ಐವಿಎಫ್‌ಗಾಗಿ ವೀರ್ಯ ದಾನಿ ಆಯ್ಕೆಗೆ ಭಾವನಾ ರಾಮಣ್ಣ ಷರತ್ತು ಏನಾಗಿತ್ತು?

ಕನ್ನಡ ನಟಿ ಭಾವನಾ ರಾಮಣ್ಣ ಐವಿಎಫ್ ಚಿಕಿತ್ಸೆ ಮೂಲಕ ತಾಯಿಯಾಗಲು ಹೊರಟಿರುವ ವಿಚಾರ ಭಾರೀ ಸುದ್ದಿ ಆಗಿದೆ. ಈ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಮ್ಮ ನಿರ್ಧಾರದ ಬಗ್ಗೆ ಆಕೆ ಹೆಮ್ಮೆಯಿಂದ ಮಾತನಾಡುತ್ತಿದ್ದಾರೆ.

ಸಾಕಷ್ಟು ಸಂದರ್ಶನಗಳಲ್ಲಿ ಭಾವನಾ ರಾಮಣ್ಣ ಭಾಗಿ ಆಗುತ್ತಿದ್ದಾರೆ. ಕೆಲವರ ಗೊಂದಲಗಳು ಹಾಗೂ ಟೀಕೆ, ಟಿಪ್ಪಣಿಗಳ ಬಗ್ಗೆಯೂ ಪ್ರತಿಕ್ರಿಯಿಸುತ್ತಿದ್ದಾರೆ. ಐವಿಎಫ್‌ ಚಿಕಿತ್ಸೆಗಾಗಿ ನನ್ನ ಆಪ್ತರು ದೆಹಲಿಗೆ ಹೋಗುವಂತೆ ಸಲಹೆ ಕೊಟ್ಟಿದ್ದರು. ಆದರೆ ನಾನು ಯಾಕೆ ಭಯ ಪಡಬೇಕು, ಎಲ್ಲರಿಗೂ ಗೊತ್ತಾಗಲಿ ಎಂದು ಬೆಂಗಳೂರಿನಲ್ಲೇ ಅದಕ್ಕೆ ಮುಂದಾದೆ ಎಂದು ಕೂಡ ಭಾವನಾ ಹೇಳಿದ್ದಾರೆ. ಸದ್ಯ ಟಿವಿ9 ಸಂದರ್ಶನದಲ್ಲಿ ಐವಿಎಫ್ ಚಿಕಿತ್ಸೆಯ ವೀರ್ಯದಾನಿಯ ಬಗ್ಗೆ ಕೂಡ ಆಕೆ ಮುಕ್ತವಾಗಿ ಮಾತನಾಡಿದ್ದಾರೆ.

Actress Bhavana Ramanna Opens Up About IVF Journey and Choosing Donor from South India

ಇನ್ ವಿಟ್ರೊ ಫರ್ಟಿಲೈಸೇಶನ್(IVF) ಎನ್ನುವುದು ಒಂದು ಸಹಾಯಕ ಸಂತಾನೋತ್ಪತ್ತಿ ತಂತ್ರ. ಭ್ರೂಣವನ್ನು ರಚಿಸಲು ಪ್ರಯೋಗಾಲಯದಲ್ಲಿ ಮಹಿಳೆಯಿಂದ ಪಡೆದ ಅಂಡಾಣು ಮತ್ತು ದಾನಿಯಿಂದ ಪಡೆದ ವೀರ್ಯವನ್ನು ಸಂಯೋಜಿಸಲಾಗುತ್ತದೆ. ಬಳಿಕ ಆ ಭ್ರೂಣವನ್ನು ಮಹಿಳೆಯ ಗರ್ಭಕೋಶಕ್ಕೆ ವರ್ಗಾವಣೆ ಮಾಡಲಾಗುತ್ತದೆ. ದಾನಿಗಳನ್ನು ಆಯ್ಕೆಮಾಡುವಾಗ, ದಾನಿಯ ಆರೋಗ್ಯ, ವಯಸ್ಸು, ವಂಶವಾಹಿ ಹಿನ್ನೆಲೆ ಮುಂತಾದ ಅಂಶಗಳನ್ನು ಪರಿಗಣಿಸಲಾಗುತ್ತದೆ. ತಮ್ಮ ಐವಿಎಫ್‌ ಸಂಬಂಧಿಸಿದಂತೆ ಡೋನರ್ ಬಗ್ಗೆ ಕೂಡ ಭಾವನಾ ಅವರು ತಿಳಿಸಿದ್ದಾರೆ.

