Don't Miss!
- Automobiles
ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಟೊಯೊಟಾ ಇನೋವಾ ಕ್ರಿಸ್ಟಾ ಡೀಸೆಲ್ ಕಾರು
- News
Budget 2023: ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಹೊಸ ಪ್ಯಾಕೇಜ್- ಏನೇನಿದೆ? ತಿಳಿಯಿರಿ
- Finance
Budget 2023: "ಅಮೃತ ಕಾಲದ ಬಜೆಟ್", ಆಯವ್ಯಯ ಪಟ್ಟಿ ಮಂಡನೆ ಆರಂಭಿಸಿದ ವಿತ್ತ ಸಚಿವೆ
- Sports
BGT 2023: ಆಸ್ಟ್ರೇಲಿಯಾ ಕ್ರಿಕೆಟಿಗನಿಗೆ ವೀಸಾ ಸಮಸ್ಯೆ: ತವರಿನಲ್ಲಿಯೇ ಉಳಿದುಕೊಂಡ ಆಸಿಸ್ ಸ್ಟಾರ್
- Technology
Budget 2023: ಬಜೆಟ್ ಪ್ರತಿಯನ್ನು ಪ್ರಾದೇಶಿಕ ಭಾಷೆಯಲ್ಲಿ ಡೌನ್ಲೋಡ್ ಮಾಡಲು ಹೀಗೆ ಮಾಡಿ!
- Lifestyle
ಫೆಬ್ರವರಿ ತಿಂಗಳಿನಲ್ಲಿ ಈ 5 ರಾಶಿಯವರಿಗೆ ಲಕ್ಷ್ಮಿ ಕೃಪೆಯಿದೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟಿ ಭಾವನಾ ಮದುವೆ ಆಗಿಲ್ಲ ಏಕೆ? ಅವರೇ ಕೊಟ್ಟರು ಕಾರಣ
ನಟಿ ಭಾವನಾ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದವರು. ಪ್ರತಿಭಾವಂತ ನಟಿಯಾಗಿದ್ದ ಭಾವನಾ ಕನ್ನಡ ಮಾತ್ರವಲ್ಲದೆ ತಮಿಳು, ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದರು.
ಆದರೆ ಸಮಯ ಕಳೆದಂತೆ ಹೊಸ ನಟ-ನಟಿಯರ ಅಬ್ಬರದ ನಡುವೆ ಹಾಗೂ ಸ್ವತಃ ರಾಜಕೀಯ ರಂಗದತ್ತ ಗಮನ ಬದಲಾಯಿಸಿದ ಕಾರಣ ಸಿನಿಮಾದಿಂದ ದೂರವಾದರು. ಇದೀಗ 6 ವರ್ಷದ ಬಳಿಕ ಮತ್ತೆ ಭಾವನಾ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.
ಇಂಡಸ್ಟ್ರಿಯಿಂದ
ರಶ್ಮಿಕಾ
ಮಂದಣ್ಣ
ಅವರನ್ನು
ಬ್ಯಾನ್
ಮಾಡೋಕಾಗುತ್ತೇನ್ರಿ?
ಭಾವನಾ,
ಡಾಲಿ
ಕಿಡಿ!
ತಮ್ಮ ಸಿನಿಮಾ ಕಮ್‌ಬ್ಯಾಕ್, ರಾಜಕೀಯ ಭವಿಷ್ಯ ಇತರೆ ವಿಷಯಗಳ ಬಗ್ಗೆ ನಟಿ ಭಾವನಾ ಇತ್ತೀಚೆಗಿನ ತಮ್ಮ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಅದೇ ಸಂದರ್ಶನದಲ್ಲಿ ತಾವೇಕೆ ಈವರೆಗೆ ವಿವಾಹವಾಗಿಲ್ಲ ಎಂದು ಸಹ ಹೇಳಿಕೊಂಡಿದ್ದಾರೆ.

ಮದುವೆ ಆಗದಿರುವುದಕ್ಕೆ ನಿರ್ದಿಷ್ಟ ಕಾರಣವಿಲ್ಲ: ಭಾವನಾ
ಮದುವೆ ಏಕೆ ಆಗಿಲ್ಲ ಎಂಬುದಕ್ಕೆ ಒಂದು ನಿರ್ದಿಷ್ಟ ಕಾರಣ ಇಲ್ಲ. ನನ್ನ ಬೆಳವಣಿಗೆಯ ವಿವಿಧ ಹಂತದಲ್ಲಿ ನನಗೆ ಸೂಕ್ತವಾದ ಆಯ್ಕೆ ಸಿಗಲಿಲ್ಲ. ಅಲ್ಲದೆ, ನಾನು ಕ್ಯಾಮೆರಾ ಮುಂದೆ ಬಹಳ ನೈಸ್, ಒಳ್ಳೆಯಳು. ಆದರೆ ವೈಯಕ್ತಿಕವಾಗಿಯೂ ನಾನು ಹೀಗೆ ಎಂದೇನಿಲ್ಲ. ನನ್ನಲ್ಲೂ ಕೆಲವು ಕೊರತೆಗಳು ಇವೆ. ಸಣ್ಣ ವಿಷಯಕ್ಕೆ ಇರಿಟೇಟ್ ಆಗುವುದು, ಬೇಸರ ಮಾಡಿಕೊಳ್ಳುವುದು, ಕಿರುಚಾಡುವುದು ಇದ್ದದ್ದೆ, ಅದು ಎಲ್ಲರಲ್ಲೂ ಇರುತ್ತೆ, ನನ್ನಲ್ಲೂ ಇದೆ. ಅದು ಬೇರೆಯವರಿಗೆ ಇಷ್ಟವಾಗದೇ ಹೋಗಬಹುದು. ಇದೂ ಒಂದು ಕಾರಣ ಆಗಿರಬಹುದು'' ಎಂದಿದ್ದಾರೆ ಭಾವನಾ.

