''ಚೇತನ್ ಯಾರು ನಿರ್ಮಾಪಕನಾ, ಹೀರೋನಾ..? ಆಕ್ಟಿಂಗ್ ಯಾಕೆ ನಿಲ್ಲಿಸಿದ್ದಾರಂತೆ ಕೇಳಿ'' - ಭಾವನಾ ಧಗ ಧಗ...!
ಬಣ್ಣದ ಪ್ರಪಂಚದಲ್ಲಿ ನಡೆದ ಲೈಂಗಿಕ ಪ್ರಕರಣ .. ಕಿರುಕುಳ .. ದೌರ್ಜನ್ಯದ ಕುರಿತು ವಾರಕ್ಕೊಮ್ಮೆಯಾದರು ನಾವೆಲ್ಲರೂ ಸುದ್ದಿಯನ್ನ ಕೇಳುತ್ತಲೇ ಇರುತ್ತೇವೆ. ಅದರಲ್ಲಿಯೂ ಕಳೆದ ಐದಾರು ವರ್ಷದಲ್ಲಿ ಅನೇಕ ಪ್ರಜ್ಞಾವಂತ ನಟಿಯರು ದಿಟ್ಟತನದಿಂದ ಸಾಕಷ್ಟು ತೆರೆ ಮರೆಯ ಕಳ್ಳಾಟಗಳನ್ನು ಇಲ್ಲಿಯವರೆಗೆ ಬಹಿರಂಗಪಡಿಸಿದ್ದಾರೆ. ಕಾಮುಕರ ಮುಖವಾಡವನ್ನು ಕಳಚಿದ್ದಾರೆ. ಭಾಷೆಯ ಭೇದ ಭಾವ ಇಲ್ಲದೇ ನಿರ್ಮಾಪಕರು ನಿರ್ದೇಶಕರಿಂದ ಹಿಡಿದು ಸ್ಟಾರ್‌ಗಳ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದಾರೆ.
ಆದರೂ ಕೂಡ ಕಾಮಾಂಧರ ಧೈರ್ಯ ಕಡಿಮೆಯಾಗಿಲ್ಲ. ಪಾತ್ರಕ್ಕಾಗಿ ಪಲ್ಲಂಗದ ಸಂಸ್ಕ್ರತಿ ಮುಕ್ತಾಯವಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಮಲಯಾಳಂ ಚಿತ್ರರಂಗದಲ್ಲಿ ಮತ್ತೊಂದು ಸುತ್ತಿನ ಮೀಟೂ ಅಲೆ ಎದ್ದಿದೆ. ಹೇಮಾ ಆಯೋಗದ ವರದಿಯಿಂದ ಅಲ್ಲೋಲ.. ಕಲ್ಲೋಲದ ವಾತಾವರಣ ನಿರ್ಮಾಣವಾಗಿದೆ. ನಿವಿನ್ ಪೌಲಿ ಅವರಿಂದ ಹಿಡಿದು ಅನೇಕರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪವನ್ನೂ ಮಾಡಲಾಗಿದೆ. ಇದೆಲ್ಲದರಿಂದ ಸಹಜವಾಗಿ ಮಲಯಾಳಂ ಮಾತ್ರ ಅಲ್ಲ ಬೇರೆ ಭಾಷೆಯ ಚಿತ್ರರಂಗದಲ್ಲಿ ಕೂಡ ಕಂಪನ ಶುರುವಾಗಿದೆ. ಮಲಯಾಳಂನಲ್ಲಿ ಮಾಡಿದಂತೆ ನಮ್ಮಲ್ಲಿ ಕೂಡ ಸಮಿತಿಯೊಂದನ್ನು ರಚನೆ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕನ್ನಡ ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಆದರೆ, ಕೆಲವರು ಈ ಬೆಳವಣಿಗೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇರುವವರೆಲ್ಲರೂ ತುಂಬಾ ಸಭ್ಯಸ್ಥರು.. ಸಂಸ್ಕಾರವಂತರು.. ಎನ್ನುವ ವಾದ ಮಾಡುತ್ತಿದ್ದಾರೆ. ಉದಾಹರಣೆಗೆ ಭಾವನಾ ರಾಮಣ್ಣ

