twitter
    For Quick Alerts
    ALLOW NOTIFICATIONS  
    For Daily Alerts

    ಪಿ ಶೇಷಾದ್ರಿ ನಿರ್ದೇಶನದಲ್ಲಿ ಕಾರಂತರ ಕಾದಂಬರಿ: 'ಮೂಕಜ್ಜಿ'ಯಾದ ಜಯಶ್ರೀ

    |

    Recommended Video

    ಪಿ.ಶೇಷಾದ್ರಿ ಸಿನಿಮಾದಲ್ಲಿ ಜಯಶ್ರೀ..! | Filmibeat Kannada

    ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಡಾ ಶಿವರಾಮ ಕಾರಂತರ ಶ್ರೇಷ್ಠ ಕಾದಂಬರಿ 'ಮೂಕಜ್ಜಿಯ ಕನಸುಗಳು' ಈಗ ತೆರೆಮೇಲೆ ಬರ್ತಿದೆ. ಕನ್ನಡಿಗರ ಹೃದಯದಲ್ಲಿ ಜಾಗ ಪಡೆದುಕೊಂಡಿರುವ ಮೂಕಜ್ಜಿ ಈಗ ಪರದೆ ಮೇಲೆ ಜೀವ ಪಡೆದುಕೊಳ್ಳುತ್ತಿದ್ದಾರೆ.

    ಖ್ಯಾತ ನಿರ್ದೇಶಕ ಪಿ ಶೇಷಾದ್ರಿ 'ಮೂಕಜ್ಜಿಯ ಕನಸುಗಳು' ಕಾದಂಬರಿಯನ್ನ ಸಿನಿಮಾ ಮಾಡ್ತಿದ್ದು, ಪ್ರಮುಖ ಪಾತ್ರಕ್ಕೆ ಹಿರಿಯ ನಟಿ ಬಿ ಜಯಶ್ರೀ ಅವರನ್ನ ಆಯ್ಕೆ ಮಾಡಿಕೊಂಡಿದ್ದಾರೆ.

    ಸಿನಿಮಾ ರೂಪ ಪಡೆದುಕೊಳ್ಳುತ್ತಿದೆ ಕಾರಂತರ 'ಮೂಕಜ್ಜಿಯ ಕನಸುಗಳು' ಸಿನಿಮಾ ರೂಪ ಪಡೆದುಕೊಳ್ಳುತ್ತಿದೆ ಕಾರಂತರ 'ಮೂಕಜ್ಜಿಯ ಕನಸುಗಳು'

    ಹಲವು ವರ್ಷಗಳಿಂದ ಈ ಕಾದಂಬರಿಯನ್ನ ಸಿನಿಮಾ ಮಾಡಬೇಕು ಎಂಬ ಆಸೆಯನ್ನ ಹೊಂದಿದ್ದ ಪಿ ಶೇಷಾದ್ರಿ ಅವರು ಈಗ ಪ್ರೀ-ಪ್ರೊಡಕ್ಷನ್ ಕೆಲಸ ಮುಗಿಸಿ ಶೂಟಿಂಗ್ ಗೆ ಹೋಗಲು ಸಿದ್ಧವಾಗಿದ್ದಾರೆ.

    actress b jayashree selected as a Mookajjiya

    ಸದ್ಯ, ಚಿತ್ರಕಥೆ ಸಂಪೂರ್ಣವಾಗಿ ಮುಗಿದಿದೆ, ಸೂಕ್ತ ಲೊಕೇಶನ್ ಹುಡುಕುತ್ತಿದ್ದ ಆದಷ್ಟೂ ಬೇಗ ಚಿತ್ರೀಕರಣ ಆರಂಭಿಸಲಿದ್ದಾರೆ.

    ಈ ಬಗ್ಗೆ ಮಾತನಾಡಿದ್ದ ಪಿ ಶೇ‍ಷಾದ್ರಿ ಅವರು ''ಮೂಕಜ್ಜಿಯನ್ನು ನಾವು ನಮ್ಮದಾಗಿಸಿಕೊಳ್ಳುವುದು ನನಗೆ ದೊಡ್ಡ ಚಾಲೆಂಜ್. ಈ ಕೃತಿ ದೃಶ್ಯ ಮಾಧ್ಯಮಕ್ಕೆ ಸಲ್ಲುವಂತದಲ್ಲ. ಇಲ್ಲಿ ನಾಯಕ, ನಾಯಕಿ ಯಾರು ಇಲ್ಲ. ಕಾರಂತರೇ ಹೇಳುವ ಹಾಗೆ ಮೂಕಜ್ಜಿಯ ಕೂಡ ನಾಯಕಿ ಅಲ್ಲ. ಸಿನಿಮಾದ ಸೂತ್ರಗಳನ್ನು ಮೀರಿ ಈ ಚಿತ್ರ ಮಾಡಬೇಕು ಇದು ನನಗೆ ದೊಡ್ಡ ಸವಾಲು'' ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಅಂದ್ಹಾಗೆ, ಮೂಕಜ್ಜಿಯ ಕನಸುಗಳು' ಡಾ ಶಿವರಾಮ ಕಾರಂತರಿಗೆ ಜ್ಞಾನ ಪೀಠ ಪ್ರಶಸ್ತಿ ತಂದು ಕೊಟ್ಟ ಕಾದಂಬರಿಯಾಗಿದೆ. 1977ರಲ್ಲಿ ಈ ಕಾದಂಬರಿಯನ್ನು ಅವರು ರಚಿಸಿದ್ದು, ಅಜ್ಜಿ ಮತ್ತು ಮೊಮ್ಮಗನ ನಡುವಿನ ಸಂಭಾಷಣೆಯನ್ನು ಕಾರಂತರು ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ.

    English summary
    Film-maker P. Seshadri planning to make a film on Jnanpith award winner late Kota Shivaram Karanth’s novel ‘Mookajjiya Kanasugalu’. B jayashree has selected as a Mookajjiya role.
    Saturday, October 6, 2018, 9:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X