'ಜಾಕಿ' ಭಾವನ ಪತಿಗೆ ಕನ್ನಡದಲ್ಲಿ ಸಿಕ್ತು ದೊಡ್ಡ ಅವಕಾಶ
ನಟಿ ಭಾವನ ಸೌತ್ ಚಿತ್ರರಂಗದ ಬ್ಯೂಟಿಫುಲ್ ನಟಿ. ಬೇರೆ ಭಾಷೆಯಲ್ಲಿ ಭಾವನ ಎಂದು ಕರೆಸಿಕೊಳ್ಳುವ ಈ ಚಂದದ ನಟಿ ಕನ್ನಡದಲ್ಲಿ 'ಜಾಕಿ' ಭಾವನ ಅಂತ್ತಾನೆ ಫೇಮಸ್. ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಭಾವನ ಅನೇಕ ಒಳ್ಳೆ ಒಳ್ಳೆಯ ಸಿನಿಮಾವನ್ನು ಮಾಡಿದ್ದಾರೆ.
ಭಾವನ ಬಳಿಕ ಇದೀಗ ಅವರ ಪತಿ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಭಾವನ ಪತಿ ನಟ ನವೀನ್ ಅವರಿಗೆ ಒಂದು ದೊಡ್ಡ ಅವಕಾಶ ಇದೀಗ ಸಿಕ್ಕಿದೆ. ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕರು ಅವರಿಗೆ ಒಂದು ಒಳ್ಳೆಯ ಚಾನ್ಸ್ ನೀಡಿದ್ದಾರೆ. ಆ ನಿರ್ದೇಶಕರಿಂದ ಬಂದ ಅವಕಾವನ್ನು ನವೀನ್ ಖುಷಿಯಿಂದ ಹಿಂದು ಮುಂದು ನೋಡದೆ ಒಪ್ಪಿಕೊಂಡಿದ್ದಾರೆ.
ಅಂದಹಾಗೆ, ನಟ ನವೀನ್ ಅವರಿಗೆ ಸಿಕ್ಕಿರುವ ಆ ದೊಡ್ಡ ಸಿನಿಮಾ ಯಾವುದು ಎಂಬ ವಿವರ ಮುಂದಿದೆ ನೋಡಿ...

ಸೂರಿ ನಿರ್ದೇಶದಲ್ಲಿ ನವೀನ್
ನಿರ್ದೇಶಕ ಸೂರಿ ಈಗಾಗಲೇ ನಟಿ ಭಾವನ ಜೊತೆಗೆ ಎರಡು ಸಿನಿಮಾ ಮಾಡಿದ್ದಾರೆ. 'ಜಾಕಿ' ಮೂಲಕ ಕನ್ನಡಕ್ಕೆ ಭಾವನ ಅವರನ್ನ ಪರಿಚಯ ಮಾಡಿದ್ದ ಸೂರಿ ಇತ್ತೀಚಿಗೆ 'ಟಗರು' ಸಿನಿಮಾದಲ್ಲಿ ಕೂಡ ಅವರ ಜೊತೆಗೆ ಕೆಲಸ ಮಾಡಿದ್ದರು. ಇದರ ನಂತರ ಈಗ ಭಾವನ ಪತಿ ನವೀನ್ ಗೆ ಸೂರಿ ಆಫರ್ ನೀಡಿದ್ದಾರೆ.

'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ
'ಟಗರು' ನಂತರ ಸೂರಿ ಕೈಗೆತ್ತಿಕೊಂಡಿರುವ ಸಿನಿಮಾ 'ಪಾಪ್ ಕಾರ್ನ್ ಮಂಕಿ ಟೈಗರ್'. ಈ ಚಿತ್ರ ಈಗಾಗಲೇ ಅನೇಕ ವಿಚಾರಗಳಿಗೆ ಸುದ್ದಿ ಮಾಡಿದೆ. ಈ ಚಿತ್ರತಂಡಕ್ಕೆ ಸದ್ಯ ನವೀನ್ ಸೇರಿಕೊಂಡಿದ್ದಾರೆ. ಚಿತ್ರದಲ್ಲಿ ಅವರು ವಿಲನ್ ಪಾತ್ರ ನಿರ್ವಹಿಸುತ್ತಾರೆ ಎಂದು ಹೇಳಲಾಗುತ್ತಿದೆ.

ನಿರ್ಮಾಪಕ, ನಟ ನವೀನ್
ನವೀನ್ ಒಬ್ಬ ನಟ ಹಾಗೂ ನಿರ್ಮಾಪಕ ಕೂಡ ಹೌದು. ನಟನಾಗಿ 'ನಾಯಕ' ಎಂಬ ಕನ್ನಡ ಸಿನಿಮಾ ಮಾಡಿದ್ದ ಅವರು ಭಾವನ ಅವರ 'ರೋಮಿಯೋ' ಚಿತ್ರವನ್ನ ನಿರ್ಮಾಣ ಮಾಡಿದ್ದರು. ಇದೀಗ ಸೂರಿ ಕಡೆಯಿಂದ ದೊಡ್ಡ ಅವಕಾಶ ನವೀನ್ ಪಾಲಾಗಿದೆ.

ರಂಗಭೂಮಿ ಹಿನ್ನಲೆಯ ಕಲಾವಿದರು
'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ದೊಡ್ಡ ತಾರಬಳಗವಿದೆ. ನಟ ಧನಂಜಯ್, ನಿವೇದಿತಾ, ಸಪ್ತಮಿ, ಅಮೃತಾ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮೂರು ನಟಿಯರು ರಂಗಭೂಮಿ ಹಿನ್ನಲೆಯಿಂದ ಬಂದವರಾಗಿದ್ದಾರೆ.


Click it and Unblock the Notifications











