For Quick Alerts
  ALLOW NOTIFICATIONS  
  For Daily Alerts

  ನಮ್ಮ ಅಕ್ಕನ ಮದ್ವೇಲಿ ಮುಸ್ಲಿಂ ಬಿರಿಯಾನಿಗಾಗಿ ಅಪ್ಪು 15 ನಿಮಿಷ ಕ್ಯೂನಲ್ಲಿ ನಿಂತಿದ್ದರು: ಆಶಿತಾ

  |

  ಪವರ್ ಸ್ಟಾರ್‌ ಪುನೀತ್ ರಾಜ್‌ಕುಮಾರ್‌ ಸಿಂಪ್ಲಿಸಿಟಿ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೇ. ಅಪ್ಪು ದೈಹಿಕವಾಗಿ ನಮ್ಮೊಂದಿಗಿಲ್ಲ. ಆದರೆ ಸದಾ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ. ಪುನೀತ್ ರಾಜ್‌ಕುಮಾರ್ ಸಿಂಪ್ಲಿಸಿಟಿ ಬಗ್ಗೆ ನಟಿ ಆಶಿತಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 'ಆಕಾಶ್' ಚಿತ್ರದಲ್ಲಿ ಪುನೀತ್ ತಂಗಿ ಪಾತ್ರದಲ್ಲಿ ಆಶಿತಾ ನಟಿಸಿದ್ದರು.

  'ತವರಿನ ಸಿರಿ', 'ರೋಡ್ ರೋಮಿಯೋ', 'ಗ್ರೀನ್ ಸಿಗ್ನಲ್' ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಆಶಿತಾ ನಂತರ ಚಿತ್ರರಂಗದಿಂದ ದೂರಾಗಿದ್ದರು. ನಿರ್ದೇಶಕ ರಘುರಾಮ್ ಯೂಟ್ಯೂಬ್‌ ಚಾನಲ್‌ನಲ್ಲಿ ಬಹಳ ದಿನಗಳ ನಂತರ ನಟಿ ಅಶಿತಾ ಕಾಣಿಸಿಕೊಂಡಿದ್ದಾರೆ. ತಮ್ಮ ಸಿನಿಮಾಗಳು ಹಾಗೂ ಚಿತ್ರರಂಗದವರ ಜೊತೆಗಿನ ಒಡನಾಟದ ಬಗ್ಗೆ ಆಶಿತಾ ಮಾತನಾಡಿದ್ದಾರೆ. ವಿಶೇಷ ಅಂದರೆ ಶಿವಣ್ಣ ಹಾಗೂ ಅಪ್ಪು ಇಬ್ಬರ ಜೊತೆಗೂ ತಂಗಿಯಾಗಿ ಆಶಿಕಾ ನಟಿಸಿದ್ದರು.

  ಲಕ್ಕಿಮ್ಯಾನ್‌: ಅಪ್ಪು ಕೂತಿದ್ದ ಕುರ್ಚಿ ಕೇಳಿದ್ದ ರಾಘಣ್ಣ; ಎಲ್ಲಿದೆಯೋ ಹುಡುಕಬೇಕೆಂದ ಕೃಷ್ಣ!ಲಕ್ಕಿಮ್ಯಾನ್‌: ಅಪ್ಪು ಕೂತಿದ್ದ ಕುರ್ಚಿ ಕೇಳಿದ್ದ ರಾಘಣ್ಣ; ಎಲ್ಲಿದೆಯೋ ಹುಡುಕಬೇಕೆಂದ ಕೃಷ್ಣ!

  17 ವರ್ಷಗಳ ಹಿಂದೆ ಪುನೀತ್‌ ರಾಜ್‌ಕುಮಾರ್ ಹಾಗೂ ರಮ್ಯಾ ನಟನೆಯ 'ಆಕಾಶ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಮಹೇಶ್ ಬಾಬು ನಿರ್ದೇಶನದ ಈ ಚಿತ್ರದಲ್ಲಿ ಅಪ್ಪು ಸಹೋದರಿಯ ಪಾತ್ರದಲ್ಲಿ ಆಶಿತಾ ನಟಿಸಿದ್ದರು. ಪುನೀತ್ ರಾಜ್‌ಕುಮಾರ್ ಜೊತೆಗಿನ ಒಡನಾಟದ ಬಗ್ಗೆ ಆಶಿತಾ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ತಮ್ಮ ತಂಗಿ ಮದುವೆಗೆ ಅಪ್ಪು ಬಂದಿದ್ದ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಪುನೀತ್ ಸರಳತೆಯನ್ನು ಕೊಂಡಾಡಿದ್ದಾರೆ.

