twitter
    For Quick Alerts
    ALLOW NOTIFICATIONS  
    For Daily Alerts

    'ನಾನು ಅಪ್ಪಟ ಕನ್ನಡತಿ': ವಿವಾದಕ್ಕೆ ನಟಿ ಅಶ್ವಿತಿ ಶೆಟ್ಟಿ ಸ್ಪಷ್ಟೀಕರಣ

    |

    'ನಾನು ಕನ್ನಡದ ಹುಡುಗಿ, ಕನ್ನಡದ ಬಗ್ಗೆ ತುಂಬಾ ಪ್ರೀತಿ ಇದೆ. ಕರ್ನಾಟಕದಲ್ಲಿ ಇರುವಾಗ ಕನ್ನಡ ಬಿಟ್ಟು ಬೇರೆ ಭಾಷೆಗೆ ಆದ್ಯತೆ ನೀಡಲು ಸಾಧ್ಯವೇ ಇಲ್ಲ' - ಇದು ಸಾಮಾಜಿಕ ಜಾಲತಾಣದಲ್ಲಿ ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ನಟಿ ಅಶ್ವಿತಿ ಶೆಟ್ಟಿ ನೀಡಿರುವ ಸ್ಪಷ್ಟೀಕರಣ.

    Recommended Video

    French Biriyani Movie Review | Danish Sait | PuneethRajkumar | Filmibeat Kannada

    ವಿಡಿಯೋ ಒಂದರಲ್ಲಿ ಅಶ್ವಿತಿ ಇಂಗ್ಲಿಷ್‌ನಲ್ಲಿ ಮಾತನಾಡಿದ್ದಾರೆ. ವ್ಯಕ್ತಿಯೊಬ್ಬರು ಕನ್ನಡದಲ್ಲಿ ಪೋಸ್ಟ್ ಮಾಡಿ ಎಂದಿದ್ದಕ್ಕೆ 'ನಿಮ್ಮ ಬಯೋದಲ್ಲಿ ಇಂಗ್ಲಿಷ್ ಯಾಕೆ ಇದೆ?' ಎಂದು ಮರುಪ್ರಶ್ನೆ ಹಾಕಿದ್ದಾರೆ. ಕನ್ನಡದ ಬಗ್ಗೆ ಅವರಿಗೆ ಗೌರವ, ಪ್ರೀತಿ ಇಲ್ಲ ಎಂಬ ಆರೋಪ ಕೇಳಿಬಂದಿತ್ತು.

    ಕನ್ನಡದಲ್ಲಿ ಪೋಸ್ಟ್ ಮಾಡಲು ಹೇಳಿದ್ದಕ್ಕೆ ಕಿರಿಕ್: ನಟಿ ಅಶ್ವಿತಿ ಶೆಟ್ಟಿ ವಿರುದ್ಧ ಅಸಮಾಧಾನಕನ್ನಡದಲ್ಲಿ ಪೋಸ್ಟ್ ಮಾಡಲು ಹೇಳಿದ್ದಕ್ಕೆ ಕಿರಿಕ್: ನಟಿ ಅಶ್ವಿತಿ ಶೆಟ್ಟಿ ವಿರುದ್ಧ ಅಸಮಾಧಾನ

    ನಾನು ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ಕೂಡ. ತುಂಬಾ ಬ್ರ್ಯಾಂಡ್‌ಗಳ ಜತೆಗೆ ಕೆಲಸ ಮಾಡಿದ್ದೇನೆ. ಕಳೆದ ವರ್ಷ ಟಾಪ್ ಟೆನ್ ಇನ್‌ಫ್ಲುಯೆನ್ಸರ್ಸ್‌ನಲ್ಲಿ ಬಂದಿದ್ದೆ. ಈ ವರ್ಷ ಕೂಡ ನನ್ನ ಆರ್ಟಿಕಲ್ ಬಂದಿದೆ. ಅದು ನನ್ನ ಕೆಲಸ. ಹಾಗೆಂದು ಕನ್ನಡ ಬಿಡಬೇಕು, ಕನ್ನಡ ಮಾತಾಡಬಾರದು ಎಂದು ಅಲ್ಲ ಎಂಬುದಾಗಿ ಅಶ್ವಿತಿ 'ಫಿಲ್ಮಿಬೀಟ್'ಗೆ ತಮ್ಮ ಕನ್ನಡ ಪ್ರೀತಿ ಹಾಗೂ ಕೆಲಸದಲ್ಲಿ ಕೆಲವೆಡೆ ಇಂಗ್ಲಿಷ್ ಬಳಕೆಯ ಅನಿವಾರ್ಯತೆ ಯಾಕೆ ಬೀಳುತ್ತದೆ ಎಂಬುದನ್ನು ವಿವರಿಸಿದ್ದಾರೆ. ಮುಂದೆ ಓದಿ.

