ಸಚಿವರ ನೆರವಿನಿಂದ ಲಾಕ್‌ಡೌನ್ ನಡುವೆ ಬೆಂಗಳೂರು ತಲುಪಿದ ಹಿರಿಯ ನಟಿ ಭಾರತಿ
ಕೊರೊನಾ ಲಾಕ್‌ಡೌನ್ ಬಿಸಿ ಯಾರನ್ನೂ ಬಿಟ್ಟಿಲ್ಲ. ಲಕ್ಷಾಂತರ ಮಂದಿ ಸ್ವಂತ ಮನೆಗಳನ್ನು ತಲುಪಲಾಗಿಲ್ಲ. ಹಲವು ನಟ-ನಟಿಯರೂ ತಮ್ಮ ಮನೆಗಳಿಗೆ ತಲುಪಲಾಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರೂ ಸಹ ಕೊರೊನಾ ಲಾಕ್‌ಡೌನ್‌ನಿಂದಾಗಿ ತೀವ್ರ ಸಮಸ್ಯೆ ಎದುರಿಸಿದ್ದಾರೆ. ಬೆಂಗಳೂರಿಗೆ ಬರಲಾಗದೆ ಸಮಸ್ಯೆಗೆ ಸಿಲುಕಿಕೊಂಡಿದ್ದರು.
ಆದರೆ ಈ ಸಮಯದಲ್ಲಿ ನೆರವಿಗೆ ಬಂದ ಸಚಿವ ಎಸ್.ಟಿ.ಸೋಮಶೇಖರ್ ಭಾರತಿ ಅವರು ಕ್ಷೇಮವಾಗಿ ಬೆಂಗಳೂರಿಗೆ ತಲುಪುವ ವ್ಯವಸ್ಥೆ ಮಾಡಿದ್ದಾರೆ.

ಲಾಕ್‌ಡೌನ್ ಮುನ್ನಾ ಮೈಸೂರಿಗೆ ತೆರಳಿದ್ದರು
ನಟಿ ಭಾರತಿ ಅವರು ಲಾಕ್‌ಡೌನ್ ಆಗುವ ಮುನ್ನಾ ಮೈಸೂರಿಗೆ ತೆರಳಿದ್ದರು. ಲಾಕ್‌ಡೌನ್ ಘೋಷಣೆ ಆದಾಗ ಅವರು ಅಲ್ಲಿಯೇ ಸಿಕ್ಕಿ ಹಾಕಿಕೊಂಡರು. ವಾಹನ ಬೆಂಗಳೂರಿನಲ್ಲಿ ಬಿಟ್ಟು ಬಂದಿದ್ದರಿಂದ ಬೆಂಗಳೂರಿಗೆ ಬರಲಾಗಿರಲಿಲ್ಲ.

ಅಗತ್ಯ ಔಷಧಗಳು ಖಾಲಿ ಆದವು
ಲಾಕ್‌ಡೌನ್ ಘೋಷಣೆ ಆದಾಗಿನಿಂದಲೂ ಅವರು ಮೈಸೂರಿನಲ್ಲಿ ಉಳಿದುಬಿಟ್ಟಿದ್ದರು. ಹಾಗೋ-ಹೀಗೊ ಪರಿಸ್ಥಿತಿಯನ್ನು ಭಾರತಿ ಅವರು ನಿಭಾಯಿಸಿದ್ದರು. ಆದರೆ ಅಗತ್ಯ ಔಷಧಿಗಳು ಖಾಲಿಯಾಗುತ್ತಾ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಮನೆಗೆ ಹೋಗುವುದು ಅವರಿಗೆ ಅನಿವಾರ್ಯವಾಗಿತ್ತು.

ನೆರವಿಗೆ ಬಂದ ಸಚಿವ ಎಸ್.ಟಿ.ಸೋಮಶೇಖರ್
ಭಾರತಿ ಅವರು ಎದುರಿಸುತ್ತಿದ್ದ ಸಮಸ್ಯೆ ಸಚಿವ ಎಸ್.ಟಿ.ಸೋಮಶೇಖರ್ ಅವರ ಗಮನಕ್ಕೆ ಬಂತು. ಕೂಡಲೇ ಜಿಲ್ಲಾಡಳಿತದಿಂದ ಸೂಕ್ತ ಪಾಸ್ ವ್ಯವಸ್ಥೆ ಮಾಡಿಸಿ, ಭಾರತಿ ಅವರು ಕ್ಷೇಮವಾಗಿ ಬೆಂಗಳೂರು ತಲುಪುವಂತೆ ನೋಡಿಕೊಂಡಿದ್ದಾರೆ.

ಜಯಂತಿ ಅವರು ಹೊಸಪೇಟೆಯಲ್ಲಿ ಸಿಲುಕಿಕೊಂಡಿದ್ದಾರೆ
ಮತ್ತೊಬ್ಬ ಹಿರಿಯ ನಟಿ ಜಯಂತಿ ಅವರು ಲಾಕ್‌ಡೌನ್ ಗೆ ಮುನ್ನಾ ಹಂಪಿ ಪ್ರವಾಸಕ್ಕೆ ತೆರಳಿದ್ದವರು ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಲಾಕ್‌ಡೌನ್ ಆದಾಗಿನಿಂದಲೂ ಹೊಸಪೇಟೆಯ ಖಾಸಗಿ ಹೋಟೆಲ್ ಒಂದರಲ್ಲಿ ಅವರು ವಾಸ್ತವ್ಯ ಹೂಡಿದ್ದಾರೆ. ಅಲ್ಲಿಯೇ ಅವರು ಕ್ಷೇಮವಾಗಿದ್ದಾರೆ.


Click it and Unblock the Notifications











