For Quick Alerts
  ALLOW NOTIFICATIONS  
  For Daily Alerts

  ಎಂತಹ ಅದ್ಭುತ ಚಿತ್ರ: 'ಆಕ್ಟ್ 1978' ಚಿತ್ರ ಮೆಚ್ಚಿದ ಆಶಿಕಾ ರಂಗನಾಥ್

  |

  ಕೋಟಿಗೊಬ್ಬ-3 ಸಿನಿಮಾದ 'ಪಟಾಕಿ ಪೋರಿಯೋ' ಹಾಡಿನ ಮೂಲಕ ಸದ್ದು ಮಾಡ್ತಿರುವ ನಟಿ ಆಶಿಕಾ ರಂಗನಾಥ್ ಆಕ್ಟ್ 1978 ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

  ಚಿತ್ರಮಂದಿರದಲ್ಲಿ 'ಆಕ್ಟ್ 1978' ಸಿನಿಮಾ ವೀಕ್ಷಿಸಿದ ಆಶಿಕಾ ರಂಗನಾಥ್ ಇಡೀ ಚಿತ್ರ ತಂಡವನ್ನು ಹೊಗಳಿದ್ದಾರೆ. ''ಸುಂದರವಾದ ಕಂಟೆಂಟ್ ಆಧಾರಿತ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದೆ. ಎಂತಹ ಅದ್ಭುತ ಚಿತ್ರ. ದಯವಿಟ್ಟು ಚಿತ್ರಮಂದಿರಗಳಲ್ಲಿ ನೋಡುವುದನ್ನು ಮಿಸ್ ಮಾಡಿಕೊಳ್ಳಬೇಡಿ. ಈ ರೀತಿಯ ಸುಂದರವಾದ ಚಿತ್ರದ ಮೂಲಕ ಮತ್ತೆ ಚಿತ್ರಮಂದಿರಕ್ಕೆ ಬರೋಣ'' ಎಂದು ಆಶಿಕಾ ಶ್ಲಾಘಿಸಿದ್ದಾರೆ.

  ಆಕ್ಟ್ 1978 ಚಿತ್ರತಂಡಕ್ಕೆ ಬಲ ತುಂಬಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ಆಕ್ಟ್ 1978 ಚಿತ್ರತಂಡಕ್ಕೆ ಬಲ ತುಂಬಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

  ಲಾಕ್‌ಡೌನ್ ಆದ್ಮೇಲೆ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಸಿನಿಮಾ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಡೈರೆಕ್ಟ್ ಮಾಡಿದ್ದ ಈ ಚಿತ್ರ ನವೆಂಬರ್ 20 ರಂದು ತೆರೆಕಂಡಿತ್ತು.

  ಯಜ್ಞಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಈ ಸಿನಿಮಾದಲ್ಲಿ ಬಿ. ಸುರೇಶ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಶ್ರುತಿ, ದತ್ತಣ್ಣ, ಸಂಚಾರಿ ವಿಜಯ್, ಶರಣ್ಯಾ, ಶೋಭರಾಜ್, ಅವಿನಾಶ್, ರಾಘು ಶಿವಮೊಗ್ಗ ಮುಂತಾದವರು ತಾರಬಳಗದಲ್ಲಿದ್ದಾರೆ. ದೇವರಾಜ್ ಆರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

  Act-1978 Review: ಹಲವು ಭಾವಗಳ ಹೋರಾಟದ ಕಥನAct-1978 Review: ಹಲವು ಭಾವಗಳ ಹೋರಾಟದ ಕಥನ

  ಅಮೋಘ ವಾಗಿರುವ ಸ್ಕ್ರಿಪ್ಟ್ ಸಿಕ್ಕಿದೆ.| Vasishta Simha | Filmibeat Kannada

  ಪವನ್ ಒಡೆಯರ್ ನಿರ್ದೇಶನದ 'ರೆಮೋ' ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕೋಟಿಗೊಬ್ಬ 3 ಚಿತ್ರದಲ್ಲಿ ಪಟಾಕಿ ಪೋರಿಯೋ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಶ್ರೀಮುರಳಿ ನಟನೆಯ 'ಮದಗಜ' ಚಿತ್ರದಲ್ಲೂ ಆಶಿಕಾ ನಾಯಕಿ.

  English summary
  Kannada actress Ashika Ranganath watched ACT 1978 movie and she praised whole team.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X