    ಅವರು ಇಂಗ್ಲಿಷ್‌ನಲ್ಲಿಯೇ ಕೇಳಿದ್ದರು

    ಅವರು ಇಂಗ್ಲಿಷ್‌ನಲ್ಲಿಯೇ ಕೇಳಿದ್ದರು

    ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ಕೆಲಸದಲ್ಲಿ ಒಂದು ಬ್ರ್ಯಾಂಡ್ ನಮ್ಮನ್ನು ಸಂಪರ್ಕಿಸುವಾಗ ಅವರದೇ ನೀತಿ ನಿಯಮಗಳು ಇರುತ್ತದೆ. ಈ ಬ್ರ್ಯಾಂಡ್ ಜತೆ ನಾನು ಮೂರನೇ ಬಾರಿ ಕೆಲಸ ಮಾಡುತ್ತಿರುವುದು. ಅವರ ಸಲೂನ್‌ಗೆ ಕೂಡ ಶೂಟ್ ಮಾಡಿದ್ದೇನೆ. ಅದು ಅವರಿಗೆ ಇಂಗ್ಲಿಷ್‌ನಲ್ಲೇ ಬೇಕಿತ್ತು. ಅವರು ಅದನ್ನು ಭಾರತದಾದ್ಯಂತ ಜಾಹೀರಾತಿನ ರೀತಿ ಹಾಕುತ್ತಾರೆ. ನನ್ನ ಕಡೆಯಿಂದ ಯಾವಾಗಲೂ ಎಲ್ಲ ಬ್ರ್ಯಾಂಡ್‌ಗಳಿಗೆ ಒಂದು ಮನವಿ ಹೋಗಿಯೇ ಹೋಗುತ್ತದೆ, ಅದು ನನ್ನ ಭಾಷೆ ಕನ್ನಡದಲ್ಲಿ ಮಾತನಾಡಬಹುದಾ ಎಂದು? ಆದರೆ ಕೆಲವರು ನಾವು ಈ ಬ್ರ್ಯಾಂಡ್ ಅನ್ನು ದೇಶದಾದ್ಯಂತ ಪ್ರಚಾರ ಮಾಡುತ್ತಿದ್ದೇವೆ ಎನ್ನುತ್ತಾರೆ. ಹಾಗೆ ಕೆಲವರು ಕರ್ನಾಟಕಕ್ಕೆ ಮಾತ್ರವೇ ಆದ್ಯತೆ ನೀಡಿರುತ್ತಾರೆ.

    ಇದರ ಮುಂಚಿನ ನನ್ನ ವಿಡಿಯೊಗಳನ್ನು ಗಮನಿಸಿ, ಆಯಿಲ್ ಬ್ರ್ಯಾಂಡ್‌ಗೆ ಕನ್ನಡ ಭಾಷೆಯಲ್ಲಿ ಮಾತನಾಡಿದ್ದೇನೆ. ಕ್ಯಾಪ್ಷನ್ ಬಗ್ಗೆ ಯಾರೋ ಮಾತನಾಡಿದ್ದರು. ಕ್ಯಾಪ್ಷನ್ ಬರೋದು ಬ್ರ್ಯಾಂಡ್ ಕಡೆಯಿಂದ ಬರೋದು. ಅದನ್ನು ನಾವು ಹಾಕುವುದು ಅಲ್ಲ. ವೀಕ್ಷಕರನ್ನು ತಲುಪಲು ಅವರಿಗೆ ಯಾವ ರೀತಿ ನಿರೀಕ್ಷೆ ಇರುತ್ತದೆಯೋ ಅದಕ್ಕೆ ಅನುಗುಣವಾಗಿ ನೀಡುತ್ತಾರೆ.