ನಟಿ ಭಾವನಾ ಮಾತನಾಡಿ "ಡೋನರ್ ಆಯ್ಕೆ ಬಗ್ಗೆ ಒಂದಷ್ಟು ನಿಯಮಾವಳಿಗಳಿವೆ. ಪೇಷೆಂಟ್‌ ಅಗತ್ಯತೆಗೆ ತಕ್ಕಂತೆ ಏನೆಲ್ಲಾ ಅರ್ಹತೆಗಳಿರಬೇಕು ಡೋನರ್‌ಗೆ ಎನ್ನುವುದು ಇದೆ. ಯಾವ ಡೋನರ್ ಅಲ್ಲಿ ಏನೇನು ಇರಬೇಕು, ಡೋನರ್ ಯಾವ ವಯಸ್ಸಾಗಿರಬೇಕು ಎಲ್ಲವನ್ನು ಪರಿಗಣಿಸುತ್ತಾರೆ. ಡೋನರ್ ರಕ್ತಪರೀಕ್ಷೆ ನಡೆಸುವುದರಿಂದ ಸಾಕಷ್ಟು ಮಾಹಿತಿ ಸಿಗುತ್ತದೆ. ಅವರ ದೈಹಿಕ, ಮಾನಸಿಕ ಹಾಗೂ ಕ್ರಿಮಿನಲ್ ಹಿನ್ನೆಲೆಯನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ" ಎಂದು ನಟಿ ಭಾವನಾ ಹೇಳಿದ್ದಾರೆ.

"ಡೋನರ್ ಆಯ್ಕೆಗೆ ಅವಕಾಶ ಇದ್ಯಾ? ಇಲ್ವಾ? ಗೊತ್ತಿಲ್ಲ. ನಾನು ವೈದ್ಯರನ್ನು ನಂಬಿದೆ. ಅವ್ರು ಹೇಳಿದ ಡೋನರ್ ಅನ್ನು ಒಪ್ಪಿಕೊಂಡೆ. ಆದರೆ ನಾನು ದಕ್ಷಿಣ ಭಾರತದ ಡೋನರ್ ಬೇಕು ಎಂದಿದ್ದೆ. ನಾನು ದೆಹಲಿಗೆ ಹೋಗಿ ಚಿಕಿತ್ಸೆ ಪಡೆದಿದ್ದರೆ ಉತ್ತರ ಭಾರತದ ಡೋನರ್ ಸಿಗುವ ಸಾಧ್ಯತೆಯಿತ್ತು. ಆಹಾರ ಶೈಲಿ, ಜೀನ್ಸ್, ಡಿಎನ್‌ಎ ಎಲ್ಲಾ ಒಂದೇ ತರ ಇರುತ್ತದೆ ಎನ್ನುವ ಕಾರಣಕ್ಕೆ ನಾನು ದಕ್ಷಿಣದವರು ಬೇಕು ಎಂದಿದ್ದೆ. ಇನ್ನುಳಿದಂತೆ ನಾನು ಏನು ಕೇಳಲಿಲ್ಲ. ಈಗ ದೊಡ್ಡ ದೊಡ್ಡ ಆಸ್ಪತ್ರೆ ಬ್ರ್ಯಾಂಡ್‌ಗಳಿವೆ. ಹಾಗಾಗಿ ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ" ಎಂದು ನಟಿ ಭಾವನಾ ಅಭಿಪ್ರಾಯಪಟ್ಟಿದ್ದಾರೆ.

ಕೆಲ ಸ್ನೇಹಿತರು ಡೋನರ್ ಆಗೋಕೆ ಸಿದ್ಧ ಎಂದರು. ಆದರೆ ಒಬ್ರು ಹೇಳಿದ್ದು ನನಗೆ ಸೆನ್ಸಿಬಲ್ ಎನ್ನಿಸಿತ್ತು ಎಂದು ಭಾವನಾ ನೆನಪು ಮಾಡಿಕೊಂಡಿದ್ದಾರೆ. "ವೀರ್ಯದಾನ ಮಾಡಬಹುದು. ಆದ್ರೆ ನಾಳೆ ಮಕ್ಕಳು ನಮ್ಮ ಮುಂದೆ ಓಡಾಡುವಾಗ ಹೇಳದೇ ಹೇಗೆ ಇರುವುದು? ನನಗೆ ಆ ರೀತಿ ಅನ್ನಿಸಬಹುದು ಎಂದು ಅವ್ರು ಹೇಳಿದ್ರು. ನನಗೂ ಅವ್ರು ಹೇಳಿದ್ದು ಸರಿ ಎನಿಸಿತ್ತು. ಗೊತ್ತಿರುವವರು ಆಗಿದ್ರೆ, ನಾಳೆ ಅವ್ರಿಗೆ ಆ ಭಾವನೆ ಬರಬಹುದು. ಅಥವಾ ನಾನು ನಾಳೆ ನೀವು ಕೂಡ ಮಕ್ಕಳ ಜವಾಬ್ದಾರಿ ತಗೋಬೇಕು ಎಂದು ಹೇಳಬಹುದು. ಹಾಗಾಗಿ ಆ ಸಮಸ್ಯೆ ಬೇಡ ಎಂದು ಸುಮ್ಮನಾದೆ" ಎಂದು ಭಾವನಾ ವಿವರಿಸಿದ್ದಾರೆ.

More from Filmibeat

English summary
Bhavana Ramanna proudly shares her decision to become a mother through IVF
Read more about: bhavana sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X