ಪುನೀತ ನಮನಕ್ಕೆ ಆಶಿಕಾ ರಂಗನಾಥ್ ಗೈರು: ನಂತರ ಮಾಡಿದ ಎಡವಟ್ಟೇನು ಗೊತ್ತಾ?

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡಿಗರಿಗಷ್ಟೇ ಅಲ್ಲದೆ ಇಡೀ ಇಂಡಿಯಾದಲ್ಲೇ ಹೆಸರುವಾಸಿ ಆಗಿರುವ ನಟ. ಅಪ್ಪು ಅವರ ಕೀರ್ತಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಬೇರೆ ಭಾಷಾ ಚಿತ್ರರಂಗದ ಕಲಾವಿದರು ಸೇರಿದಂತೆ ದೇಶದ ಗಡಿ ದಾಟಿಯೂ ಅಪ್ಪುಗೆ ಅಭಿಮಾನಿಗಳಿದ್ದಾರೆ. ಅವರೆಲ್ಲರ ಮನಸ್ಸಿನಲ್ಲಿ ಪುನೀತ್ ರಾಜಕುಮಾರ್ ಅಚ್ಚಳಿಯದೆ ಉಳಿಯುವ ನೆನಪು.

ಅಪ್ಪು ಇಲ್ಲ ಎನ್ನುವ ಕಹಿ ಸತ್ಯವನ್ನು ಯಾರೊಬ್ಬರೂ ಇನ್ನು ಕೂಡ ಒಪ್ಪಿಕೊಂಡಿಲ್ಲ. ಹಾಗಾಗಿ ಪ್ರತಿನಿತ್ಯ ಪುನೀತ್ ಅವರ ಕುರಿತಾಗಿ ಒಂದಲ್ಲಾ ಒಂದು ವಿಚಾರ ಹರಿದಾಡುತ್ತಲೇ ಇದೆ. ಅವರಿಗಾಗಿ ಸಾಹಸ್ರಾರು ಹೃದಯಗಳು ಮಿಡಿಯುತ್ತಲೇ ಇವೆ. ಹಾಗಾಗಿ ಅದೆಷ್ಟೋ ಅಭಿಮಾನಿ ಬಳಗ ತಮ್ಮ ಮನೆ ದೇವರ ಸ್ಥಾನದಲ್ಲಿ ಅಪ್ಪು ಅವರನ್ನು ಇಟ್ಟು ಪೂಜಿಸುತ್ತಾ ಇದ್ದಾರೆ.

ಇನ್ನೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ 'ಪುನೀತ ನಮನ' ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಲವಾರು ಸಿನಿಮಾ ತಾರೆಯರು ಸಾಕ್ಷಿಯಾಗಿದ್ದರು. ಪರ ಭಾಷೆಯಿಂದ ಹಲವು ಕಲಾವಿದರು ಕೂಡ 'ಪುನೀತ್ ನಮನ' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 'ಪುನೀತ್ ನಮನ' ಕಾರ್ಯಕ್ರಮದ ವಿಚಾರವಾಗಿ ನಟಿ ಆಶಿಕಾ ರಂಗನಾಥ್ ವಿವಾದಕ್ಕೀಡಾಗಿದ್ದಾರೆ.

ಪುನೀತ ನಮನ ಕಾರ್ಯಕ್ರಮಕ್ಕೆ ಗೈರಾದ ಆಶಿಕಾ ಪೋಸ್ಟ್!

ಪುನೀತ ನಮನ ಕಾರ್ಯಕ್ರಮಕ್ಕೆ ಗೈರಾದ ಆಶಿಕಾ ಪೋಸ್ಟ್!

ಪುನೀತ ನಮನ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಸಾವಿರಾರು ಕಲಾವಿದರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಎಲ್ಲರಿಗೂ ಈ ಕಾರ್ಯಕ್ರಮದಲ್ಲಿ ಭಾಗಿ ಆಗಲು ಸಾಧ್ಯ ಆಗಿರಲಿಲ್ಲ. ಹಾಗೆ ನಟಿ ಆಶಿಕಾ ರಂಗನಾಥ್‌ ಅವರೂ ಕೂಡ ಪುನೀತ ನಮನ ಕಾರ್ಯಕ್ರಕ್ಕೆ ಗೈರಾಗಿದ್ದರು. ಆಶಿಕಾ ಕಾರ್ಯಕ್ರಮಕ್ಕೆ ಬಂದಿಲ್ಲ ಎನ್ನುವುದು ಸುದ್ದಿಯಲ್ಲ. ಆದರೆ ಆಶಿಕಾ ಈ ಕಾರ್ಯಕ್ರಮದ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಒಂದನ್ನು ಹಂಚಿ ಕೊಂಡಿದ್ದಾರೆ. ಈ ಪೋಸ್ಟರ್‌ ಬಗ್ಗೆ ಅಪ್ಪು ಅಭಿಮಾನಿಗಳು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಅಪ್ಪುಗೆ ಸಾಮಾಜಿಕ ಜಾಲತಾಣದಲ್ಲೇ ಆಶಿಕಾ ರಂಗನಾಥ್ ಶ್ರದ್ಧಾಂಜಲಿ ಅರ್ಪಣೆ!

ಅಪ್ಪುಗೆ ಸಾಮಾಜಿಕ ಜಾಲತಾಣದಲ್ಲೇ ಆಶಿಕಾ ರಂಗನಾಥ್ ಶ್ರದ್ಧಾಂಜಲಿ ಅರ್ಪಣೆ!