    ನಾನು ಕನ್ನಡದಲ್ಲಿಯೇ ಉತ್ತರಿಸುವುದು

    ನಾನು ಕನ್ನಡದಲ್ಲಿಯೇ ಉತ್ತರಿಸುವುದು

    ವಿಷಯ ಇಲ್ಲಿರುವುದು ನಿನ್ನೆ ಹಾಕಿದ ವಿಡಿಯೋ ಬಗ್ಗೆ. ನಿನ್ನೆ ವಿಡಿಯೋ ಹಾಕುವಾಗ ಅದು ಫೇಸ್‌ಬುಕ್‌ಗೂ ಬಂದಿದೆ ಎನ್ನುವುದು ಗೊತ್ತಿರಲಿಲ್ಲ. ಅವರು ಕೊಲಾಬರೇಟ್ ಮಾಡಿದ್ದು ಇನ್‌ಸ್ಟಾಗ್ರಾಂಗೆ ಮಾತ್ರ. ಕೆಲವೊಂದು ಫೋಟೊ ಮತ್ತು ವಿಡಿಯೋಗಳು ಸ್ವಯಂಚಾಲಿತವಾಗಿ ಪೇಜ್‌ಗೆ ಹೋಗುತ್ತದೆ, ಕೆಲವೊಂದು ಹೋಗೊಲ್ಲ. ನಿನ್ನೆ ಹೀಗೆ ಹೋಗಿದ್ದು ನನಗೆ ಗೊತ್ತಿರಲಿಲ್ಲ. ಅದು ತಪ್ಪೂ ಅಲ್ಲ. ಆ ಉತ್ಪನ್ನದಿಂದ ಯಾರಿಗಾದರೂ ಉಪಯೋಗ ಆದರೆ ಬೇಜಾರಿಲ್ಲ. ಎಷ್ಟೋ ಮಂದಿ ನನ್ನನ್ನು ಕೇಳಿ ತಗೋತಾರೆ.

    ಒಬ್ಬರು ಕನ್ನಡ ಬಳಸಿ ಎಂದು ಹಾಕಿದ್ದರು. ಅದಕ್ಕೆ ಸ್ಮೈಲಿ ಹಾಕಿದ್ದೆ. ಏಕೆಂದರೆ ಅವರ ಅಭಿಪ್ರಾಯವನ್ನು ನಾನು ಗೌರವಿಸಿದ್ದೆ. ನಾನು ನಟಿಯಾಚೆಗೆ ಒಬ್ಬ ವ್ಯಕ್ತಿ. ಅಭಿಮಾನಿಯೊಬ್ಬರು ಇಂಗ್ಲಿಷ್‌ನಲ್ಲಿ ಕಾಮೆಂಟ್ ಹಾಕಿದರೆ ನಾನೇ ಕನ್ನಡದಲ್ಲಿ ಪ್ರತಿಕ್ರಿಯೆ ನೀಡುತ್ತೇನೆ. ನಾನು ಕನ್ನಡದ ಹುಡುಗಿಯಾಗಿ ಪ್ರತಿಕ್ರಿಯಿಸುತ್ತೇನೆ.

    ಸಮರ್ಥನೆಯೊಂದಿಗೆ 'ಅಪ್ಪಟ ಕನ್ನಡಿಗರ' ಕ್ಷಮೆ ಕೋರಿದ 'ಕಾಮಿಡಿ ಕಿಲಾಡಿಗಳು' ನಯನಾಸಮರ್ಥನೆಯೊಂದಿಗೆ 'ಅಪ್ಪಟ ಕನ್ನಡಿಗರ' ಕ್ಷಮೆ ಕೋರಿದ 'ಕಾಮಿಡಿ ಕಿಲಾಡಿಗಳು' ನಯನಾ

    ಅವರಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದೆ

    ಅವರಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದೆ

    ನನಗೆ ಕನ್ನಡ ಬಳಸಿ ಎಂದು ಹೇಳಿದ ವ್ಯಕ್ತಿಯ ಪ್ರೊಫೈಲ್ ನೋಡಿದೆ. ಏಕೆಂದರೆ ನನಗೆ ಹೇಳುವ ಅವರೂ ಅದನ್ನು ಬಳಸಬೇಕಲ್ಲ. ಇಂಗ್ಲಿಷ್ ಯಾಕೆ ಮಾತಾಡುತ್ತಾರೆ? ಅವರಲ್ಲಿ ಒಬ್ಬರ ಬಯೋದಲ್ಲಿ ಇಂಗ್ಲಿಷ್‌ನಲ್ಲಿ ವಿವರ ಹಾಕಿದ್ದಾರೆ. ನಾನು ಅದನ್ನು ಸಣ್ಣದಾಗಿ ಪ್ರಶ್ನಿಸಿದೆ ಅಷ್ಟೇ. ನಾನು ಅದರಲ್ಲಿ ಕೆಟ್ಟ ಶಬ್ಧ ಬಳಸಿಲ್ಲ. ನನಗೆ ಕನ್ನಡ ಕಲಿಸೋಕೆ ಯಾಕೆ ಬರ್ತೀರಾ ಎಂದು ಕೇಳಿಲ್ಲ. ಏನೂ ಹೇಳಿಲ್ಲ. ಅವರು ನನ್ನ ಹಿತೈಷಿ ಎಂದೇ ಪಾಸಿಟಿವ್ ಆಗಿ ಪರಿಗಣಿಸಿದೆ.

    ಕನ್ನಡ ಇಷ್ಟವಿಲ್ಲ ಎಂದಿಲ್ಲ

    ಕನ್ನಡ ಇಷ್ಟವಿಲ್ಲ ಎಂದಿಲ್ಲ

    ನಾನು ಅವರಿಗೆ ಮಾತ್ರ ಹಾಗೆ ಹೇಳಿದೆ, ಬೇರೆಯವರಿಗೆ ಯಾಕೆ ಹೇಳಲಿಲ್ಲ? ಏಕೆಂದರೆ ಬೇರೆಯವರು ಆ ರೀತಿ ಅವಕಾಸ ನೀಡಲಿಲ್ಲ. ನನಗೆ ಹೇಳಿದ ಬೇರೆಯವರು ಕನ್ನಡ ಬಳಸುತ್ತಾ ಇದ್ದಾರೆ. ಹಾಗಾಗಿ ನಾನು ಅವರಿಗೆ ಕೇಳಲಿಲ್ಲ. ನನ್ನ ಪ್ರಕಾರ ನಾನು ಹಾಗೆ ಕೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ನಾನು ಕನ್ನಡದ ಹುಡುಗಿ. ಆಕಸ್ಮಿಕವಾಗಿ ಅವರ ಪ್ರೊಫೈಲ್‌ಗೆ ಹೋಗಿದೆ. ಏನಿವರು ಕನ್ನಡ ಬಳಕೆ ಮಾಡಿಲ್ಲ? ಯಾಕೆ ಇಂಗ್ಲಿಷ್‌ನಲ್ಲಿ ಹಾಕಿದ್ದಾರೆ ಎಂದು ಪ್ರಶ್ನಿಸಬಹುದು. ಕನ್ನಡ ಇಷ್ಟವಿಲ್ಲ ಎಂದು ನಾನು ಎಲ್ಲಿಯೂ ಹೇಳಿಲ್ಲ. ಹೇಳೋದೂ ಇಲ್ಲ.

    ಕೆಟ್ಟ ಪದ ಏಕೆ ಬಳಸುತ್ತೀರಾ?

    ಕೆಟ್ಟ ಪದ ಏಕೆ ಬಳಸುತ್ತೀರಾ?

