ಮಗಳ ಮೊದಲ ಫೋಟೊ ಹಂಚಿಕೊಂಡ ಭಾವನಾ ರಾಮಣ್ಣ; ಏನು ಹೆಸರಿಡುವುದು ಎಂದು ಪ್ರಶ್ನೆ

ಕನ್ನಡ ನಟಿ ಭಾವನಾ ರಾಮಣ್ಣ ಐವಿಎಫ್ ವಿಧಾನದ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮದುವೆ ಆಗದೇ ತಾಯಿಯಾಗಲು ಆಕೆ ಬಯಸಿದ್ದರ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಇನ್ನು ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದ ಆಕೆಗೆ ಆಘಾತ ಕಾದಿತ್ತು. ಹೆರಿಗೆ ವೇಳೆ ಒಂದು ಮಗು ಮೃತಪಟ್ಟಿತ್ತು. ಸೆಪ್ಟೆಂಬರ್ 6ರಂದು ಆಕೆ ಹೆಣ್ಣು ಮಗುವಂತೆ ಸ್ವಾಗತಿಸಿದ್ದರು.

ಹೆರಿಗೆಗೂ ಮುನ್ನ ನಟಿ ಭಾವನಾ ರಾಮಣ್ಣ ಅವರ ಸೀಮಂತ ಶಾಸ್ತ್ರ ಕೂಡ ನಡೆದಿತ್ತು. ತಾವು ಯಾಕೆ ಮದುವೆ ಆಗದೇ ಮಗು ಪಡೆಯುವ ಪ್ರಯತ್ನ ಮಾಡುತ್ತಿರುವುದು ಎನ್ನುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಇದೀಗ ತಮ್ಮ ಮಗುವಿನ ಮೊದಲ ಫೋಟೊವನ್ನು ಹಂಚಿಕೊಂಡಿದ್ದಾರೆ. ಅಂದರೆ ತಮ್ಮ ಕೈಯಲ್ಲಿ ಮಗು ಕೈ ಇಟ್ಟಿರುವ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ.

Actress Bhavana Ramanna Shares First Photo of Newborn Daughter After IVF Birth

"ದೊಡ್ಡ ಮನೆ, ಪುಟ್ಟ ಕುಟುಂಬ.. ನಾನು ಮತ್ತು ನನ್ನ ತಂದೆ, ಬೆಳಗ್ಗೆ ಎದ್ದು ಮನೆಯಂಗಳದಲ್ಲಿ ಕಾಫಿ ಹೀರುತ್ತಾ ಕೂತರೆ, ಇಲ್ಲಿ ಹಕ್ಕಿಗಳದ್ದೇ ನಾದ ನಿನಾದ.. ಕು ಕು ಮೈನಾ, ಕಿಚಿ ಪಿಚಿ ಗುಬ್ಬಚ್ಚಿ, ನಿತ್ಯವೂ ಬರೀ ಹಕ್ಕಿಗಳದ್ದೇ ಕಲರವ.. ಹಕ್ಕಿ ಪಿಕ್ಕಿಗಳ ಹಾಡು ಪಾಡು ಕೇಳುತ್ತಿದ್ದ ಮನೆಯಲ್ಲೀಗ, ಹೊಸದೊಂದು ಪುಟ್ಟ ಹಕ್ಕಿಯ ಸರಿಗಮ.. ಮನೆಯ ಗೂಡಲ್ಲಿ ಚುಯ್ ಚುಯ್ ಸದ್ದು ಮಾಡುತ್ತಿರುವ ಈ ಪುಟ್ಟ ಹಕ್ಕಿಗೆ ಏನೆಂದು ಹೆಸರಿಡುವುದು..? ನಮ್ಮನ್ನು ನಯವಾಗಿ ಬಂಧಿಸಿದ ಸುಂದರ ಬಲೆ, ಇದು ಹೊಸ ಪ್ರೀತಿಯ ಅಲೆ.. ವಿನೂತನ ವಿಸ್ಮಯ." ಎಂದು ಭಾವನಾ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು, ಆಪ್ತರು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

ಗರ್ಭಿಣಿಯಾಗಿದ್ದಾಗಲೇ ಮಕ್ಕಳಿಗೆ ಏನು ಹೆಸರಿಡುವುದು ಎನ್ನುವ ಬಗ್ಗೆ ನಟಿ ಭಾವನಾ ರಾಮಣ್ಣ ಮಾತನಾಡಿದ್ದರು. ಫ್ಯಾನ್ಸಿ ಹೆಸರಿಡುವುದು, ಗೂಗಲ್‌ನಲ್ಲಿ ಹೆಸರಿನ ಹುಡುಕಾಟ ನಡೆಸುವುದು, ಡಿಫರೆಂಟ್ ಹೆಸರು ಇಡಬೇಕು ಎನ್ನುವ ಆಲೋಚನೆ ಇಲ್ಲ ಎಂದಿದ್ದರು. ಒಂದು ವೇಳೆ ಹೆಣ್ಣು ಮಗು ಹುಟ್ಟಿದರೆ ರುಕ್ಮಿಣಿ ಎಂದು ಹೆಸರಿಡಬೇಕು ಎಂದುಕೊಂಡಿದ್ದೇನೆ. ಅದು ನಮ್ಮ ಅಜ್ಜಿಯ ಹೆಸರು ಎಂದು ತಿಳಿಸಿದ್ದರು. ಇದೀಗ "ಈ ಪುಟ್ಟ ಹಕ್ಕಿಗೆ ಏನೆಂದು ಹೆಸರಿಡುವುದು..?" ಎಂದು ಭಾವನಾ ಕೇಳಿದ್ದಾರೆ.

