'ರಂಗಿ' ಬೆಡಗಿ ಅವಂತಿಕಾಗೆ ಸಿಕ್ತು ಮತ್ತೊಂದು ಅವಕಾಶ
ಹಿಟ್ ಸಿನಿಮಾ 'ಶಿವಲಿಂಗ' ನಿರ್ಮಾಪಕ ಕೆ.ಎ ಸುರೇಶ್ ಮತ್ತು 'ಫಸ್ಟ್ ರ‍್ಯಾಂಕ್ ರಾಜು' ನಿರ್ದೇಶಕ ನರೇಶ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಹೊಸ ಪ್ರಾಜೆಕ್ಟ್ ಗೆ ಇದೀಗ ನಾಯಕಿ ಆಯ್ಕೆ ಆಗಿದ್ದಾರೆ.
ಇನ್ನೂ ಹೆಸರಿಡದ ಚಿತ್ರಕ್ಕೆ ನಾಯಕನಾಗಿ ನಟ ಗುರುನಂದನ್ ಅವರೇ ಆಯ್ಕೆಯಾಗಿದ್ದು, ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡ ಬಿಜಿಯಾಗಿತ್ತು. ಇದೀಗ ನಾಯಕಿ ಕೂಡ ಫಿಕ್ಸ್ ಆಗಿದ್ದು, ಚಿತ್ರದ ಚಿತ್ರೀಕರಣ ಕೂಡ ಶುರುವಾಗಿದೆ.['ರಾಜು'ಗೆ 'ಶಿವಲಿಂಗ' ಸುರೇಶ್ ಹೊಸ ಸಿನಿಮಾ ಮಾಡ್ತವ್ರೇ]

ಅಂದಹಾಗೆ 'ರಾಜು' ಖ್ಯಾತಿಯ ಗುರುನಂದನ್ ಜೊತೆ ಡ್ಯುಯೆಟ್ ಹಾಡುವ ಬೆಡಗಿ ಬೇರಾರು ಅಲ್ಲ, ನಮ್ಮ 'ರಂಗಿತರಂಗ' ಚಿತ್ರದ ನಟಿ ಅವಂತಿಕಾ ಶೆಟ್ಟಿ ಅವರು. 'ರಂಗಿತರಂಗ' ಬಿಗ್ ಹಿಟ್ ಆದ ಹಿನ್ನಲೆಯಲ್ಲಿ ಅವಂತಿಕಾ ಶೆಟ್ಟಿ ಅವರನ್ನು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

ಈಗಾಗಲೇ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ 'ಕಲ್ಪನಾ 2' ಚಿತ್ರದಲ್ಲಿ ಅವಂತಿಕಾ ಅವರು ನಟಿಸಿದ್ದು, ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ತಮಿಳಿನಲ್ಲಿ ತಾಪ್ಸಿ ಪನ್ನು ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ನಟಿ ಅವಂತಿಕಾ ಅವರು ಮಾಡಿದ್ದಾರೆ. ಹಾರರ್-ಥ್ರಿಲ್ಲರ್ 'ಕಲ್ಪನಾ 2' ಜುಲೈ 15 ರಂದು ತೆರೆ ಕಾಣುತ್ತಿದೆ.[ಜುಲೈ 2ನೇ ವಾರ ಉಪ್ಪಿ ಅಭಿಮಾನಿಗಳಿಗೆ ಥಿಯೇಟರ್ ನಲ್ಲಿ ಹಬ್ಬ]

ಈಗಾಗಲೇ ಹೆಸರಿಡದ ಚಿತ್ರದ ಶೂಟಿಂಗ್ ಬೆಂಗಳೂರು ಸುತ್ತ-ಮುತ್ತ ಆರಂಭ ಆಗಿದ್ದು, ನಟಿ ಅವಂತಿಕಾ ಮತ್ತು ನಟ ಗುರುನಂದನ್ ಅವರು ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಬಹುತೇಕ 'ಫಸ್ಟ್ ರ‍್ಯಾಂಕ್ ರಾಜು' ಚಿತ್ರತಂಡವೇ ಮುಂದುವರಿಯಲಿದ್ದು, ಈ ಬಾರಿ ಹಾಸ್ಯದೊಂದಿಗೆ ಜೀವನ ಪಾಠ ಹೇಳಲು ನಿರ್ದೇಶಕ ನರೇಶ್ ಕಮಾರ್ ತಯಾರಿ ಮಾಡುತ್ತಿದ್ದಾರೆ.


Click it and Unblock the Notifications