    ಕರ್ನಾಟಕದಲ್ಲಿದ್ದೇವೆ, ಕನ್ನಡ ಬಳಸಿ ಉಪಯೋಗಿ ಎಂದು ಹೇಳುತ್ತಾರೆ. ಹಾಗೆಯೇ ಹುಡುಗರನ್ನು, ಹುಡುಗಿಯರನ್ನು ಕನ್ನಡಿಗರನ್ನು ಗೌರವಿಸಿ ಎಂದು ಹೇಳುತ್ತಾರೆ. ಆದರೆ ಈ ರೀತಿಯ ವಾಕ್ಯ ಹೇಳುವಾಗ ಯಾಕೆ ಕೆಟ್ಟ ಶಬ್ಧದಿಂದ ಹುಡುಗಿಗೆ ಕಾಮೆಂಟ್ ಹಾಕುತ್ತಾರೆ? ಈ ಕಾಲದಲ್ಲಿ, ಪರಿಸ್ಥಿತಿ ಕೆಟ್ಟದಾಗಿ ಇರಬೇಕಾದಾರೆ, ಜನ ಸಾಯುತ್ತಾ ಇರಬೇಕಾದರೆ ಯಾರಿಗೋ ಕೆಟ್ಟದಾಗಿ ಕಾಮೆಂಟ್ ಮಾಡಿ ಅವರ ಜೀವನಕ್ಕೆ ಹಾನಿ ಮಾಡುವುದು ಸರಿನಾ? ನಾಳೆ ಅದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡರೆ ಯಾರ ಜೀವನ ಹಾಳಾಗುವುದು? ಯಾರ ಅಪ್ಪ ಅಮ್ಮ ಅಳೋದು. ಯಾರಿಗೆ ನಷ್ಟ ಆಗೋದು? ಅವರಿಗಾ? ಇಲ್ಲ ನನ್ನ ಅಪ್ಪ ಅಮ್ಮನಿಗೆ.

    6-8 ವರ್ಷದಿಂದ ಚಿತ್ರರಂಗದಲ್ಲಿ ಕಷ್ಟಪಟ್ಟು ಹೆಸರು ಮಾಡುತ್ತಿದ್ದೇನೆ. ಅದನ್ನು ಉಳಿಸಿಕೊಂಡು ಬಂದಿದ್ದೇನೆ. ನನ್ನ ಬಗ್ಗೆ ಯಾವುದೇ ವಿಷಯದಲ್ಲಿ ಕಿರಿಕ್ ಆಗಿದೆಯಾ. ಯಾವುದೇ ವಿಷಯದಲ್ಲಿ ಬಂದಿಲ್ಲ. ಕನ್ನಡದಲ್ಲಿಯೇ ವಿಡಿಯೋಗಳನ್ನು ಮಾಡುತ್ತಾ ಇದ್ದೇನೆ. ನನ್ನ ಕನ್ನಡ ಪ್ರೀತಿಯನ್ನು ತೋರಿಸಿದ್ದೇನೆ.

    ನನಗೂ ತಿಳಿವಳಿಕೆಯಿದೆ

    ನನಗೂ ತಿಳಿವಳಿಕೆಯಿದೆ

    ಕಲಾವಿದರನ್ನು ಟಾರ್ಗೆಟ್ ಮಾಡೋದು ಎಂದಷ್ಟೇ ಅಲ್ಲ, ಯಾರಿಗೂ ಕೆಟ್ಟ ರೀತಿಯಲ್ಲಿ ಯಾರನ್ನೂ ಟಾರ್ಗೆಟ್ ಮಾಡಬಾರದು. ಯಾವುದೇ ವಿಚಾರವನ್ನು ಒಳ್ಳೆಯ ರೀತಿಯಲ್ಲಿ ಹೇಳುವುದು ಇರುತ್ತದೆ. ಮಗುವಿಗೆ ಅಮ್ಮ ಹೊಡೆದು ಹೇಳಿದರೆ ಮತ್ತೆ ತಪ್ಪು ಮಾಡುತ್ತದೆ. ಒಳ್ಳೆಯ ರೀತಿಯಲ್ಲಿ ಪಾಠ ಹೇಳಿದರೆ ಕಲಿಯುತ್ತದೆ. ಆ ರೀತಿ ನಾವು. ನಾವೂ ಶಿಕ್ಷಣ ಪಡೆದಿದ್ದೇವೆ. ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ. ಎಂಬಿಎ ಓದಿದ್ದೇನೆ. ಎಚ್‌ಆರ್ ಆಗಿ ಕೆಲಸ ಮಾಡಿ ಎಷ್ಟೋ ಜನರಿಗೆ ತರಬೇತಿ ನೀಡಿರುವ ಹುಡುಗಿ. ಎಷ್ಟೋ ಜನರಿಗೆ ಸ್ಫೂರ್ತಿ ತುಂಬಿದ್ದೇನೆ. ನನ್ನ ಜನರಿಗೆ ಏನು ಇಷ್ಟ ಎನ್ನುವುದು ನನಗೆ ಗೊತ್ತಿದೆಯಲ್ಲವೇ?

