ತಮಿಳಿಗೆ ಹೊರಟ ಆಶಿಕಾ ರಂಗನಾಥ್: ಮಾಹಿತಿ ಹಂಚಿಕೊಂಡ ನಟಿ

ಮುದ್ದು ಮುಖದ ಕನ್ನಡದ ನಟಿ ಆಶಿಕಾ ರಂಗನಾಥ್ ಮೊದಲ ಬಾರಿಗೆ ಪರಭಾಷೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆಶಿಕಾ ರಂಗನಾಥ್‌ಗೆ ತಮಿಳು ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಚೆಲುವೆ.

Recommended Video

ಹಿಂದಿಯಲ್ಲಿ ಅಬ್ಬರಿದ ಐಂದ್ರಿತಾ ರೆ, ರಾವಣ್ ಲೀಲಾ ಟ್ರೈಲರ್ ಸೂಪರ್ | Ravan Leela

ಇದೇ ಮೊದಲ ಬಾರಿಗೆ ಪರಭಾಷೆಯ ಸಿನಿಮಾದಲ್ಲಿ ನಟಿಸುವ ಅವಕಾಶ ಒದಗಿದೆ. ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದು, ಮೊದಲ ಸಿನಿಮಾದಲ್ಲಿಯೇ ದೊಡ್ಡ ನಟ, ಒಳ್ಳೆಯ ನಿರ್ದೇಶಕ ಮತ್ತು ಒಳ್ಳೆಯ ಬ್ಯಾನರ್ ದೊರಕಿರುವುದು ನನ್ನ ಅದೃಷ್ಟ ಎಂದಿದ್ದಾರೆ ಆಶಿಕಾ ರಂಗನಾಥ್.

ತಮಿಳಿನಲ್ಲಿ ಈಗಾಗಲೇ ಹದಿಮೂರು ಸಿನಿಮಾಗಳಲ್ಲಿ ನಟಿಸಿ ಯಶಸ್ವೀ ನಾಯಕ ಎನಿಸಿಕೊಂಡಿರುವ ಅಥರ್ವ ನಟನೆಯ ಹೊಸ ತಮಿಳು ಸಿನಿಮಾದಲ್ಲಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ಅಥರ್ವ ಕನ್ನಡ ಜನಪ್ರಿಯ, ಹಿರಿಯ ಸಿನಿಮಾ ನಿರ್ದೇಶಕ ಸಿದ್ದಲಿಂಗಯ್ಯ ಅವರ ಮೊಮ್ಮಗ ಎನ್ನುವುದು ವಿಶೇಷ. ಅಥರ್ವರ ತಂದೆ ಜನಪ್ರಿಯ ನಟ ಮುರುಳಿ.

Actress Ashika Ranganath Talked About Her First Tamil Movie

ತಮ್ಮ ತಮಿಳು ಸಿನಿಮಾ ಬಗ್ಗೆ ಮಾತನಾಡಿರುವ ಆಶಿಕಾ ರಂಗನಾಥ್, ''ಈ ರೀತಿಯ ಭಿನ್ನ ಕತೆಯುಳ್ಳ ಸಿನಿಮಾದಲ್ಲಿ ನಟಿಸುತ್ತಿರುವುದು ಇದೇ ಮೊದಲು. ಕ್ರೀಡೆ ಪ್ರಧಾನವಾದ ಕತೆಯುಳ್ಳ ಸಿನಿಮಾ ಇದಾಗಿದ್ದು, ಇಂಥಹಾ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ನಟಿಸುತ್ತಿದ್ದೇನೆ'' ಎಂದಿದ್ದಾರೆ.

ಭಾಷೆ ಕಷ್ಟವಾಗುತ್ತಿದೆ ನಿಜ, ಆದರೆ ಚಿತ್ರತಂಡ ಸಾಕಷ್ಟು ಸಹಾಯ ಮಾಡುತ್ತಿದೆ. ಚಿತ್ರಕತೆ ಸಂಭಾಷಣೆಗಳನ್ನು ಮೊದಲೇ ಕನ್ನಡ ಮತ್ತು ಇಂಗ್ಲೀಷ್‌ಗೆ ತರ್ಜುಮೆ ಮಾಡಿ ಕೊಡುತ್ತಾರೆ ಅದನ್ನು ನೋಡಿಕೊಂಡು ಮಾರನೇಯ ದಿನ ಚಿತ್ರೀಕರಣಕ್ಕೆ ತಯಾರಾಗುತ್ತೇನೆ'' ಎಂದಿದ್ದಾರೆ ಆಶಿಕಾ ರಂಗನಾಥ್.