ಪುನೀತ ನಮನ ಕಾರ್ಯಕ್ರಮದಲ್ಲಿ ಭಾಗಿ ಆಗಲು ಸಾಧ್ಯವಾಗಿಲ್ಲ ಎನ್ನುವ ಕಾರಣಕ್ಕೆ ಆಶಿಕಾ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಆಶಿಕಾ ಕ್ಷಮೆ ಯಾಚಿಸಿದ್ದಾರೆ. ಜೊತೆಗೆ ಆಶಿಕಾ ಅವರಿಗೆ ಈ ಕಾರ್ಯಕ್ರಮದಲ್ಲಿ ಭಾಗಿ ಆಗಲು ಯಾಕೆ ಸಾಧ್ಯ ಆಗಿಲ್ಲ ಎಂಬುದನ್ನೂ ಬರೆದುಕೊಂಡಿದ್ದಾರೆ. ಶೂಟಿಂಗ್‌ ಇದ್ದ ಕಾರಣ ಪುನೀತ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎನ್ನುವುದನ್ನು ಬರೆದುಕೊಂಡಿದ್ದಾರೆ. ಜೊತೆಗೆ ಪೋಸ್ಟ್‌ ಮೂಲಕವೇ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ನಮಸಾರೆ ಕ್ಷಮೆ ಕೇಳಿದ ನಟಿ ಆಶಿಕಾರಂಗನಾಥ್!

ನಮಸಾರೆ ಕ್ಷಮೆ ಕೇಳಿದ ನಟಿ ಆಶಿಕಾರಂಗನಾಥ್!

"ಕರ್ನಾಟಕ ಫಿಲ್ಮ್‌ ಚೇಂಬರ್‌ ಆಯೋಜಿಸಿದ್ದ ಅಪ್ಪು ನಮನ ಕಾರ್ಯಕ್ರಮದಲ್ಲಿ ಭಾಗಿ ಆಗಲು ಸಾಧ್ಯವಾಗದೇ ಇರುವುದಕ್ಕೆ ಮನಸಾರೆ ಕ್ಷಮೆ ಯಾಚಿಸುತ್ತೇನೆ. ಚಿತ್ರೀಕರಣ ಇರುವ ಕಾರಣಕ್ಕೆ ನಾನು ಶೂಟಿಂಗ್‌ ಲೋಕೇಷನ್‌ಗೆ ಪ್ರಯಾಣ ಬೆಳೆಸಿದ್ದೇನೆ. ಡೇಟ್ ಕಮಿಟ್‌ಮೆಂಟ್‌ ಇರುವ ಕಾರಣಕ್ಕೆ ಅದನ್ನು ಬದಲಿಸಲು ಸಾಧ್ಯವಾಗಿಲ್ಲ. ಇಡೀ ಕುಟುಂಬ ಮತ್ತು ಚಿತ್ರರಂಗದ ಸದಸ್ಯರಿಗೆ ಮತ್ತಷ್ಟು ಪವರ್‌ ಸಿಗಲಿ". ಹೀಗೆಂದು ಬರೆದು ಇನ್ಸ್‌ಸ್ಟಾಗ್ರಾಮ್‌ ಖಾತೆಯಲ್ಲಿ ಆಶಿಕಾ ಪೋಸ್ಟ್‌ ಮಾಡಿದ್ದಾರೆ. ಆಶಿಕಾ ನೀಡಿರುವ ಈ ಕಾರಣವೇ ಅಸಮಾಧಾನ ಮೂಡುವಂತೆ ಮಾಡಿದೆ.

ಅಸಮಾಧಾನಗೊಂಡ ಅಪ್ಪು ಅಭಿಮಾನಿಗಳು!

ಅಸಮಾಧಾನಗೊಂಡ ಅಪ್ಪು ಅಭಿಮಾನಿಗಳು!

ಆಶಿಕಾಳ ಪೋಸ್ಟ್ ಗೆ ಅಪ್ಪು ಅಭಿಮಾನಿಗಳು ಅಸಮಾಧಾಗೊಂಡಿದ್ದಾರೆ. "ನೀವು ಕಾರ್ಯಕ್ರಮಕ್ಕೆ ಬರದೇ ಇದ್ದರೆ ಏನೂ ಬದಲಾಗುವುದಿಲ್ಲ. ಆದರೆ ಹೀಗೆ ಶೂಟಿಂಗ್‌ ಇತ್ತು ಎನ್ನುವ ಕಾರಣ ನೀಡುವ ಅವಶ್ಯಕತೆ ಇಲ್ಲ" ಎನ್ನುವಂತಹ ಕಮೆಂಟ್‌ಗಳು ಬಂದಿವೆ. ಅಲ್ಲದೆ "ಪರ ಭಾಷೆಯ ಎಷ್ಟೋ ಸ್ಟಾರ್‌ ನಟರುಗಳು ಬಂದು ಪುನೀತ ನಮನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ನೀವು ಹೀಗೆ ಪೋಸ್ಟ್‌ ಮಾಡುವ ಅಗತ್ಯ ಏನಿತ್ತು?" ಎಂದು ಪ್ರಶ್ನೆ ಮಾಡಿದ್ದಾರೆ.

More from Filmibeat

English summary
Actress Ashika Ranganath Social Media Post About Puneeth Namana Programme Is Lead To Controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X