ಮತ್ತೆ ಒಂದಾದ 'ಟಗರು' ಜೋಡಿ : ಶಿವಣ್ಣಗೆ ಭಾವನಾ ನಾಯಕಿ

ಸೂಪರ್ ಹಿಟ್ 'ಟಗರು' ಚಿತ್ರದ ನಂತರ ಶಿವರಾಜ್ ಕುಮಾರ್ ಮತ್ತು ಭಾವನಾ ಚಿತ್ರ ಪ್ರಿಯರ ಫೇವರೆಟ್ ಜೋಡಿಯಾಗಿದ್ದಾರೆ. 'ಟಗರು' ಚಿತ್ರದಲ್ಲಿ ಮೋಡಿ ಮಾಡಿದ್ದ ಈ ಜೋಡಿ ಈಗ ಮತ್ತೆ ತೆರೆ ಮೇಲೆ ಒಟ್ಟಿಗೆ ಬರುತ್ತಿದ್ದಾರೆ.

ಶಿವರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾ 'ಮೈ ನೇಮ್ ಈಸ್ ಅಂಜಿ' ಮೂಲಕ ಈ ಹಿಟ್ ಜೋಡಿಯನ್ನು ಮತ್ತೆ ಒಟ್ಟಿಗೆ ಕರೆ ತರುತ್ತಿದ್ದಾರಂತೆ ನಿರ್ದೇಶಕ ಎ.ಹರ್ಷ. 'ಜಾಕಿ' ಚಿತ್ರದ ಮೂಲಕ ಕನ್ನಡ ಚಿತ್ರಪ್ರಿಯರಿಗೆ ಪರಿಚಿತರಾದ ಭಾವನಾ ಸದ್ಯ ಕನ್ನಡದ ಸೊಸೆಯಾಗಿ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಭಾವನಾ ಅವರನ್ನು ಮತ್ತೆ ಸೆಂಚುರಿ ಸ್ಟಾರ್ ಜೊತೆ ನೋಡುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

ವಿಶೇಷ ಅಂದ್ರರೆ, ಈಗಾಗಲೇ ಶಿವಣ್ಣ ಮತ್ತು ನಿರ್ದೇಶಕ ಹರ್ಷ 'ಭಜರಂಗಿ' ಮತ್ತು 'ವಜ್ರಕಾಯ' ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಎರಡು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಈ ಜೋಡಿ ಈಗ ಹ್ಯಾಟ್ರಿಕ್ ಹಿಟ್ ಪಡೆಯಲು 'ಮೈ ನೇಮ್ ಈಸ್ ಅಂಜಿ' ಮೂಲಕ ಮತ್ತೆ ಬರುತ್ತಿದ್ದಾರೆ.

actress Bhavana playing female lead role in My Name is Anji movie.

ಸದ್ಯ ಶಿವಣ್ಣ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. 'ಕವಚ' ಚಿತ್ರದ ರಿಲೀಸ್ ಗೆ ಕಾಯುತ್ತಿರುವ ಹ್ಯಾಟ್ರಿಕ್ ಹೀರೋ, 'ರುಸ್ತುಂ', 'ದ್ರೋಣ' ಮತ್ತು 'ಆನಂದ್' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಹರ್ಷ ಜೊತೆ 'ಮೈ ನೇಮ್ ಈಸ್ ಅಂಜಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಜೂನ್ ತಿಂಗಳಲ್ಲಿ ಸೆಟ್ಟೇರುವ ಸಾಧ್ಯತೆ ಇದೆ.

More from Filmibeat

English summary
Kannada actor Shiva Raj Kumar and actress Bhavana again together in 'My Name is Anji' movie. this movie is directed by A. Harsha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X