ನಟಿ ಭಾವನಾ ತಮ್ಮ ಮಗಳಿಗೆ ಅಜ್ಜಿಯ ಹೆಸರನ್ನು ನಾಮಕರಣ ಮಾಡುತ್ತಾರಾ? ಅಥವಾ ಬೇರೆ ಏನಾದರೂ ಹೆಸರು ಇಡುತ್ತಾರಾ? ಕಾದು ನೋಡಬೇಕಿದೆ. ಅಭಿಮಾನಿಗಳು ಕಾಮೆಂಟ್ ಮಾಡಿ ಸಾಕಷ್ಟು ಹೆಸರುಗಳನ್ನು ಸೂಚಿಸಿದ್ದಾರೆ. ಇನ್ನು ಒಂದು ಮಗುವನ್ನು ಕಳೆದುಕೊಂಡ ನೋವನ್ನು ನಟಿ ಭಾವನಾ ಹಂಚಿಕೊಂಡಿದ್ದರು. ಅವಳಿ ಮಕ್ಕಳನ್ನು ಪಡೆಯುವ ಕನಸು ನನಸಾಗಲಿಲ್ಲ ಎಂದು ಬೇಸರ ಹೊರ ಹಾಕಿದ್ದರು.

"ಆಗಸ್ಟ್ 1ಕ್ಕೆ ಸೀಮಂತ ಶಾಸ್ತ್ರ ಮಾಡಿದ್ರು. ಅಕ್ಟೋಬರ್ 1ಕ್ಕೆ ಹೆರಿಗೆಗೆ ಡೇಟ್ ಕೊಟ್ಟಿದ್ರು. ಸೀಮಂತದ ಬಗ್ಗೆ ಆಗಾಗ್ಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ವೈದ್ಯರ ಬಳಿ ಪರೀಕ್ಷೆ ಮಾಡಿಸಿದಾಗ ಸ್ಥಿತಿ ಗಂಭೀರವಾಗಿದೆ ಎಂದರು. ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದ್ದರು. ಮಗುವಿಗೆ ಬಿಟ್ಟು ಬಿಟ್ಟು ರಕ್ತ ಸಂಚಾರ ಆಗುತ್ತಿತ್ತು. ಪರೀಕ್ಷೆ ವೇಳೆ ಮಗುವಿನಿಂದ ತಾಯಿಗೆ ವಾಪಸ್ ರಕ್ತ ಸಂಚಾರ ಆಗುತ್ತಿತ್ತು. ಮಗುವಿನ ಹೃದಯಬಡಿತ 50% ಕಮ್ಮಿ ಆಗಿತ್ತು. ಬಳಿಕ ಒಂದು ಮಗುವಿನ ಹೃದಯಬಡಿಯ ಮತ್ತಷ್ಟು ಕಮ್ಮಿ ಆಗಿತ್ತು. ಇನ್ನು ತಡ ಮಾಡುವುದು ಬೇಡ ಎಂದು ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಿದ್ರು" ಎಂದು ಭಾವನಾ ರಾಮಣ್ಣ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಎಷ್ಟೇ ಪ್ರಯತ್ನಿಸಿದರೂ ಒಂದು ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎರಡನೇ ಮಗು ಆರೋಗ್ಯವಾಗಿತ್ತು. ಬಳಿಕ 15 ದಿನ ಆಸ್ಪತ್ರೆಯ NICUನಲ್ಲಿಟ್ಟಿದ್ದರು. ಹೆರಿಗೆ ಸಮಯದಲ್ಲಿ ಎರಡು ಮಗುವನ್ನು ಕೈಗೆ ಕೊಟ್ಟಿದ್ದರು. ಆದರೆ ಅಷ್ಟರಲ್ಲಾಗಲೇ ಒಂದು ಮಗು ಜೀವಬಿಟ್ಟಿತ್ತು ಎಂದು ಅವನಿಯಾನ ಯೂಟ್ಯೂಬ್ ವಾಹಿನಿಗೆ ಫೋನ್ ಕಾಲ್ ಸಂದರ್ಶನದಲ್ಲಿ ನಟಿ ಭಾವನಾ ಪ್ರತಿಕ್ರಿಯಿಸಿದ್ದರು.

More from Filmibeat

English summary
Bhavana Ramanna posted baby first photo
Read more about: bhavana sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X