ಸಂಬಂಧದಲ್ಲಿ ಸಿಲುಕುವುದು ಕಷ್ಟ ಎನಿಸುತ್ತದೆ: ಭಾವನಾ
''ನಾನು ಎಲ್ಲದರಲ್ಲೂ, ಎಲ್ಲ ವ್ಯಕ್ತಿಗಳಲ್ಲಿಯೂ ಫರ್ಪೆಕ್ಷನ್ ನೋಡುತ್ತೇನೆ. ವ್ಯಕ್ತಿ ಎಲ್ಲ ವಿಷಯದಲ್ಲಿಯೂ ಫರ್ಪೆಕ್ಟ್ ಆಗಿರಬೇಕು ಎಂದು ನಿರೀಕ್ಷಿಸುತ್ತೇನೆ. ಅಂಥಹವರು ನನಗೆ ಯಾರೂ ಸಿಗಲಿಲ್ಲ. ಸಂಬಂಧದಲ್ಲಿರುವುದು ಒಮ್ಮೊಮ್ಮೆ ಕಟ್ಟಿಹಾಕಿದ ಹಾಗೆ ಅನ್ನಿಸುತ್ತದೆ ಆ ಭಾವ ನನಗೆ ಇಷ್ಟವಾಗುವುದಿಲ್ಲ. ನನಗೆ ಸ್ವತಂತ್ರ್ಯವಾಗಿ ಬದುಕುವುದು ಬಹಳ ಇಷ್ಟ. ಒಬ್ಬಳೇ ಇರುವುದು ಇಷ್ಟ, ನಾನು ಸಿಂಗಲ್ ಆಗಿರಲು ಇದೂ ಸಹ ಕಾರಣ ಇರಬಹುದು'' ಎಂದಿದ್ದಾರೆ ನಟಿ ಭಾವನಾ.

ಅಡ್ಜಸ್ಟ್ ಆಗ್ತೀನೊ ಇಲ್ವೊ ಎಂಬ ಅನುಮಾನ
''ನಾನು ಬೇರೊಬ್ಬರಿಗೆ ಅಡ್ಜಸ್ಟ್ ಆಗ್ತೀನೋ ಇಲ್ವೋ ಎಂಬುದೇ ನನಗೆ ಅನುಮಾನ. ನನಗೆ ಸೋಮಾರಿಯಾಗಿರುವವರು, ಶಿಸ್ತಿಲ್ಲದೇ ಇರುವವರೆಂದರೆ ಆಗುವುದಿಲ್ಲ. ಜಗಳ ಮಾಡಿಬಿಡುತ್ತೇನೆ. ಭಾರತದ ಮಹಿಳೆಯರಲ್ಲಿ ದೊಡ್ಡ ಮಟ್ಟಿನ ಸಹನೆ ಇದೆ. ಅದು ನನಗೆ ಇಲ್ಲ. ಮನೆಯಲ್ಲಿ ಅಶಿಸ್ತನ್ನು ನನಗೆ ಸಹಿಸಲಾಗುವುದಿಲ್ಲ. ಇವುಗಳ ಜೊತೆಗೆ ಈಗಿನ ಪುರುಷರಿಗೆ ಮಹಿಳೆ ಸಮಾನಳು ಎಂಬ ಭಾವನೆ ಇದೆ. ಆದರೆ ಮೊದಲು ಹೀಗಿರಲಿಲ್ಲ. ಇದೂ ಸಹ ನಾನು ಮದುವೆ ಆಗದೇ ಇರಲು ಕಾರಣ ಇರಬಹುದು'' ಎಂದಿದ್ದಾರೆ ನಟಿ ಭಾವನಾ.

ಕಮ್‌ಬ್ಯಾಕ್ ಮಾಡುತ್ತಿರುವ ಭಾವನಾ
ಸಿನಿಮಾಕ್ಕೆ ಕಮ್‌ಬ್ಯಾಕ್ ಮಾಡುವ ಬಗ್ಗೆ ಮಾತನಾಡಿರುವ ಭಾವನಾ, 'ಒನ್ಸಪಾನ್ ಅ ಟೈಮ್ ಇನ್ ಜಮಾಲಿಗುಡ್ಡಿ' ಸಿನಿಮಾದ ಮೂಲಕ ಭಾವನಾ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಅದರ ಬಳಿಕ ಇನ್ನೂ ಕೆಲವು ಸಿನಿಮಾ ತಂಡಗಳ ಜೊತೆ ಮಾತುಕತೆ ನಡೆಯುತ್ತಿದೆಯಂತೆ. ತಾವೇ ಒಂದು ನಿರ್ಮಾಣ ಸಂಸ್ಥೆ ಕಟ್ಟು ಆಲೋಚನೆಯೂ ಭಾವನಾ ಅವರಿಗಿದೆ. ಇವುಗಳ ನಡುವೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಕ್ಕರೆ ಚುನಾವಣೆಗೆ ನಿಲ್ಲುವುದು ಇಲ್ಲದೇ ಹೋದರೆ ಪಕ್ಷ ಹೇಳಿದಂತೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವುದು ಮಾಡುವೆ ಎಂದಿದ್ದಾರೆ ನಟಿ ಭಾವನಾ.