  "ಪುನೀತ್ ರಾಜ್‌ಕುಮಾರ್ ಸರ್ ನನಗೆ ಆತ್ಮೀಯ ಸ್ನೇಹಿತರು. ಶಿವಣ್ಣ ಅಂದರೆ ಗೌರವ. ಆದರೆ ಅಪ್ಪು ನನ್ನ ಫ್ರೆಂಡ್. ಪುನೀತ್ ಸರ್ ಎಲ್ಲೂ ಹೋಗಿಲ್ಲ. ನಮ್ಮ ಜೊತೆಗೆ ಇದ್ದಾರೆ. ಎಲ್ಲರ ನಗುವಿನಲ್ಲಿ ಇದ್ದಾರೆ. ಅವರು ಎಷ್ಟು ಒಳ್ಳೆ ಕೆಲಸಗಳನ್ನು ಮಾಡಿದ್ದಾರೆ ಎನ್ನುವುದು ಈಗ ಗೊತ್ತಾಗುತ್ತಿದೆ ಅಷ್ಟೆ. ಆಕಾಶ್ ಸಿನಿಮಾ ಟೈಮಲ್ಲಿ ನಾನು, ಅಪ್ಪು, ರಮ್ಯಾ ಸಿಕ್ಕಾಪಟ್ಟೆ ಸುತ್ತಾಡುತ್ತಿದ್ದೆವು. ಅವರ ಕಾರಲ್ಲಿ ಕೂತು ಎಲ್ಲೆಲ್ಲೋ ಹೋಗುತ್ತಿದ್ದೆವು. ಆಕಾಶ್‌ ಸಿನಿಮಾ ಸಾಂಗ್ಸ್‌ ಕೇಳಿಸಿ ಇದು ಚೆನ್ನಾಗಿದ್ಯಾ ಅಂತೆಲ್ಲಾ ಕೇಳುತ್ತಿದ್ದರು. ಅಪ್ಪು ಆತ್ಮೀಯ ಒಡನಾಟ ನಮ್ಮಲ್ಲಿತ್ತು."

  ಪರಮಾತ್ಮನ ಎಂಟ್ರಿಗೆ ರಾಘಣ್ಣ ಶಿಳ್ಳೆ, ಜೈಕಾರ: ಅಪ್ಪು ಡ್ಯಾನ್ಸ್ ನೋಡಿ ಮಂಗಳಕ್ಕ ಭಾವುಕ!ಪರಮಾತ್ಮನ ಎಂಟ್ರಿಗೆ ರಾಘಣ್ಣ ಶಿಳ್ಳೆ, ಜೈಕಾರ: ಅಪ್ಪು ಡ್ಯಾನ್ಸ್ ನೋಡಿ ಮಂಗಳಕ್ಕ ಭಾವುಕ!

  "ಅಪ್ಪು ನನ್ನ ಅಕ್ಕನ ಮದುವೆಗೆ ಬಂದಿದ್ದರು. ಅವರ ಸಿಂಪ್ಲಿಸಿಟಿ ಬಗ್ಗೆ ಹೇಳೋಕೆ ಒಂದು ವಿಚಾರ ಹೇಳಲೇಬೇಕು. ಸೇಂಟ್ ಫ್ಯಾಟ್ರಿಕ್ ಚರ್ಚ್‌ನಲ್ಲಿ ನಮ್ಮ ಅಕ್ಕನ ಮದುವೆ ನಡೀತು. ಎರಡು ದಿನದ ಹಿಂದೆ ಹೋಗಿ ಮದುವೆಗೆ ಆಹ್ವಾನಿಸಿದ್ದೆ. ಸಾಕಷ್ಟು ಸಾಕಷ್ಟು ಸ್ನೇಹಿತರು ಬಂದಿದ್ದರು. ಶಿವಣ್ಣ ಊರಿನಲ್ಲಿ ಇರಲಿಲ್ಲ. ಹಾಗಾಗಿ ಬರಲಿಲ್ಲ. ಅಪ್ಪು ಹೇಳಿದ್ರು, ಆಶಿತಾ ಇದು ನಿಮ್ಮ ಅಕ್ಕನ ಮದುವೆ ನಾನು ಬರದೇ ಇರೋಕೆ ಆಗುತ್ತಾ? ಬೆಂಗಳೂರಿನಲ್ಲಿ ಇದ್ದರೆ ಬಂದೇ ಬರ್ತೀನಿ ಅಂದರು. ಬೆಂಗಳೂರಿನಲ್ಲೇ ಇದ್ದರು. ಮದುವೆಗೆ ಬಂದಿದ್ದರು.

