'ಬಲುಮ' ಹಾಡಿಗೆ ಬಿಂದಾಸ್ ಹೆಜ್ಜೆ ಹಾಕಿದ ನಟಿ ಭಾವನಾ ರಾವ್
ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರದ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಿಲೀಸ್ ಗೂ ಮುನ್ನವೇ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಪಡೆದುಕೊಳ್ಳುತ್ತಿರುವ 'ಟಗರು' ಸ್ಯಾಂಡಲ್ ವುಡ್ ನಲ್ಲಿ ಸಖತ್ ಹವಾ ಮಾಡ್ತಿದೆ.
ಇದೀಗ, 'ಗಾಳಿಪಟ' ಸುಂದರಿ ಭಾವನಾ ರಾವ್ 'ಟಗರು' ಚಿತ್ರದ ಹಾಡಿಗೆ ಫಿದಾ ಆಗಿದ್ದು, ತಮ್ಮದೇ ಆದ ಸ್ಟೈಲ್ ನಲ್ಲಿ ಹಾಡಿ ಕುಣಿದಿದ್ದಾರೆ. 'ಟಗರು' ಚಿತ್ರದ ಬಲುಮ ಹಾಡು ಸೂಪರ್ ಹಿಟ್ ಆಗಿದ್ದು, ಆ ಹಾಡಿಗೆ ಭಾವನಾ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಭಾವನಾ ರಾವ್ ಈ ಚಿತ್ರದಲ್ಲಿ ಅಭಿನಯಿಸಿಲ್ಲ. ಆದರೂ ಬಲುಮ ಹಾಡಿಗೆ ಮರುಳಾಗಿರುವ ಭಾವನಾ ಮಸ್ತ್ ಎಂಜಾಯ್ ಮಾಡಿದ್ದಾರೆ. ಅಂದ್ಹಾಗೆ, ಈ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ.
ಇನ್ನುಳಿದಂತೆ ಶಿವರಾಜ್ ಕುಮಾರ್ ನಾಯಕನಾಗಿರುವ ಈ ಚಿತ್ರದಲ್ಲಿ ವಸಿಷ್ಠ ಸಿಂಹ, ಧನಂಜಯ್ ಖಳನಾಯಕರಾಗಿ ಮಿಂಚಿದ್ದಾರೆ. ಮಾನ್ವಿತ ಹರೀಶ್ ಮತ್ತು ಭಾವನಾ ಇಬ್ಬರು ನಾಯಕಿಯರು ಅಭಿನಯಿಸಿದ್ದಾರೆ. ದುನಿಯಾ ಸೂರಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಸದ್ಯ, ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರ ಸೆನ್ಸಾರ್ ಗೆ ಹೋಗಿದೆ. ಒಮ್ಮೆ ಸೆನ್ಸಾರ್ ಮುಗಿಸಿದ ನಂತರ ಸಿನಿಮಾ ತೆರೆಕಾಣಲಿದೆ. ಮೂಲಗಳ ಪ್ರಕಾರ ಫೆಬ್ರವರಿ ತಿಂಗಳಲ್ಲೇ 'ಟಗರು' ಬಿಡುಗಡೆಯಾಗಲಿದೆ.
ಭಾವನಾ ರಾವ್ ಡ್ಯಾನ್ಸ್ ಇಲ್ಲಿದೆ ನೋಡಿ....


Click it and Unblock the Notifications