ಹೌದು, ರೇಣುಕಾಸ್ವಾಮಿ ಪ್ರಕರಣದಲ್ಲಿ ನಾನು ದರ್ಶನ್ ಪರ ಎಂದು ಬೆಂಬಲದ ಧ್ವಜ ಹಾರಿಸಿದ್ದ ಚಂದ್ರಮುಖಿ ಪ್ರಾಣಸಖಿಯ ಭಾವನಾ ಈಗ ಕನ್ನಡ ಚಿತ್ರರಂಗಕ್ಕೆ ಯಾವ ಆಯೋಗವೂ ಬೇಡ ಎಂದು ಹೇಳಿದ್ದಾರೆ. ಶ್ರುತಿ ಹರಿಹರನ್ ಅವರ ಪ್ರಕರಣವನ್ನು ಹೊರತು ಪಡಿಸಿದರೆ, 90 ವರ್ಷಗಳ ಸುದೀರ್ಘ ಇತಿಹಾಸವನ್ನೊಂದಿರುವ ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿಯೇ ಇಲ್ಲ ಎಂದು ಹೇಳಿದ್ದಾರೆ. ಚೇತನ್ ಅಹಿಂಸಾ.. ಶ್ರುತಿ ಹರಿಹರನ್.. ಕವಿತಾ ಲಂಕೇಶ್.. ನೀತು.. ನೇತೃತ್ವದ ಫೈರ್ ಸಂಸ್ಥೆಯ ಮೇಲೆ ಕೂಡ ಹರಿಹಾಯ್ದಿದ್ದಾರೆ.
ಕನ್ನಡ ಚಿತ್ರರಂಗದ ಒಳಿತು ಕೆಡಕು ಯೋಚನೆ ಮಾಡಲು ಇಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕಲಾವಿದರ ಸಂಘ, ನಿರ್ಮಾಪಕರ ಸಂಘ ಇದೆ. ಆದರೆ ಇದ್ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಫೈರ್ ಎಂಬ ಸಂಸ್ಥೆಯನ್ನು ಶುರು ಮಾಡಿ ಅವರು ಲೈಂಗಿಕ ದೌರ್ಜನ್ಯದ ಕುರಿತು ಧ್ವನಿ ಎತ್ತಿದ್ದಾರೆ ಎಂದಿರುವ ಭಾವನಾ, ಚಿತ್ರರಂಗದಲ್ಲಿದ್ದುಕೊಂಡು, ಚಿತ್ರರಂಗದವರ ಮಾತನ್ನೂ ಕೇಳದೇ, ಎಲ್ಲವೂ ಅವರೇ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅನುಮೋದನೆಯ ಸಲುವಾಗಿ ಅವರು ಬಾಹಿರವಾಗಿ ಹೋಗಿದ್ದಾರೆ. ದೂರನ್ನೇ ದಾಖಲು ಮಾಡದೇ, ನೇರವಾಗಿ ಆರೋಪವನ್ನೂ ಮಾಡದೇ ಮಾತನಾಡುವುದು ಸರಿನಾ ಎಂದು ಕೇಳಿದ್ದಾರೆ.

ಇನ್ನೂ ಶ್ರುತಿ ಹರಿಹರನ್ ಅವರ ಪ್ರಕರಣವೇ ನಾವು ಮೊದಲು ಕಂಡಿದ್ದು, ಆಗ ಇಲ್ಲಿ ಬಂದಿದ್ದರು. ಮಾತನಾಡಿದ್ದರು. ಅಂಬರೀಷ್ ಸರ್ ಕೂಡ ಆಗ ನಮ್ಮ ನಡುವೆ ಇದ್ದರು. ಆದರೂ ಇಲ್ಲಿ ಬಗೆಹರಿಸಿಕೊಳ್ಳದೇ ಅವರು ಕೋರ್ಟ್‌ಗೆ ಹೋದರು ಎಂದು ತಮ್ಮ ಅಸಮಾಧಾನ ಹೊರ ಹಾಕಿರುವ ಭಾವನಾ, ಅಲ್ಲಿ ಹೋದ ಮೇಲೆ ಯಾರಿಗೆ ಅಧಿಕಾರ ಇದೆ, ನಾವು ಮಾತನಾಡೋಕಾಗುತ್ತಾ ಇಲ್ಲ ಆಗ ನಾವು ಕೋರ್ಟ್ ಗೆ ಹೋಗಬೇಡಿ ನೀವು ಹೋಗಿದ್ದು ತಪ್ಪು ಎಂದು ಹೇಳಿದರೆ ಧ್ವನಿ ಹಿಚುಕುವಂತಹ ಕೆಲಸ ಆಗುತ್ತೆ ಎಂದು ಹೇಳಿದ್ದಾರೆ. ಅಸಲಿಗೆ ಧ್ವನಿ ಹಿಚುಕುವ ಕೆಲಸ ಎಲ್ಲಿ ಆಗಿದೆ. ಅವರು ನನ್ನ ಧ್ವನಿ ಇಲ್ಲಿ ಸರಿಯಾಗಿ ಕೇಳಲಿಲ್ಲ. ನಾನು ನಿರೀಕ್ಷೆ ಮಾಡಿದ ಉತ್ತರ ಇಲ್ಲಿ ಬಂದಿಲ್ಲ ಎಂದ ಮೇಲೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಎಫ್‌ಐಆರ್ ಹಾಕೊಂಡಿದಾರೆ. ಅವರು ಹೋಗಿದಾರೆ ಕೋರ್ಟಿಗೆ ಎಂದು ಹೇಳಿದ್ದಾರೆ. ಬಾಹಿರವಾಗಿ ಹೋದ ನಂತರ ಅದನ್ನು ಬಾಹಿರವಾಗಿ ಬಗೆಹರಿಸಿಕೊಳ್ಳಲಿ ಅದು ಆಂತರಿಕ ಸಮಸ್ಯೆ ಅಲ್ಲ ಎಂದು ಕೂಡ ಹೇಳಿದ್ದಾರೆ.
ಮುಂದುವರೆದು ಈ ರೀತಿಯ ಸಮಿತಿಗಳು ಎಲ್ಲಿ ಆಗಬೇಕು ಎಂದರೆ ಪ್ರಕರಣಗಳು ದಾಖಲಾದರೂ ನಾವು ನಿರ್ಲಕ್ಷ್ಯ ವಹಿಸಿದಾಗ, ಯಾವುದೇ ಉತ್ತರವನ್ನು ಕೊಡ್ದೇ ಇದ್ದಾಗ ಇದೆಲ್ಲ ಆಗಬೇಕು ಎಂದು ಹೇಳಿರುವ ಭಾವನಾ, ಚಿತ್ರರಂಗದಲ್ಲಿ ಸಮಸ್ಯೆಯಾಗುತ್ತಿದೆ ಎಂದರೆ ಮಹಿಳಾ ಆಯೋಗ ಅಲ್ಲ ಸೆನ್ಸಾರ್ ಮಂಡಳಿಯವರು ಬರಬೇಕು, ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಅವರಿಗೆ ನೋಡಬೇಕು ಎಂಬ ಭಾವನೆ ಬಂದರೆ ಚಿತ್ರೀಕರಣದ ಸ್ಥಳಕ್ಕೆ ಬರಲಿ ನೋಡಲಿ ಎಂದು ಹೇಳಿದ್ದಾರೆ. ಫೈರ್ ಎಂಬ ಸಂಸ್ಥೆ ಯಾವ ಆಕ್ಟ್ ಆಡಿ ಬರುತ್ತೆ ಎಂದು ಮೊದಲು ಅವರನ್ನು ಕೇಳಿ, ಸುಮ್ನೆ ಫೈರ್ ಫೈರ್ ಎಂದರೆ, ಆ ಚೇತನ್ ಏನೂ ಸಿನಿಮಾ ಮಾಡಿದಾರಾ, ನಿರ್ಮಾಣ ಮಾಡಿದಾರಾ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಆಕ್ಟಿಂಗ್ ಮಾಡುವುದನ್ನೇ ಬಿಟ್ಟಿದ್ದಾರೆ ಯಾಕೆ ಅಂತ ಅವರಿಗೆ ಕೇಳಿ ಎಂದು ಮಾಧ್ಯಮದವರ ಮೂಲಕ ಚೇತನ್‌ಗೆ ಪ್ರಶ್ನೆಯನ್ನು ಕೂಡ ಭಾವನಾ ಕೇಳಿದ್ದಾರೆ. ಚೇತನ್ ಉತ್ತರ ಕೊಡ್ತಾರಾ. Let's see.


Click it and Unblock the Notifications