  " ನಮ್ಮ ಅಕ್ಕನ ಮದುವೆಯಲ್ಲಿ ಸಿಕ್ಕಾಪಟ್ಟೆ ಜನ ಸೇರಿದ್ದರು. ಅಪ್ಪು ಬಂದ ಮೇಲೆ ಜನ ಜಾಸ್ತಿ ಆದರು. ಅಪ್ಪು ಬೇರೆ ಸ್ಟಾರ್ಸ್ ತರ ಅಲ್ಲ. ಎರಡು ನಿಮಿಷ ಇದ್ದು ಎದ್ದು ಹೋಗಲಿಲ್ಲ. ಗಂಟೆಗಳ ಕಾಲ ಜೊತೆಗಿದ್ದರು. ಪ್ರಪಂಚದಲ್ಲಿ ಅಂತಹವರು ಸಿಗುವುದಿಲ್ಲ. ಆರಾಮಾಗಿ ಇದ್ದರು. ಕೇಳಿದವರಿಗೆಲ್ಲಾ ಆಟೋಗ್ರಾಫ್ ಕೊಟ್ಟರು. ಫೋಟೊ ಕ್ಲಿಕ್ಕಿಸಿಕೊಂಡರು. ನಮ್ಮ ಮನೆಯ ಸದಸ್ಯರೆಲ್ಲಾ ಅಪ್ಪು ಜೊತೆ ಫೋಟೊ ತೆಗೆಸಿಕೊಂಡರು. ಅ ಫೋಟೊಗಳು ನನ್ನ ಬಳಿ ಈಗಲೂ ಇದೆ."

  Lucky Man Review: ತೆರೆಮೇಲೆ ಅಪ್ಪು ನೋಡೋರೇ 'ಲಕ್ಕಿ' ಮ್ಯಾನ್!Lucky Man Review: ತೆರೆಮೇಲೆ ಅಪ್ಪು ನೋಡೋರೇ 'ಲಕ್ಕಿ' ಮ್ಯಾನ್!

  Actress Ashita Maria Crasta About Puneeth Rajkumar Simplicity

  "ಎಲ್ಲಾ ಮುಗಿದ ಮೇಲೆ ಆಶಿತಾ ಡಿನ್ನರ್ ಏನಿದೆ ಎಂದು ಕೇಳಿದರು. ಅವರಿಗೆ ತಿನ್ನೋದು ಅಂದರೆ ತುಂಬಾ ಇಷ್ಟ ಅಲ್ವಾ. ಅದರಲ್ಲೂ ಬಿರಿಯಾನಿ ಅಂದರೆ ತುಂಬಾ ಇಷ್ಟ. ನಾನು ಹೇಳ್ದೆ ಬಿರಿಯಾನಿ ಇದೆ ಅಂತ. ಮುಸ್ಲಿಂ ಮಾಡಿರೋದಾ ಬಿರಿಯಾನಿ ಅಂತಲೂ ಕೇಳಿದರು. ನಾನು ಹೌದು ಎಂದೆ. ನಾನು, ನಮ್ಮ ಅಣ್ಣ ಮತ್ತೆ ಅಪ್ಪು ಡೈನಿಂಗ್ ಹಾಲ್‌ ಹೋದ್ವಿ. ಸಿಕ್ಕಾಪಟ್ಟೆ ಜನ. ಊಟಕ್ಕೆ ದೊಡ್ಡ ಕ್ಯೂ ಇತ್ತು. ಅವರು ಕ್ಯೂನಲ್ಲಿ ನಿಂತು ಕೊಂಡ್ರು. ನಾನು ಹೇಳ್ದೆ ಅಪ್ಪು ಕೂತ್ಕೊಳ್ಳಿ ಅಂತ. ನಾನು ತಂದು ಕೊಡ್ತೀನಿ ಅಂತ. ಅವರು ಕೇಳಲಿಲ್ಲ. ಅವರು ನಮ್ಮ ಜೊತೆ ಬಂದು 10ರಿಂದ 15 ನಿಮಿಷ ಕ್ಯೂನಲ್ಲಿ ನಿಂತಿದ್ದರು. ನಾನು ಸುಮ್ಮನೆ ಉತ್ಪೇಕ್ಷೆ ಮಾಡುತ್ತಿಲ್ಲ. ಕೊನೆಗೆ ಬಿರಿಯಾನಿ, ಕಬಾಬ್ ಬಡಿಸಿಕೊಂಡು ಆರಾಮಾಗಿ ಕೂತು ಊಟ ಮಾಡಿದರು. ತುಂಬಾ ಇಷ್ಟ ಆಗಿ ಮತ್ತೆ ತಗೊಂಡು ತಿಂದರು." ಎಂದು ಆಶಿತಾ, ಅಪ್ಪು ಸಿಂಪ್ಲಿಟಿಸಿ ಬಗ್ಗೆ ಮಾತನಾಡಿದ್ದಾರೆ.

  English summary
  Actress Ashita Maria Crasta About Puneeth Rajkumar Simplicity. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X