. 'ಒಂದಲ್ಲ ಎರಡಲ್ಲ' ಮೂಲಕ ದೊಡ್ಡ ಜನಪ್ರಿಯತೆ ಪಡೆದಿರುವ ಪ್ರತಿಭಾವಂತ ರಂಗಭೂಮಿ ಕಲಾವಿದ ಆನಂದ್ ತುಮಕೂರು ಸಿನಿಮಾದ ಒಂದು ಒಳ್ಳೆಯ ಪಾತ್ರದಲ್ಲಿ ಅಭಿನಹಿಸುತ್ತಿದ್ದಾರೆ.

More from Filmibeat

English summary
Actress Ashika Ranganath playing lead role in 'Rangamandira' kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X