'ಜಾಕಿ' ಭಾವನಾ ಮದುವೆ ಆಗ್ತಿರೋದು ಯಾರನ್ನ ಅಂತ ನಿಮಗೆ ಗೊತ್ತಾ?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ 'ಜಾಕಿ' ಚಿತ್ರದಲ್ಲಿ ನಟಿಸಿದ್ದ ಮಲ್ಲು ಕುಟ್ಟಿ ಭಾವನಾ ಸ್ಯಾಂಡಲ್ ವುಡ್ ನಲ್ಲಿ 'ಜಾಕಿ' ಭಾವನಾ ಅಂತಲೇ ಫೇಮಸ್.
ಹರೆಯದ ಹುಡುಗರ ಅಚ್ಚುಮೆಚ್ಚಿನ 'ಜಾಕಿ' ಭಾವನಾ ಇದೀಗ ಅದೇ ಹುಡುಗರಿಗೆ ಹಾರ್ಟ್ ಬ್ರೇಕ್ ಆಗುವ ನ್ಯೂಸ್ ಕೊಟ್ಟಿದ್ದಾರೆ. ಸದ್ಯದಲ್ಲೇ ನಟಿ ಭಾವನಾ ಮದುವೆ ಆಗಲಿದ್ದಾರೆ. ಹಾಗಂತ ಇದು ಜಸ್ಟ್ ಗಾಸಿಪ್ ಅಂತ ಮೂಗು ಮುರಿಯಬೇಡಿ. [ಜಾತಕದ ಪ್ರಕಾರ ಮಲ್ಲು ಬೆಡಗಿ ಭಾವನಾ ಮದುವೆ]
ಈ ವರ್ಷದ ಅಂತ್ಯದೊಳಗೆ ಹಸೆಮಣೆ ಏರುವುದು ಖಚಿತ ಅಂತ ಖುದ್ದು ಭಾವನಾ ಬಾಯ್ಬಿಟ್ಟಿದ್ದಾರೆ. ಮುಂದೆ ಓದಿ....

ಹಾರ್ಟ್ ಬ್ರೇಕಿಂಗ್ ನ್ಯೂಸ್!
ಇದೇ ವರ್ಷ ಮದುವೆ ಆಗುವುದಾಗಿ ನಟಿ ಭಾವನಾ ಸಂದರ್ಶನವೊಂದರಲ್ಲಿ ಬಾಯ್ಬಿಟ್ಟಿದ್ದಾರೆ. ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ, ನಟಿ ಭಾವನಾರದ್ದು ಲವ್ ಮ್ಯಾರೇಜ್.! ಹಾಗಾದ್ರೆ, ನಟಿ ಭಾವನಾರನ್ನ ಕೈಹಿಡಿಯಲಿರುವ ಗಂಡು ಯಾರು? ಈ ಪ್ರಶ್ನೆಗೆ ಉತ್ತರ ತಿಳಿಯಲು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

ಕನ್ನಡದ ಹುಡುಗ!
ಅಚ್ಚರಿ ಅನಿಸಿದರೂ ಇದೇ ಸತ್ಯ. ಕನ್ನಡ ಚಿತ್ರರಂಗದ ಯುವ ನಿರ್ಮಾಪಕರೊಬ್ಬರನ್ನ ನಟಿ ಭಾವನಾ ವಿವಾಹವಾಗಲಿದ್ದಾರೆ. [ಫಿಲಂ ಮೇಕರ್ ಜತೆ ಮಲ್ಲು ಬೆಡಗಿ ಭಾವನಾ ಮದುವೆ]

ಯಾರು ಆ ನಿರ್ಮಾಪಕ?
ಈ ಬಗ್ಗೆ ನಟಿ ಭಾವನಾ ತುಟಿಕ್ ಪಿಟಿಕ್ ಅಂದಿಲ್ಲ. ಕನ್ನಡ ಚಿತ್ರರಂಗದ ನಿರ್ಮಾಪಕರನ್ನ ಮದುವೆ ಆಗ್ತಿದ್ದೀನಿ ಅಂತ ಭಾವನಾ ಹೇಳಿದ್ದಾರೆ ಹೊರತು ಅವರು ಯಾರು ಎನ್ನುವ ಕ್ಲೂ ಬಿಟ್ಟುಕೊಟ್ಟಿಲ್ಲ.

ಲವ್ ಮ್ಯಾರೇಜ್!
ನಟಿ ಭಾವನಾ ಹಾಗೂ ಆ ನಿರ್ಮಾಪಕರು ಬಹುಕಾಲದಿಂದ ಲವರ್ಸ್.! ಹಾಗ್ನೋಡಿದರೆ, 2014 ರಲ್ಲಿ ಇಬ್ಬರು ಮದುವೆ ಆಗ್ಬೇಕಿತ್ತು. ಆದ್ರೆ, ಚಿತ್ರಗಳಿಗೆ ಭಾವನಾ ಕಮಿಟ್ ಆಗಿದ್ದ ಕಾರಣ ಮದುವೆಯನ್ನ ಮುಂದೂಡಿದ್ದರಂತೆ.

ಇಂಟ್ರೆಸ್ಟಿಂಗ್ ಸಂಗತಿ!
ನಟಿ ಭಾವನಾ ಕನ್ನಡದಲ್ಲಿ ನಟಿಸಿರುವ ಚಿತ್ರವೊಂದಕ್ಕೆ ಅವರ ಭಾವಿ ಪತಿ ನಿರ್ಮಾಪಕರಾಗಿದ್ದರಂತೆ. ಈ ಸಂಗತಿ ಕೇಳಿ ಯಾರವರು? ಅಂತ ನಮ್ಮ ಗಾಂಧಿನಗರದ ಮಂದಿ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.

ಯಾವ್ಯಾವ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದರು?
ಪುನೀತ್ ರಾಜ್ ಕುಮಾರ್ ಅಭಿನಯದ 'ಜಾಕಿ', 'ಯಾರೇ ಕೂಗಾಡಲಿ' ಮತ್ತು 'ಮೈತ್ರಿ', ಕಿಚ್ಚ ಸುದೀಪ್ ಅಭಿನಯದ 'ವಿಷ್ಣುವರ್ಧನ' ಮತ್ತು 'ಬಚ್ಚನ್', ಗಣೇಶ್ ರವರ 'ರೋಮಿಯೋ' ಹಾಗೂ ಉಪೇಂದ್ರ ಅಭಿನಯದ 'ಟೋಪಿವಾಲಾ' ಚಿತ್ರಗಳಲ್ಲಿ ಭಾವನಾ ಅಭಿನಯಿಸಿದ್ದರು.

ಸಂದರ್ಶನದಲ್ಲಿ ಬಾಯ್ಬಿಟ್ಟ ತಾರೆ.!
ತಾವು ನಟಿಸಿರುವ ಹೊಸ ಸಿನಿಮಾ 'ಹಲೋ ನಮಸ್ತೆ' ಪ್ರಚಾರದ ನಿಮಿತ್ತ ಮಲೆಯಾಳಂನ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಮದುವೆ ವಿಚಾರವನ್ನ ಬಾಯ್ಬಿಟ್ಟಿದ್ದಾರೆ ನಟಿ ಭಾವನಾ.


Click it and Unblock the Notifications