''ನಾಯಕ ನಟ ಅಥರ್ವ ಅವರನ್ನು ಬಿಟ್ಟರೆ ಇಡೀಯ ಚಿತ್ರೀಕರಣ ಸೆಟ್‌ನಲ್ಲಿ ಯಾರಿಗೂ ಕನ್ನಡ ಬರುವುದಿಲ್ಲ. ಸೆಟ್‌ನಲ್ಲಿ ಅಥರ್ವ ಹಾಗೂ ನಾನು ಕನ್ನಡದಲ್ಲಿಯೇ ಮಾತನಾಡುತ್ತಿರುತ್ತೇವೆ. ಅವರು ತಮ್ಮ ತಾತನ, ತಂದೆಯ ಕತೆಗಳನ್ನು, ಬೆಂಗಳೂರಿನಲ್ಲಿ ಕಳೆದ ದಿನಗಳ ವಿಷಯಗಳನ್ನು ಹೇಳುತ್ತಿರುತ್ತಾರೆ'' ಎಂದಿದ್ದಾರೆ ಆಶಿಕಾ ರಂಗನಾಥ್. ಅಥರ್ವ ಅನ್ನು ಬಹುವಾಗಿ ಹೊಗಳಿರುವ ಅವರು, ''ತಾವೊಬ್ಬ ಯಶಸ್ವಿ ನಾಯಕ ನಟ ಎಂಬ ಯಾವ ಹಮ್ಮು-ಬಿಮ್ಮು ಇಲ್ಲದೆ ಸರಳವಾಗಿರುತ್ತಾರೆ'' ಎಂದಿದ್ದಾರೆ.

ತಂಜಾವೂರಿನ ಬಳಿ ಚಿತ್ರೀಕರಣ ನಡೆಯುತ್ತಿದ್ದು, ಸಿನಿಮಾದಲ್ಲಿ ಆಶಿಕಾ ರಂಗನಾಥ್ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಆಶಿಕಾ ರಂಗನಾಥ್ ಕಬಡ್ಡಿ ಆಟಗಾರ್ತಿ ಎನ್ನಲಾಗುತ್ತಿದೆ.

ಆಶಿಕಾ ರಂಗನಾಥ್ 2016 ರಲ್ಲಿ ಬಿಡಗುಡೆ ಆದ 'ಕ್ರೇಜಿ ಬಾಯ್' ಸಿನಿಮಾದ ಮೂಲಕ ನಟನೆ ಆರಂಭಿಸಿದರು. ಶಿವಣ್ಣನ ಜೊತೆ 'ಮಾಸ್ ಲೀಡರ್', ಗಣೇಶ್ ಜೊತೆ 'ಮುಗುಳು ನಗೆ', ಶರಣ್ ಜೊತೆ 'ರ್ಯಾಂಬೊ 2', ಅಜಯ್ ರಾವ್ ಜೊತೆಗೆ 'ತಾಯಿಗೆ ತಕ್ಕ ಮಗ' ಸಿನಿಮಾಗಳು ಆಶಿಕಾಗೆ ಖ್ಯಾತಿ ತಂದುಕೊಟ್ಟವು.

ಇದೀಗ 'ಗರುಡ', 'ಕೋಟಿಗೊಬ್ಬ 3', 'ಅವತಾರ ಪುರುಷ', ಶ್ರೀಮುರಳಿ ಜೊತೆ 'ಮದಗಜ', 'ರೆಮೊ' ಸಿನಿಮಾಗಳಲ್ಲಿ ಆಶಿಕಾ ನಟಿಸುತ್ತಿದ್ದಾರೆ.

More from Filmibeat

English summary
Actress Ashika Ranganath talked about her first Tamil movie. She is acting in a Tamil movie along with actor Atharva.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X