»   »  ನಟಿ ಅವಂತಿಕಾ ಮತ್ತು ಸುರೇಶ್ ವಿವಾದ ಅಂತ್ಯ.! ನಿಜವಾಗಲೂ ಆಗಿದ್ದೇನು?

ನಟಿ ಅವಂತಿಕಾ ಮತ್ತು ಸುರೇಶ್ ವಿವಾದ ಅಂತ್ಯ.! ನಿಜವಾಗಲೂ ಆಗಿದ್ದೇನು?

Posted By:
Subscribe to Filmibeat Kannada

'ಕನ್ನಡ ಮೀಡಿಯಂ ರಾಜು' ಚಿತ್ರದ ನಟಿ ಅವಂತಿಕಾ ಶೆಟ್ಟಿ ಹಾಗೂ ನಿರ್ಮಾಪಕ ಸುರೇಶ್ ಅವರ ನಡುವಿನ ವಿವಾದಕ್ಕೆ ಇಂದು (ಜೂನ್ 15) ತೆರೆ ಬಿದ್ದಿದೆ.

ನಟಿ ಅವಂತಿಕಾ ಚಿತ್ರೀಕರಣದಲ್ಲಿ ಸರಿಯಾಗಿ ಭಾಗಿಯಾಗುತ್ತಿಲ್ಲ. ಹೋಟೆಲ್ ಬಿಲ್ಲು ಹೆಚ್ಚಾಗಿದೆ. ಸೆಟ್ ನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ ಎಂದು ನಿರ್ಮಾಪಕ ಸುರೇಶ್ ಆರೋಪ ಮಾಡಿದ್ದರು. ಇದಕ್ಕೆ ಪ್ರತ್ಯಾರೋಪವಾಗಿ ಅವಂತಿಕಾ ಕೂಡ ಚಿತ್ರತಂಡದಿಂದ ನನಗೆ ಸಮಸ್ಯೆ ಆಗುತ್ತಿದೆ. ವೈಯಕ್ತಿಕವಾಗಿ ನನಗೆ ಕಿರುಕುಳ ನೀಡಿದ್ದಾರೆ. ನನ್ನನ್ನು ಚಿತ್ರದಿಂದ ಕೈಬಿಡಲಾಗಿದೆ, ಸಂಭಾವನೆ ಇನ್ನು ಕೊಟ್ಟಿಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು.

'ರಂಗಿತರಂಗ' ನಟಿ ಆವಂತಿಕಾ ವಿರುದ್ಧ ಕೇಳಿ ಬಂದ ಆರೋಪಗಳು ನಿಜವೇ?

ಇದೀಗ, ನಿರ್ಮಾಪಕ ಹಾಗೂ ನಟಿಯ ನಡುವಿನ ರಂಪಾಟವನ್ನ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು ಬಗೆ ಹರಿಸಿದ್ದಾರೆ. ಹಾಗಾದ್ರೆ, ಫಿಲ್ಮ್ ಚೇಂಬರ್ ನಲ್ಲಿ ಏನಾಯ್ತು? ಮುಂದೆ ಓದಿ....

ನಿರ್ಮಾಪಕ ಲೈಂಗಿಕ ಕಿರುಕುಳ ಕೊಟ್ಟಿಲ್ವಂತೆ!

ನಟಿ ಆವಂತಿಕಾ ಅವರಿಗೆ ಚಿತ್ರದ ನಿರ್ಮಾಪಕ ಸುರೇಶ್ ಅವರು ಕಿರುಕುಳ ಕೊಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಸ್ಪಷ್ಟನೆ ನೀಡಿದ ನಟಿ ಆವಂತಿಕಾ ಶೆಟ್ಟಿ, ನಿರ್ಮಾಪಕರಿಂದ ಲೈಂಗಿಕ ಕಿರುಕುಳ ಆಗಿಲ್ಲ. ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ.