    ಬೇಸರವಾಗಿದ್ದರೆ ಕ್ಷಮೆ ಕೋರುತ್ತೇನೆ

    ಬೇಸರವಾಗಿದ್ದರೆ ಕ್ಷಮೆ ಕೋರುತ್ತೇನೆ

    ನಾನು ಬೇಕೆಂದೇ ಇಂಗ್ಲಿಷ್‌ನಲ್ಲಿ ಬರೆಯುತ್ತೇನಾ? ಯಾವ ವ್ಯಕ್ತಿಗೂ ಕೆಟ್ಟ ಪದಗಳನ್ನು ಬಳಸಿ ಬೈಯಬೇಡಿ. ಅದರಲ್ಲಿಯೂ 2020ರ ಈ ಸನ್ನಿವೇಶದಲ್ಲಿ ಇಷ್ಟು ಜನರು ಸಾಯುತ್ತಿದ್ದಾರೆ, ಕಷ್ಟಪಡುತ್ತಿದ್ದಾರೆ. ನನ್ನ ಕಣ್ಣೆದುರಿಗೇ ಖಿನ್ನತೆ ಅನುಭವಿಸುತ್ತಿರುವವರಿಗೆ ನಾನು ಸಹಾಯ ಮಾಡಿದ್ದೇನೆ. ಎಲ್ಲರ ಜೀವನದಲ್ಲಿಯೂ ಲಕ್ಸುರಿ ಇರುತ್ತದೆ ಎಂದಲ್ಲ. ಪ್ರತಿಯೊಬ್ಬರಿಗೂ ಕಷ್ಟಗಳಿರುತ್ತವೆ. ಅದಕ್ಕೆ ಮತ್ತಷ್ಟು ಸೇರಿಸಬೇಡಿ. ಹೇಳುವುದಿದ್ದರೆ ಒಳ್ಳೆಯ ರೀತಿಯಲ್ಲಿ ಹೇಳಿ. ಅದನ್ನು ಗೌರವಿಸುತ್ತೇನೆ. ಅದನ್ನು ಬಿಟ್ಟು ಅವಕಾಶ ಸಿಕ್ಕಿತು ಎಂದು ಕೆಟ್ಟ ಪದಗಳನ್ನು ಬಳಸಿ ಒಬ್ಬ ನಟಿ, ಬೆಳೆಯುತ್ತಿರುವ ಕಲಾವಿದರನ್ನು ಕುಸಿಯುವಂತೆ ಮಾಡಬೇಡಿ. ಈ ಕಾರಣದಿಂದ ಎಲ್ಲರಿಗೂ ಬೇಸರವಾಗಿದ್ದರೆ ನನ್ನ ಕಡೆಯಿಂದ ಕ್ಷಮೆ ಕೇಳುತ್ತೇನೆ. ನನ್ನ ಕನ್ನಡದ ಪ್ರೀತಿ ನನಗೆ ಮತ್ತು ನನ್ನ ಅಭಿಮಾನಿಗಳಿಗೆ ಗೊತ್ತು. ಯಾವತ್ತಿಗೂ ಕನ್ನಡ ಬಿಟ್ಟುಕೊಡುವುದಿಲ್ಲ.

    ಕನ್ನಡದ ಅವಹೇಳನೆ: ವಿವಾದದಲ್ಲಿ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಯನಾಕನ್ನಡದ ಅವಹೇಳನೆ: ವಿವಾದದಲ್ಲಿ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಯನಾ

    English summary
    Actress Ashvithi Shetty made clarification after netizens criticizes her for English posts.
    Friday, July 24, 2020, 16:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X