'ಅರ್ಜುನ್ ಸರ್ಜಾ ಫ್ಯಾಮಿಲಿ ಕೆಟ್ಟ ಫ್ಯಾಮಿಲಿ ಅಲ್ಲ' - ಬಿ ಸರೋಜದೇವಿ
Recommended Video

ನಟ ಅರ್ಜುನ್ ಸರ್ಜಾ ಮೇಲೆ ಶ್ರುತಿ ಹರಿಹರನ್ ಮಾಡಿರುವ ಆರೋಪದ ಬಗ್ಗೆ ನಟಿ ಬಿ ಸರೋಜಾದೇವಿ ಹೇಳಿದ್ದೇನು?
ನಟ ಅರ್ಜುನ್ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಈ ಬಗ್ಗೆ ಕನ್ನಡದ ನಟ, ನಟಿಯರು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.
ಈ ಘಟನೆಯ ಬಗ್ಗೆ ಮಾತನಾಡಿರುವ ಹಿರಿಯ ನಟಿ ಬಿ ಸರೋಜ ದೇವಿ ''ಅರ್ಜುನ್ ಸರ್ಜಾ ಸ್ವಭಾವ ಆ ರೀತಿ ಅಲ್ಲ. ಅವರು ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತಾರೆ. ಈ ವಿಷಯವನ್ನು ನಾನು ನಂಬುವುದಿಲ್ಲ'' ಎಂದು ಹೇಳಿದ್ದಾರೆ.
''30 ವರ್ಷಗಳಿಂದ ಅರ್ಜುನ್ ಸರ್ಜಾ ಅವರು ನನಗೆ ಗೊತ್ತಿದೆ. ಸರ್ಜಾ ಫ್ಯಾಮಿಲಿ ಕೆಟ್ಟ ಫ್ಯಾಮಿಲಿ ಅಲ್ಲ. ನಾವೆಲ್ಲ ತುಂಬಾ ವರ್ಷಗಳಿಂದ ಆತ್ಮೀಯರು. ಶ್ರುತಿ ಹರಿಹರನ್ ಯಾರೂ ಅಂತಾನೆ ನನಗೆ ಗೊತ್ತಿಲ್ಲ. ಈ ರೀತಿ ಆರೋಪ ಸರಿಯಲ್ಲ.'' ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಒಂದು ಕಡೆ ಯುವ ನಟಿಯರು ಶ್ರುತಿ ಹರಿಹರನ್ ಗೆ ತಮ್ಮ ಸಾಥ್ ನೀಡುತ್ತಿದ್ದರೆ, ಇತ್ತ ಹಿರಿಯ ನಟಿಯರಾದ ಬಿ ಸರೋಜ ದೇವಿ, ತಾರಾ ಅನುರಾಧ ಅರ್ಜುನ್ ಸರ್ಜಾ ಅವರ ಪರ ತಮ್ಮ ಬೆಂಬಲ ಸೂಚಿಸಿದ್ದಾರೆ.
More from Filmibeat
English summary
Senior actress B Sarojadevi reaction about Sruthi Hariharan's allegation. Kannada actress Sruthi Hariharan has accused actor Arjun Sarja.
me too dr b sarojadevi sruthi hariharan arjun sarja sandalwood ಅರ್ಜುನ್ ಸರ್ಜಾ ಶೃತಿ ಹರಿಹರನ್ ಮೀ ಟೂ ಸ್ಯಾಂಡಲ್ ವುಡ್


Click it and Unblock the Notifications