ಅವಂತಿಕಾ V/S ಸುರೇಶ್: ನಿರ್ಮಾಪಕನ ಆರೋಪಕ್ಕೆ ತಿರುಗು ಬಾಣ ಬಿಟ್ಟ ನಟಿ

ಅವಂತಿಕಾ ಶೆಟ್ಟಿ ಏನು ಹೇಳಿದರು

ನನಗೆ ಚಿತ್ರದ ಶೂಟಿಂಗ್ ನಲ್ಲಿ ಎದುರಾದ ಸಮಸ್ಯೆಗಳು ನಿಜ. ಆದ್ರೆ, ನಿರ್ಮಾಪಕರಿಂದ ಯಾವುದೇ ಕಿರುಕುಳ ಆಗಿಲ್ಲ. ಆ ಸಂದರ್ಭದಲ್ಲಿ ನಾನು ಏನು ಹೇಳಬೇಕಿತ್ತು, ಅದನ್ನ ಹೇಳಿದೆ. ಈಗ, ಸಾರಾ ಗೋವಿಂದು ಅವರು ಎಲ್ಲಾ ಬಗೆ ಹರಿಸಿದ್ದಾರೆ ಎಂದು ನಟಿ ಅವಂತಿಕಾ ಅವರು ಹೇಳಿದ್ದಾರೆ.

ಲೈಂಗಿಕ ಕಿರುಕುಳ ಎನ್ನುವುದು 'ಬ್ರಹ್ಮಾಸ್ತ್ರ', ನಿರ್ಮಾಪಕರೇ ಎಚ್ಚರ: ಜಗ್ಗೇಶ್

ಕೋರ್ಟ್ ಕೇಸ್ ಗತಿಯೇನು?

ಈ ವಿವಾದದ ನಂತರ ''ಕನ್ನಡ ಮೀಡಿಯಂ ರಾಜು ಚಿತ್ರಕ್ಕೆ ತಡೆ ನೀಡಬೇಕು, ನನಗೆ ಡಬ್ಬಿಂಗ್ ಮಾಡಲು ಅವಕಾಶ ಕೊಡುತ್ತಿಲ್ಲವೆಂದು ನಟಿ ಅವಂತಿಕಾ ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ಈ ದೂರನ್ನ ವಾಪಸ್ ಪಡೆಯಲು ನಟಿ ನಿರ್ಧರಿಸಿದ್ದಾರೆ.

ಸುರೇಶ್ ಮೇಲೆ ಅವಂತಿಕಾ ಆರೋಪ: ನಟ ಗುರುನಂದನ್ ಹೇಳಿದ್ದೇನು?

ಸುರೇಶ್ ಏನು ಹೇಳಿದರು?

''ಇಬ್ಬರಲ್ಲು ಮನಸ್ತಾಪ ಇತ್ತು. ಈಗ ವಾಣಿಜ್ಯ ಮಂಡಳಿಯಲ್ಲಿ ಎಲ್ಲ ಬಗೆ ಹರಿಸಿಕೊಂಡಿದ್ದೇವೆ. ನಾನು ಅವರಿಗೆ ಯಾವುದೇ ರೀತಿಯ ಕಿರುಕುಳ ಕೊಟ್ಟಿಲ್ಲ. ಅವರಿಗೆ ಇಷ್ಟವಿದ್ರೆ ಡಬ್ಬಿಂಗ್ ಮಾಡಬಹುದು. ಅದು ನಿರ್ದೇಶಕರಿಗೆ ಬಿಟ್ಟಿದ್ದು'' ಎಂದು ನಿರ್ಮಾಪಕ ಸುರೇಶ್ ಸಂಧಾನದ ಬಳಿಕ ಹೇಳಿದ್ದಾರೆ.

English summary
Actress Avanthika Shetty and Producer Suresh Controversy Solved in Front of Karnataka Film Chamber of Commerce President Sa ra Govindu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada